ಗುಂಡ್ಲುಪೇಟೆ: ಬಂಡೀಪುರದ ಕೆರೆ ಬಳಿ ಕಾಡೆಮ್ಮೆ ಬೇಟೆಯಾಡಿ ತಿನ್ನುತ್ತಿದ್ದು, ಪ್ರವಾಸಿಗರು ಎದುರಾದರೂ ಯಾವುದಕ್ಕೂ ಕೇರ್ ಮಾಡದೇ ಹಸಿವು ನೀಗಿಸಿಕೊಂಡಿದೆ. ಸಫಾರಿಗರ ಸದ್ದಿಗೆ ಸಫಾರಿಯಲ್ಲಿ ಪ್ರವಾಸಿಗರ ಕಣ್ಣಿಗೆ ಹುಲಿರಾಯ ರಸದೌತಣ ನೀಡಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.
ಚಾಮರಾಜನಗರ ಜುಲ್ಲೆಯಲ್ಲಿ ಕಾಡುಪ್ರಾಣಿಳ ಹಾವಳಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಾಗೆಯೇ ಇದೀಗ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಭರ್ಜರಿ ಬೇಟೆ ಆಡಿ ಪ್ರವಾಸಿಗರ ಮುಂದೆ ಕಾಡೆಮ್ಮೆಯನ್ನು ಚಪ್ಪರಿಸಿ ತಿಂದಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಹಚ್ಚ ಹಸಿರಿನ ಹುಲ್ಲಿನ ಮೇಲೆ ವಿರಾಜಮಾನವಾದ ವ್ಯಾಘ್ರ ಕಾಡೆಮ್ಮೆಯ ಮಾಂಸವನ್ನು ಕಿತ್ತು ತಿನ್ನುತ್ತಿರುವ ರೋಮಾಂಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.