ದೆಹಲಿ:- ದೆಹಲಿ ಮೆಟ್ರೋದಲ್ಲಿ ಸಂಚಾರವನ್ನು ನಡೆಸಿದರು. ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಸಂಚಾರ ನಡೆಸಬೇಕು ಎಂಬುದು ನನ್ನ ಕನಸಾಗಿತ್ತು. ಅದು ಇಂದು ಪೂರ್ಣವಾಯಿತು ಎಂದು ಎಚ್.ಡಿ. ದೇವೇಗೌಡರು ಪೆÇೀಸ್ಟ್ನಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹಲವು ವರ್ಷಗಳ ಕನಸು ಇಂದು ನನಸಾಗಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಹಾಕಿದ್ದಾರೆ.
ದೇವೇಗೌಡರು ಲೋಕ ಕಲ್ಯಾಣ್ ಮಾರ್ಗ ನಿಲ್ದಾಣದಿಂದ ಮೆಟ್ರೋದಲ್ಲಿ ಸಂಚಾರ ನಡೆಸಿದರು. ದೆಹಲಿ ಮೆಟ್ರೋದ ಅಧಿಕಾರಿಗಳು, ಮೂಲ ಸೌಕರ್ಯ ವಿಭಾಗದ ನಿರ್ದೇಶಕ ಮನೋಜ್ ಸಿಂಘಲ್ ಮತ್ತು ಇತರ ಸಿಬ್ಬಂದಿ ದೇವೇಗೌಡರ ಜೊತೆ ಪ್ರಯಾಣಿಸಿದರು.
ಎಚ್. ಡಿ. ದೇವೇಗೌಡರ ಜೊತೆ ಪುತ್ರಿ ಅನಸೂಯ ಮಂಜುನಾಥ್ ಸಹ ಪ್ರಯಾಣಿಸಿದರು. ಮೆಟ್ರೋ ಪ್ರಯಾಣದ ಬಳಿಕ ದೇವೇಗೌಡರು ದೆಹಲಿ ಮೆಟ್ರೋದ ಅಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಸಿಬ್ಬಂದಿ ಜೊತೆ ಫೆÇೀಟೋ ತೆಗೆಸಿಕೊಂಡು ಅದನ್ನು ಟ್ವೀಟ್ ಮಾಡಿದ್ದಾರೆ.
ಯೋಜನೆಗೆ ಚಾಲನೆ: ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಟ್ವೀಟ್ನಲ್ಲಿ, ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು, ಅದು ಇಂದು ನೆರವೇರಿತು. ನಾನು 1996ರಲ್ಲಿ ಪ್ರಧಾನ ಮಂತ್ರಿಯಾಗಿದ್ದಾಗ ನನ್ನ ಸಂಪುಟ ಮತ್ತು ಹೊರಗಿನ ಪ್ರತಿರೋಧದ ನಡುವೆಯೂ ಯೋಜನೆಗೆ ಆರ್ಥಿಕ ಸಹಕಾರ ನೀಡಿದ್ದೆ. ಆಗ ನನಗೆ ಇಂತಹ ನಿರ್ಧಾರ ಕೈಗೊಳ್ಳಲು ಧೈರ್ಯ ನೀಡಿದ್ದಕ್ಕೆ ದೇವರಿಗೆ ಋಣಿಯಾಗಿದ್ದೇನೆ, ಇದರಿಂದ ಜನರಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.