ನಂಜನಗೂಡು:- ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಫರ್ನಿಚರ್ ಗೋಧಾಮು ಮತ್ತು ಅಂಗಡಿ ಬೆಂಕಿಗಾಹುತಿಯಾಗಿದೆ ಪರಿಣಾಮ ಲಕ್ಷಾಂತರ ರೂ ಮೌಲ್ಯದ ಬೆಲೆ ಬಳುವ ಸೋಫಾ ಸೆಟ್ಗಳು, ಡೈನಿಂಗ್ ಟೇಬಲ್, ಬಿರುಗಳು, ದಿವಾನ್ ಸೆಟ್, ಕಂಪ್ಯೂಟರ್ ಟೇಬಲ್ ಗಳು ಇತರೆ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿರುವ ಕರುಣಾಜನಕ ಘಟನೆ ನಂಜನಗೂಡು ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ ನಡೆದಿದೆ.
ಆದಿಕ್ ಪಾಷಾ ರವರಿಗೆ ಸೇರಿದ ಸಫಾ ಫರ್ನಿಚರ್ ಕಾರ್ಖಾನೆ, ಮಳಿಗೆ, ಮತ್ತು ಗೋಧಾಮುನಲ್ಲಿ ಬೆಂಕಿ ಅವಘಡ ಸಂಭವಿಸಿದೆ ರಂಜಾನ್ ಹಬ್ಬದ ಉಪವಾಸದ ಪ್ರಾರ್ಥನೆ ಮುಗಿಸಿ ಮಲಗಿದ್ದ ಸಂದರ್ಭದಲ್ಲಿ ತಡ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಮನೆಯ ಮುಂಭಾಗವಿರುವ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಬೆಂಕಿಯ ರಭಸಕ್ಕೆ ಸಿಲಿಂಡರ್ ಸ್ಫೋಟಗೊಂಡಿದ್ದು ಬೆಂಕಿಯ ಕೆನ್ನಾಲಿಗೆ 4 ದಿಕ್ಕುಗಳಲ್ಲಿ ಹರಡಿದೆ ಈ ಅವಘಡದಲ್ಲಿ ಸುಮಾರು 70,80 ಲಕ್ಷ ರೂ ಮೌಲ್ಯದ ಫರ್ನಿಚರ್ಗಳು, ಸೋಫಾ ಸೆಟ್ಗಳು, ಡೈನಿಂಗ್ ಟೇಬಲ್ ಗಳು, ಬೀರುಗಳು, ಕಾರ್ಖಾನೆಯ ಪರಿಕರಗಳು, ಗೋಧಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಬೆಲೆಬಾಳುವ ವಸ್ತುಗಳು ಸುಟ್ಟು ಬೂದಿಯಾಗಿದೆ.ಬೆಂಕಿ ನಂದಿಸಲು ಗ್ರಾಮಸ್ಥರು ಎಷ್ಟೇ ಶ್ರಮಪಟ್ಟರು ಬೆಂಕಿಯ ರಭಸವನ್ನು ಕಡಿಮೆಗೊಳಿಸಲು ಈ ಘಟನೆಯಿಂದ ವಿಚಲತಗೊಂಡಿರುವ ಕಾರ್ಖಾನೆಯ ಮಾಲೀಕರ ಕುಟುಂಬ ತಲೆ ಮೇಲೆ ಕೈ ಹೊತ್ತು ಕೂತಿದೆ.
ಅಗ್ನಿಶಾಮಕ ದಳ ಸಿಬ್ಬಂದಿ :- ವಿದ್ಯುತ್ ಸರಕೇಟ್ ಬೆಂಕಿ ಅನಾಹುತದ ಸುದ್ದಿ ತಿಳಿಯುತ್ತಿದ್ದಂತೆ ನಂಜನಗೂಡು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಅರಸಹಾಸ ಪಟ್ಟರು 3 ಅಗ್ನಿಶಾಮಕ ದಳದ ವಾಹನಗಳು ಸುಮಾರು 2 ಗಂಟೆಗಳ ಕಾಲ ಬೆಂಕಿಯ ಜೊತೆ ಹೋರಾಡಿ ಮುಂಜಾನೆ 5 ಗಂಟೆಗೆ ಅಭಿನಂದಿಸಲು ಯಶಸ್ವಿಯಾದರು ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಇಲ್ಲದೆ ಕೇವಲ ಪರಿಕರಗಳು ಮಾತ್ರ ಹಾನಿಯಾಗಿದೆ.