ಹನೂರು:- ಸ್ಥಳೀಯ ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಯ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕಿದ್ದರೂ ಕಾಂಗ್ರೆಸ್ ಆಡಳಿತ ಕಾಲದ ಕಳೆದ ಭಾರಿಯಂತೆ ಈ ಭಾರಿ ಜೆಡಿಎಸ್ ಅಧಿಕಾರದಿಂದ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಮಾಜಿ ಶಾಸಕ ನರೇಂದ್ರರ ಹಳೆಯ ಹಾದಿಯಲ್ಲಿಯೇ ನೆಡೆದ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ದಲಿತ ಸದಸ್ಯರಿಗೆ ಮನ್ನಣೆ ನೀಡದೆ ದಲಿತರನ್ನು ಕಡೆ ಗಣಿಸಿದ್ದಾರೆ.
2016-19 ರ ಸಾಲಿನ ಅವಧಿಯ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಪ.ಪಂ.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದರೂ ಕೂಡ ದಲಿತರಿಗೆ ಮನ್ನಣೆ ನೀಡುವ ಮಹದಾಸೆಯಿಂದ ಮಾಜಿ ಶಾಸಕ ನರೇಂದ್ರರವರು ನಿಯಮ ಮೀರಿ ದಲಿತರಿಗೆ ಉಪಾಧ್ಯಕ್ಷ ಸ್ಥಾನ ಕಲ್ಪಿಸುವ ಔಧಾರ್ಯ ತೋರಿದ್ದರು.ಅದೇ ರೀತಿ ಈ ಭಾರಿಯ ಚುನಾವಣೆಯಲ್ಲಿ ಪ್ರಸ್ತುತ ಶಾಸಕ ಎಂ.ಆರ್. ಮಂಜುನಾಥ್ ಅವರು ಅದೇ ರೀತಿ ಸಾಮಾನ್ಯ ಉಪಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡುವರೆಂಬ ವಿಶ್ವಾಸ ಹುಸಿಯಾಗಿರುವುದು ಜೆಡಿಎಸ್ ವಲಯದಲ್ಲಿ ಜಾತಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಚರ್ಚೆಗೆ ಗ್ರಾಸವಾಗಿದೆ.2019 ರಲ್ಲಿ ನಡೆದ ಪ.ಪಂ.ಚುನಾವಣೆಯಲ್ಲಿ 11ನೇ ವಾರ್ಡನ ಸ್ಥಾನ ಎಸ್.ಸಿ.ಗೆ ಮೀಸಲಿದ್ದು ಪ್ರಬಲ ಆಕಾಂಕ್ಷಿಯಾಗಿದ್ದ ದಲಿತ ಮುಖಂಡ ಪ್ರಸನ್ನ ಕುಮಾರ್ ಗೆ ಜೆಡಿಎಸ್ ಟಿಕೆಟ್ ತಪ್ಪಿಸಿ ಲಂಬಾಣಿ ಜನಾಂಗದ ಮಹದೇವ್ ಗೆ ನೀಡಿದ್ದ ರೀತಿ ಈ ಭಾರಿಯ ಸಾಮಾನ್ಯ ಉಪಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ದೊರೆಯುವ ಶಾಸಕ ಮಂಜುನಾಥ್ ತಮ್ಮ ಅಧಿಕಾರ ಅಸ್ತ್ರಗಳನ್ನು ಬಳಸಿಕೊಂಡಿದ್ದಾರೆ.ಹನೂರು ವಿಧಾನಸಭಾ ಕ್ಷೇತ್ರದ 2019ರಲ್ಲಿ ಚುನಾವಣೆಯಲ್ಲಿ ಬಿ.ಎಸ್.ಪಿ.ಮತ್ತು ಜೆ.ಡಿ.ಎಸ್ ಮೈತ್ರಿ ಆಗಿದ್ದ ಕಾರಣ ಎಂ ಆರ್ ಮಂಜುನಾಥ್ ಅವರಿಗೆ ಎಸ್ಸಿ ಮತಗಳು ಅಂದರೆ ದಲಿತ ಮತಗಳು 43000 ಮತಗಳು ಮೂರನೇ ಸ್ಥಾನಕ್ಕೆ ಬಂದಿದ್ದ ಮಂಜುನಾಥ್ ಅವರು ಈ ಬಾರಿ 2023ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ದಲಿತ ಮತಗಳಿಂದ ಜಯಭರಿ ಗಳಿಸಿದ ಶಾಸಕ ಮಂಜುನಾಥ ದಲಿತರಿಗೆ ಮಾನ್ಯತೆ ನೀಡದಿರುವುದು ದಲಿತರ ಕಡೆಗಣನೆಗೆ ಸಾಕ್ಷಿಯಾಗಿದೆ.