ಮಂಡ್ಯ: ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು ನಾಗಮಂಗಲ ಕ್ಷೇತ್ರಕ್ಕೆ ಆಶ್ಚರ್ಯಕರ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ.ಮಾಜಿ ಶಾಸಕ,ಸಂಸದ ಎಲ್.ಆರ್.
ಶಿವರಾಮೇಗೌಡ ಅವರ ಪತ್ನಿ ಸುಧಾ ಶಿವರಾಮೇಗೌಡ ಅವರ ಹೆಸರು ಘೋಷಣೆ ಮಾಡಲಾಗಿದೆ.
ಕಳೆದ ವಾರವಷ್ಟೇ ಎಲ್.ಶಿವರಾಮೇ
ಗೌಡ ಹಾಗೂ ಅವರ ಪುತ್ರ ಚೇತನ್ ಗೌಡ ಬಿಜೆಪಿಗೆ ಸೇರ್ಪಡೆ
ಯಾಗಿದ್ದರು. ಎಲ್.ಆರ್.ಶಿವರಾಮೇಗೌಡ ಅವರೇ ಕಣಕ್ಕೆ ಇಳಿಯುತ್ತಾರೆ ಎಂದು ಬಿಂಬಿತವಾಗಿತ್ತು.ಆದರೆ, ಶಿವರಾಮೇಗೌಡ ಹಾಗೂ ಅವರ ಕುಟುಂಬ ಸದಸ್ಯರ ಮನವಿ ಮೇರೆಗೆ ಸುಧಾ ಶಿವರಾಮೇಗೌಡರ ಪತ್ನಿಯನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸುಧಾ ಅವರು ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ರಾಮಕೃಷ್ಣಪ್ಪ ಪುತ್ರಿಯಾಗಿದ್ದು ಅವರಿಗೆ ಉತ್ತಮ ಹೆಸರಿದೆ,ರಾಜಕೀಯ ಹಿನ್ನೆಲೆಯೂ ಇದೆ.ಮನೆಗೆ ಬಂದವರಿಗೆ ಊಟ ಹಾಕದೇ ಅವರು ಕಳುಹಿಸುವುದಿಲ್ಲ. ಕ್ಷೇತ್ರದ ಜನರು ಅವರನ್ನು ಅನ್ನಪೂರ್ಣೇಶ್ವರಿ ಎಂದೇ ಗುರುತಿಸುತ್ತಾರೆ.