ನವದೆಹಲಿ:ಎಲ್ಲ ಕಳ್ಳರದ್ದೂ ಮೋದಿ ಉಪನಾಮ ಎಂಬ ಟೀಕೆ ಮಾಡಿದ್ದ ರಾಹುಲ್ಗಾಂಧಿ ಅವರನ್ನು ದೋಷಿ ಎಂದು ಗುಜರಾತ್ನ ಸೂರತ್ನ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿ, ಎರಡು ವರ್ಷದ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ, ಹಾಗೆಯೇ, ರಾಹುಲ್ಗಾಂಧಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ.
ರಾಹುಲ್ಗಾಂಧಿ ಅವರಿಗೆ ನ್ಯಾಯಾಲಯ ಸೆಕ್ಷನ್ 499 ಮತ್ತು 504 ಅಡಿಯಲ್ಲಿ 2 ವರ್ಷದ ಕಾರಾಗೃಹ ಶಿಕ್ಷೆ ವಿಧಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ಒಂದು ತಿಂಗಳ ಕಾಲ ತೀರ್ಪು ಜಾರಿಗೆ ತಡೆಹಿಡಿಯುವುದಾಗಿಯೂ ನ್ಯಾಯಾಲಯ ಹೇಳಿ ಜಾಮೀನು ಮಂಜೂರು ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರು ಮೋದಿ ಉಪಮಾನದ ಬಗ್ಗೆ ಟೀಕೆ ಮಾಡಿದ್ದರು. ಈ ಸಂಬಂಧ ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮ್ಮೆಯನ್ನು ರಾಹುಲ್ಗಾಂಧಿ ವಿರುದ್ಧ ದಾಖಲಿಸಲಾಗಿತ್ತು.
ರಾಹುಲ್ಗಾಂಧಿ ಅವರ ಮೋದಿ ಉಪನಾಮ ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿ ರಾಹುಲ್ಗಾಂಧಿ ದೋಷಿ ಎಂದು ಹೇಳಿ ಅವರಿಗೆ 2 ವರ್ಷದ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು.
ರಾಹುಲ್ಗಾಂಧಿ ಅವರು 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುತ್ತಿದ್ದಾಗ ಎಲ್ಲ ಕಳ್ಳರು ಮೋದಿ ಎಂಬ ಸಾಮಾನ್ಯ ಎಂಬ ಉಪನಾಮ ಹೊಂದಿರುವುದು ಹೇಗೆ ಎಂದು ಪರೋಕ್ಷವಾಗಿ ದೇಶ ಬಿಟ್ಟು ಹೋಗಿರುವ ನೀರವ್ಮೋದಿ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ್ದರು. ರಾಹುಲ್ರವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿ ರಾಹುಲ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇವರ ಈ ಹೇಳಿಕೆ ಮೋದಿ ಉಪನಾಮ ಹೊಂದಿರುವವರಿಗೆ ಮಾಡಿದ ಅಪಮಾನ. ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರು ಎಂಬ ಅರ್ಥದಲ್ಲಿ ರಾಹುಲ್ಗಾಂಧಿ ಮಾತನಾಡಿದ್ದಾರೆ ಇದು ಸರಿಯಲ್ಲ, ಎಂದು ರಾಹುಲ್ಗಾಂಧಿ ವಿರುದ್ಧ ಹಲವು ನಾಯಕರುಗಳು ಹರಿಹಾಯ್ದಿದ್ದರು.
ದೇಶದಲ್ಲಿ ಮೋದಿ ಎಂಬುದು ಸಾಮಾನ್ಯ ಉಪನಾಮ, ರಾಹುಲ್ಗಾಂಧಿಯವರು ಮೋದಿ ಎಂಬ ಉಪನಾಮ ಹೊಂದಿರುವವರನ್ನೆಲ್ಲ ಕಳ್ಳರು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ, ಇದು ಸರಿಯಲ್ಲ, ಮೋದಿ ಎಂಬ ಉಪನಾಮ ಹೊಂದಿರುವವರಿಗೆ ಮಾನಹಾನಿಯಾಗಿದೆ ಎಂದು ಗುಜರಾತ್ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ
ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕ್ಕದ್ದಮ್ಮೆಯನ್ನು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಎಚ್ ವರ್ಮಾ ಕಳೆದವಾರ ವಾದ ಪ್ರತಿವಾದವನ್ನು ಆಲಿಸಿ ಮಾ. 23ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು. ಅದರಂತೆ ಇಂದು ತೀರ್ಪು ಪ್ರಕಟವಾಗಿದ್ದು, ರಾಹುಲ್ ಅವರನ್ನು ದೋಷಿ ಎಂದು ತೀರ್ಪಿನಲ್ಲಿ ಹೇಳಲಾಗಿದೆ.