ಮೈಸೂರು: ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಹೋರಾಟ ನಿಲ್ಲುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬರೀ ಕನಸಷ್ಟೇ ಎಂದು ಎಂಎಲ್ಸಿ ಡಾ.ಯತೀಂದ್ರ ಟಾಂಗ್ ನೀಡಿದರು.
ನಾವು ಪ್ರಜಾಪ್ರಭುತ್ವದ ಅಡಿಯಲ್ಲಿ ಜನಾದೇಶದಿಂದ ಆಯ್ಕೆ ಆಗಿರುವವರು. ಇವರ ಕುತಂತ್ರಗಳು ನಡೆಯುವುದಿಲ್ಲ. ಈ ಹಿಂದೆಯೂ ಸಿದ್ದರಾಮಯ್ಯ ವಿರುದ್ಧ ಕುತಂತ್ರ ಮಾಡಿದ್ದಾರೆ. ಈಗಲೂ ಅದೇ ರೀತಿ ಮಾಡಲು ಹೊರಟಿದ್ದಾರೆ. ಮಹಾರಾಷ್ಟ್ರ, ದೆಹಲಿಯಲ್ಲೂ ಅದನ್ನೇ ಮಾಡಿರೋದು ಎಂದು ಹರಿಹಾಯ್ದರು.
ಆ.9ರಂದು ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ರಾಜ್ಯಮಟ್ಟದ ಎಲ್ಲಾ ನಾಯಕರು ಬರುತ್ತಾರೆ. ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.