ಇಂಗ್ಲೆಂಡ್ ವಿಕೆಟ್ ಕೀಪರ್ ಆಮಿ ಜೋನ್ಸ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ್ತಿ ಪೈಪಾ ಕ್ಲಿಯರಿ ನಡುವೆ ಹುಟ್ಟಿಕೊಂಡ ಪ್ರೀತಿಯಿದು. ಸದ್ಯ ಇವರಿಬ್ಬರ ನಡುವಿನ ಪ್ರೀತಿ ಎರಡು ದೇಶಗಳ ಸಂಬಂಧವನ್ನು ಬೆಸೆದಿದೆ. ಅದರಲ್ಲೂ ಗಡಿಯಾಚೆಗಿನ ಸಂಬಂಧವನ್ನು ಮೀರಿಸಿದೆ.
ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೆ ಭಾಷೆಯಿಲ್ಲ. ಪ್ರೀತಿ ಗಡಿಯನ್ನು ಮೀರಿದ ಬಂಧ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೀಗ ಮತ್ತೊಂದು ಉದಾಹರಣೆ ಎಂಬಂತೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್ ಕ್ರಿಕೆಟಿಗರಿಬ್ಬರು ಪ್ರೀತಿಯ ಮೂಲಕ ಒಂದಾಗಿದ್ದಾರೆ. ಅಂದಹಾಗೆಯೇ ಇದು ಸಲಿಂಗಿ ಪ್ರೀತಿ.
ಪ್ರೀತಿಸುತ್ತಿದ್ದ ಆಮಿ ಜೋನ್ಸ್ ಮತ್ತು ಪೈಪಾ ಕ್ಲಿಯರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಂಗುರಗಳನ್ನು ಬದಲಾಯಿಸಿಕೊಂಡು ನಾನು-ನೀನು ಜೋಡಿ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರವನ್ನು ಘೋಷಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಇಂಗ್ಲೆಂಡ್ನ ವಿಕೆಟ್ ಕೀಪರ್ ಆಮಿ ಜೋನ್ಸ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ್ತಿ ಪೈಪಾ ಕ್ಲಿಯರಿ ಪೆÇೀಸ್ಟ್ ಹಂಚಿಕೊಂಡಿದ್ದಾರೆ. ಷಾಂಪೇನ್ ತುಂಬಿದ ಗ್ಲಾಸ್ ಹಿಡಿದುಕೊಂಡು ಚಿಯರ್ಸ್ ಟು ಫಾರೆವರ್ ಎಂದು ಬರೆದುಕೊಂಡಿದ್ದಾರೆ.