ಕ್ಯಾರೆಟ್ ಬಳಸಿ ಮಾಡಲಾಗುವ ಎಲ್ಲಾ ರೀತಿಯ ಸಿಹಿಯೂ ಅದ್ಭುತವಾದ ರುಚಿ ನೀಡುತ್ತದೆ. ಕ್ಯಾರೆಟ್ ಜ್ಯೂಸ್, ಕ್ಯಾರೆಟ್ ಹಲ್ವಾ ಹೆಚ್ಚಾಗಿ ನೀವು ಮನೆಯಲ್ಲಿ ಟ್ರೈ ಮಾಡಿ ನೋಡಿರುತ್ತೀರಿ. ಎಂದಾದರೂ ಕ್ಯಾರೆಟ್ ಖೀರ್ ಮಾಡಿ ನೋಡಿದ್ದೀರಾ? ಇಲ್ಲ ಎಂದರೆ ರುಚಿಕರ ಹಾಗೂ ಸಿಂಪಲ್ ಆದ ಈ ರೆಸಿಪಿಯನ್ನೂ ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಗೋಡಂಬಿ – 10
ಒಣ ದ್ರಾಕ್ಷಿ – 2 ಟೀಸ್ಪೂನ್
ತುರಿದ ಕ್ಯಾರೆಟ್ – ಒಂದೂವರೆ ಕಪ್
ಹಾಲು – 4 ಕಪ್
ಕೇಸರಿ – ಕಾಲು ಟೀಸ್ಪೂನ್
ಸಕ್ಕರೆ – ಕಾಲು ಕಪ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಪಿಸ್ತಾ – 2 ಟೀಸ್ಪೂನ್
ಖೋವಾ ತಯಾರಿಸಲು:
ಬೆಣ್ಣೆ – 1 ಟೀಸ್ಪೂನ್
ಹಾಲು – ಕಾಲು ಕಪ್
ಹಾಲಿನ ಪುಡಿ – ಅರ್ಧ ಕಪ್
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ.
* ಅದೇ ಕಡಾಯಿಗೆ ತುರಿದ ಕ್ಯಾರೆಟ್ ಹಾಕಿ ಚೆನ್ನಾಗಿ ಹುರಿಯಿರಿ. ಕ್ಯಾರೆಟ್ ಬಣ್ಣ ಬದಲಾಗುವವರೆಗೆ ಹಾಗೂ ಪರಿಮಳ ಬರುವವರೆಗೆ ಫ್ರೈ ಮಾಡಿ.
* ಈಗ ಹಾಲು, ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಹಾಲನ್ನು 10 ನಿಮಿಷ ಕುದಿಸಿ.
* ಈ ನಡುವೆ ನೀವು ಖೋವಾ ತಯಾರಿಸಿ. ಇದಕ್ಕಾಗಿ ಒಂದು ಸಣ್ಣ ಪ್ಯಾನ್ನಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಕಾಲು ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬೆಣ್ಣೆ ಹಾಗೂ ಹಾಲು ಚೆನ್ನಾಗಿ ಮಿಶ್ರಣವಾದ ಬಳಿ ಹಾಲಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆಯಂತಾದ ಬಳಿಕ ಅದನ್ನು ತಣ್ಣಗಾಗಿಸಲು ಬದಿಗಿಡಿ. ಇದೀಗ ಖೋವಾ ತಯಾರಾಗಿದೆ.
* ಈಗ ಖೋವಾವವನ್ನು ಪುಡಿ ಮಾಡಿ, ಹಾಲಿಗೆ (ಖೀರ್) ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಸಕ್ಕರೆ ಸೇರಿಸಿ ನಿಧಾನಕ್ಕೆ ಮಿಶ್ರಣ ಮಾಡಿ.
* ಇದನ್ನು 10 ನಿಮಿಷ ಕುದಿಸಿ, ಬಳಿಕ ಏಲಕ್ಕಿ ಪುಡಿ, ಹುರಿದಿಟ್ಟಿದ್ದ ಗೋಡಂಬಿ ಹಾಗೂ ಒಣ ದ್ರಾಕ್ಷಿ ಸೇರಿಸಿ.
* ಖೀರ್ ಅನ್ನು ತಣ್ಣಗಾಗಲು ಬಿಡಿ. ಬಳಿಕ ಪಿಸ್ತಾ ಸೇರಿಸಿ ರುಚಿಯಾದ ಕ್ಯಾರೆಟ್ ಖೀರ್ ಅನ್ನು ಸವಿಯಿರಿ.