ಚಾಮರಾಜನಗರ:- ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಓಪನ್ ಜೀಪ್ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ. ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮೋದಿ ಸಂಚರಿಸುತ್ತಿದ್ದಾರೆ.
ಸಫಾರಿ ವೇಳೆ ಹುಲಿ ಸೇರಿ ಇತರೆ ಪ್ರಾಣಿಗಳನ್ನು ಮೋದಿ ನೋಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಬಳಿಕ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರಕ್ಕೆ ಭೇಟಿ ಕೊಡುತ್ತಿದ್ದಾರೆ.
ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೇವಲ ಅಧಿಕಾರಿಗಳು ಮಾತ್ರ ಪ್ರಧಾನಿ ಜೊತೆಗಿದ್ದರು. ಪ್ರಧಾನಿ ಅವರು ಸಾಗುತ್ತಿದ್ದ ಕಾರಿನಲ್ಲೇ ಬಂಡೀಪುರದ ಸುತ್ತಮುತ್ತಲ ಗ್ರಾಮಸ್ಥರು ಮೋದಿಯವರನ್ನು ಕಣ್ತುಂಬಿಕೊಳ್ಳಬೇಕಾಯಿತು. ಆದರೆ, ಮೋದಿಯವರು ಬಂಡೀಪುರಕ್ಕೆ ಭೇಟಿ ನೀಡಿರುವುದು ಈ ಭಾಗದ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮೋದಿ ಸಂಚರಿಸಿ ಗಮನ ಸೆಳೆದರು. ಸಫಾರಿ ವೇಳೆ ಹುಲಿ ಸೇರಿ ಇತರೆ ಪ್ರಾಣಿಗಳನ್ನು ಮೋದಿ ವೀಕ್ಷಿಸಿದರು. ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಬಳಿಕ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರಕ್ಕೆ ಭೇಟಿ ನೀಡಿದರು.
ಕಳೆದ ರಾತ್ರಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 7.30ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್ಗೆ ಬಂದಿಳಿದರು.
ಅರಣ್ಯ ಇಲಾಖೆ ದಿರಿಸಿನಲ್ಲಿ ಮಿಂಚಿದ ನಮೋ.. ವಿಶೇಷ ಹೆಲಿಕಾಪ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಸಮವಸ್ತ್ರ ಹೋಲುವ ಟೀ ಶರ್ಟ್ ಅನ್ನು ಮೋದಿ ಧರಿಸುವ ಮೂಲಕ ಮಿಂಚಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೆÇಲೀಸರು ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಮೈಸೂರಿನಲ್ಲಿ ಹುಲಿ ಗಣತಿ ಅಂಕಿ-ಅಂಶ ಬಿಡುಗಡೆ ಮಾಡಲಿರುವ ಮೋದಿ, ಈ ಬಾರಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ1 ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ್ಯಾಂಕಿನಲ್ಲಿ ಬಂಡೀಪುರ ನಂ 1 ಸ್ಥಾನ ಗಳಿಸುವ ನಿರೀಕ್ಷೆ ಇದೆ.
ಎಲೆಕ್ಷನ್ ಎಫೆಕ್ಟ್: ಜನರ ಭಾಗಿಯಿಲ್ಲದ ಮೋದಿ ಬಂಡೀಪುರ ವಿಸಿಟ್!!
ಹೆದ್ದಾರಿ ಬಂದ್.. ಬಂಡೀಪುರಕ್ಕೆ ಬಂದಿಳಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ಣುಂಬಿಕೊಳ್ಳುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಜನರ ಪ್ರವೇಶವನ್ನು ಗುಂಡ್ಲುಪೇಟೆಯ ಊಟಿ ಗೇಟ್ನಲ್ಲೇ ತಡೆಯಲಾಯಿತು. ಮೋದಿ ಅವರು ಗುಂಡ್ಲುಪೇಟೆಗೆ ಬಂದರೂ ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರುತ್ತಿಲ್ಲ.
ಸುವರ್ಣ ಸಂಭ್ರಮದಲ್ಲಿ ಹುಲಿ ಸಂರಕ್ಷಿತ ಬಂಡೀಪುರ..
ಅವಸಾನದತ್ತ ಸಾಗಿದ್ದ ಹುಲಿ ಸಂತತಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1973 ರಲ್ಲಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಪ್ರಾಜೆಕ್ಟ್ ಟೈಗರ್ ಯೋಜನೆ ಆರಂಭಿಸಿದ್ದರು. ಅಂದು ಆರಂಭಗೊಂಡ ಹುಲಿ ರಕ್ಷಿತ ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದ್ದು, ಈಗ ಸುವರ್ಣ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಬಂಡೀಪುರಕ್ಕೆ ಭೇಟಿ ಕೊಡುತ್ತಿದ್ದಾರೆ.
ಮಧುಮಲೈನಲ್ಲಿ ಬೊಮ್ಮ- ಬೆಳ್ಳಿ ದಂಪತಿಗೆ ಸನ್ಮಾನ..
ಬಂಡೀಪುರ ವಲಯದಲ್ಲಿ ಸಫಾರಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಇಲ್ಲಿ ಆನೆ ಮರಿ ಉಳಿಸಿದ ಹಾಗೂ ಆಸ್ಕರ್ ಪಡೆದ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದ ಪಾತ್ರಧಾರಿಗಳಾದ ಬೊಮ್ಮ- ಬೆಳ್ಳಿ ದಂಪತಿಯನ್ನು ಸನ್ಮಾನಿಸಿದರು.
ಅಭಿವೃದ್ಧಿ ಮತ್ತು ವನ್ಯಜೀವಿ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದರೊಂದಿಗೆ ಆವಾಸಸ್ಥಾನಗಳ ವೈಜ್ಞಾನಿಕವಾಗಿ ಲೆಕ್ಕಾಚಾರದ ಸಾಗಿಸುವ ಸಾಮಥ್ರ್ಯದ ಆಧಾರದ ಮೇಲೆ ಕಾರ್ಯಸಾಧ್ಯವಾದ ಹುಲಿ ಜನಸಂಖ್ಯೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಭಾರತ ಹೊಂದಿದೆ ಎಂದು ಏಪ್ರಿಲ್ 1 ರಂದು 50 ವರ್ಷಗಳನ್ನು ಪೂರೈಸಿದ ‘ಪ್ರಾಜೆಕ್ಟ್ ಟೈಗರ್’ ಮುಖ್ಯಸ್ಥರು ಹೇಳಿದ್ದಾರೆ.
ಉತ್ತಮ ತಂತ್ರಜ್ಞಾನ ಮತ್ತು ಸಂರಕ್ಷಣಾ ಕಾರ್ಯವಿಧಾನಗಳಿಂದಾಗಿ ಹುಲಿ ಬೇಟೆಯಾಡುವಿಕೆಯು ಗಣನೀಯವಾಗಿ ಕಡಿಮೆಯಾಗಿದೆಯಾದರೂ, ಆವಾಸಸ್ಥಾನದ ವಿಘಟನೆ ಮತ್ತು ಅವನತಿಯ ಜೊತೆಗೆ ದೊಡ್ಡ ಬೆಕ್ಕುಗಳಿಗೆ ಇದು ಇನ್ನೂ ದೊಡ್ಡ ಬೆದರಿಕೆಯಾಗಿದೆ ಎಂದು ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ ಎಸ್ಪಿ ಯಾದವ್ ಹೇಳಿದ್ದಾರೆ.
ಹುಲಿ ಸಂರಕ್ಷಣೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ 1973 ಏಪ್ರಿಲ್ 1, ರಂದು ‘ಪ್ರಾಜೆಕ್ಟ್ ಟೈಗರ್’ ಅನ್ನು ಪ್ರಾರಂಭಿಸಿತು. ಆರಂಭದಲ್ಲಿ, ಇದು 18,278 ಚದರ ಕಿಲೋಮೀಟರ್ಗಳಷ್ಟು ಹರಡಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ. ಪ್ರಸ್ತುತ, 75,000 ಚದರ ಕಿ.ಮೀ (ದೇಶದ ಭೌಗೋಳಿಕ ಪ್ರದೇಶದ ಸರಿಸುಮಾರು 2.4 ಪ್ರತಿಶತ) ಕ್ಕಿಂತ ಹೆಚ್ಚು ವ್ಯಾಪಿಸಿರುವ 53 ಹುಲಿ ಸಂರಕ್ಷಿತ ಪ್ರದೇಶಗಳಿವೆ.
ದೇಶ ಸುಮಾರು 3,000 ಹುಲಿಗಳನ್ನು ಹೊಂದಿದೆ, ಜಾಗತಿಕ ಕಾಡು ಹುಲಿ ಜನಸಂಖ್ಯೆಯ ಶೇಕಡಾ 70 ಕ್ಕಿಂತ ಹೆಚ್ಚು, ಮತ್ತು ಸಂಖ್ಯೆಯು ವರ್ಷಕ್ಕೆ ಆರು ಶೇಕಡಾ ದರದಲ್ಲಿ ಹೆಚ್ಚುತ್ತಿದೆ.