ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂ. ಹಗರಣವನ್ನು ಸಿಬಿಐ ತನಿಖೆಗೆವಹಿಸಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಕರ್ನಾಟಕ ಸೇನಾಪಡೆ ಮನವಿ ಮಾಡಿದೆ.ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದ ಸೇನಾಪಡೆ ಕಾರ್ಯಕರ್ತರು ಆಡಳಿತ ಪಕ್ಷವಾದ ಕಾಂಗ್ರೆಸ್ ನ ಜನಾಂದೋಲನ ಹಾಗೂ ವಿರೋಧ ಪಕ್ಷದ ಮೈಸೂರು ಚಲೋ ಪಾದಯಾತ್ರೆಯ ದೊಂಬರಾಟ ನಿಲ್ಲಿಸುವಂತೆ ಒತ್ತಾಯಿಸಿದರು. ಮೂರು ಪಕ್ಷಗಳ ರಾಜಕೀಯ ಕೆಸರೆರಚಾಟ ನೋಡಿ ರಾಜ್ಯದ ಜನತೆಗೆ ಬೇಸರವಾಗಿದೆ ಎಂದರು.ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ರಾಜ್ಯ ಸರ್ಕಾರಕ್ಕೆ ವಾಲ್ಮೀಕಿ ಸಮುದಾಯದ ಹಗರಣ ಹಾಗೂ ಮುಡಾ ಹಗರಣ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಹೋಗಿಸಿದೆ. ರಾಜ್ಯದ ಅತಿ ದೊಡ್ಡ ಹಗರಣಗಳಲ್ಲೊಂದಾಗಿದೆ. ಒಂದು ಕಡೆ ಸುಮಾರು 80ಮಂದಿ ಮುಡಾ ನಿವೇಶನಕ್ಕಾಗಿ ಕಾದು ಕುಳಿತಿದ್ದಾರೆ. ಇತ್ತ ಸರ್ಕಾರ ಹಾಗೂ ಮುಡಾ ಅಧಿಕಾರಿಗಳು ತಮ್ಮಿಷ್ಟದಂತೆ ಕಾನೂನು ಬಾಹಿರವಾಗಿ ನಿವೇಶನಗಳ ಹಂಚಿಕೆ ಮಾಡಿದ್ದಾರೆಂದರು.ನಗರಾಭಿವೃದ್ಧಿ ಸಚಿವರು ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ರನ್ನು ಅಮಾನತು ಮಾಡಿ, ವಿಚಾರಣೆಗೊಳಪಡಿಸದೆ, ರಾಜ ಮರ್ಯಾದೆಯಿಂದ ವರ್ಗಾವಣೆ ಮಾಡಿ ಕಳಿಸಿರುವುದು ನಿಜಕ್ಕೂ ಖಂಡನೀಯ. ಈ ಪ್ರಕರಣ ಬೆಳಕಿಗೆ ಬಂದು ಎರಡು ತಿಂಗಳೆ ಕಳೆದರೂ, ಇನ್ನೂ ಇದರ ಬಗ್ಗೆ ಕ್ರಮ ವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ಪಕ್ರರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.ಈಗಾಗಲೇ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ರಾಜ್ಯಪಾಲರು ಈ ಕೂಡಲೇ 5000 ಕೋಟಿ ಹಗರಣ ನಡೆದಿರುವ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕನ್ನಡಿಗರ ಪರವಾಗಿ ಒತ್ತಾಯಿಸುತ್ತಿದ್ದೇವೆಂದರು.ಪ್ರತಿಭಟನೆಯಲ್ಲಿ ಸುರೇಶ್ ಗೋಲ್ಡ್, ಪ್ರಭುಶಂಕರ್ ಎಂ.ಬಿ.ಶಿವಲಿಂಗಯ್ಯ, ಕುಮಾರ್ ಗೌಡ, ವರಕೂಡು ಕೃಷ್ಣೇಗೌಡ, ನಾಗರಾಜ್, ಮಂಜುಳಾ, ಪ್ರಜೀಶ್ ಪಿ, ಸಿಂದುವಳ್ಳಿ ಶಿವಕುಮಾರ್, ಭಾಗ್ಯಮ್ಮ, ವಿ.ಮಹದೇವ್ ಪಡುವಾರಳ್ಳಿ, ಗೀತಾಗೌಡ, ಬೋಗಾದಿ ಸಿದ್ದೇಗೌಡ,, ಡಾ.ರಾಮಕೃಷ್ಣೇಗೌಡ, ಬೇಬಿರತ್ನ ಜಾಧವ್, ಪ್ರದೀಪ, ರಾಧಾಕೃಷ್ಣ, ಹನುಮಂತಯ್ಯ, ಸುಬ್ಬೇಗೌಡ, ರಮೇಶ್, ರಘು ಅರಸ್, ಕೆ.ಸಿ.ಗುರುಮಲ್ಲಪ್ಪ, ಕುಮಾರ್, ಗಣೇಶ್ ಪ್ರಸಾದ್, ಚಂದ್ರಶೇಖರ್, ಪ್ರಭಾಕರ್, ರವಿನಾಯಕ್ ಹಾಗೂ ವಿಷ್ಣು ಉಪಸ್ಥಿತರಿದ್ದರು.