ಮೇಷ ರಾಶಿ.
ಆಪ್ತರೊಂದಿಗೆ ಹಣದ ವಿಷಯವಾಗಿ ಭಿನಾಭಿಪ್ರಾಯಗಳು ಉಂಟಾಗುತ್ತವೆ . ವೃತ್ತಿಪರ ಕೆಲಸಗಳಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಬಹಳ ನಿಧಾನವಾಗಿ ಸಾಗುತ್ತವೆ. ದುಂದು ವೆಚ್ಚಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ವ್ಯಾಪಾರಗಳು ಮುಂದುವರೆಯದೆ ನಿರಾಶೆಯಾಗುತ್ತದೆ.ವಿದ್ಯಾರ್ಥಿಗಳು ಹೆಚ್ಚು ಶ್ರಮಿಸ ಪಡಬೇಕು.
ವೃಷಭ ರಾಶಿ.
ಆಕಸ್ಮಿಕವಾಗಿ ಆರ್ಥಿಕ ಲಾಭವಾಗಲಿದೆ.ವೃತ್ತಿ ವ್ಯವಹಾರದಲ್ಲಿ ಕಾರ್ಯಸಿದ್ದಿ ದೊರೆಯುತ್ತದೆ.ಮುಖ್ಯ ವ್ಯವಹಾರಗಳು ಸುಗಮವಾಗಿ ನಡೆದು ಸಮಾಜದಲ್ಲಿ ಪ್ರಾಮುಖ್ಯತೆ ಮೂಡಲಿದೆ. ಬಂಧುಬಳಗದಿಂದ ಅನಿರೀಕ್ಷಿತ ಆಹ್ವಾನಗಳು ಬರುತ್ತವೆ.ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ,ಪ್ರಶಂಸೆಗೆ ಪಾತ್ರಗುತ್ತೀರಿ.
ಮಿಥುನ ರಾಶಿ.
ಮನೆಯ ಹೊರಗೆ ಎಲ್ಲರಿಂದಲೂ ಅನಿರೀಕ್ಷಿತ ಮಾತುಗಳನ್ನು ಕೆಳಬೇಕಾಗುತ್ತದೆ. ಸಾಲದ ಒತ್ತಡದಿಂದ ಮುಕ್ತಿ ಹೊಂದಲು ಹೊಸ ಸಾಲ ಪಡೆಯುತ್ತೀರಿ. ಪ್ರಯಾಣವನ್ನು ಮುಂದೂಡುವುದು ಉತ್ತಮ.ಮಿತ್ರರೊಂದಿಗೆ ವಿನಾಕಾರಣ ಜಗಳಗಳು ಉಂಟಾಗುತ್ತವೆ. ವೃತ್ತಿಜೀವನವು ನಿರಾಶಾದಾಯಕವಾಗಿರುತ್ತದೆ.ಕೆಲಸದಲ್ಲಿ ಋಣನಾತ್ಮಕ ವಾತಾವರಣವಿರುತ್ತದೆ.
ಕಟಕ ರಾಶಿ.
ಆಪ್ತ ಸ್ನೇಹಿತರಿಂದ ಶುಭ ಆಹ್ವಾನಗಳು ಬರಲಿವೆ. ಸಮಾಜದಲ್ಲಿ ಹಿರಿಯರ ಬೆಂಬಲವನ್ನು ಪಡೆಯುತ್ತೀರಿ.ದೂರದ ಪ್ರಯಾಣವು ಲಾಭದಾಯಕವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.ವ್ಯಾಪಾರಗಳು ವಿಸ್ತರಿಸುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಸಮಯಕ್ಕೆ ತೆಗೆದುಕೊಳ್ಳಿತ್ತೀರಿ.
ಸಿಂಹ ರಾಶಿ.
ಕೌಟುಂಬಿಕ ವಾತಾವರಣ ಕಿರಿಕಿರಿ ಉಂಟು ಮಾಡುತ್ತದೆ.ಕೆಲವು ವಿಷಯಗಳಲ್ಲಿ ಬಂಧುಗಳು ನಿಮ್ಮೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರುತ್ತಾರೆ.ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವುದು. ದೂರ ಪ್ರಯಾಣವನ್ನು ಮುಂದೂಡಲಾಗುವುದು. ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗುತ್ತದೆ ಮತ್ತು ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲ ಉಂಟಾಗುತ್ತದೆ.
ಕನ್ಯಾ ರಾಶಿ.
ಅಗತ್ಯಕ್ಕೆ ಹಣಕಾಸಿನ ನೆರವು ದೊರೆಯಲಿದೆ. ದೂರದ ಬಂಧುಗಳ ಆಗಮನದಿಂದ ಸಂತಸ ಮೂಡಲಿದೆ.ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.ಕುಟುಂಬದವರಿಂದ ಶುಭ ಸಮಾಚಾರ ಸಿಗಲಿದೆ.ವೃತ್ತಿಪರ ಕೆಲಸಗಳಲ್ಲಿ ಮಹತ್ವದ ಮಾಹಿತಿ ದೊರೆಯಲಿದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಪಡೆಯುತ್ತೀರಿ.
ತುಲಾ ರಾಶಿ.
ವ್ಯಾಪಾರಗಳು ಮೊದಲಿಗಿಂತ ಉತ್ತಮವಾಗಿ ನಡೆಯಲಿವೆ.ಉದ್ಯೋಗದಲ್ಲಿ ಬಡ್ತಿ ಹೆಚ್ಚಲಿದೆ.ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ತಾಪವಾಗಲಿದೆ.ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ ದೊರೆಯಲಿದೆ.ಮನೆಯ ಹೊರಗೆ ಸಂತಸದ ವಾತಾವರಣ ಇರುತ್ತದೆ.ಸ್ನೇಹಿತರೊಂದಿಗೆ ಭೋಜನ ಮನರಂಜನಾ ಚಟುವಟಿಕೆಗಳ ಪಾಲ್ಗೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ನಿರೀಕ್ಷಿತ ಲಾಭ ದೊರೆಯಲಿದೆ.
ವೃಶ್ಚಿಕ ರಾಶಿ.
ದೂರ ಪ್ರಯಾಣ ಮಾಡುವ ಸೂಚನೆಗಳಿವೆ.ವ್ಯಾಪಾರಗಳು ನಿಧಾನವಾಗಲಿವೆ.ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಕೆಲವು ಭಾವನಾತ್ಮಕ ತೊಂದರೆಗಳನ್ನು ಉಂಟುಮಾಡುತ್ತವೆ.ಉದ್ಯೋಗಿಗಳಿಗೆ ನಿರಾಸೆ ಉಂಟು ಮಾಡುವ ವಾತಾವರಣವಿರುತ್ತದೆ.ಆದಾಯದಲ್ಲಿ ಕೊರತೆ ಇರುತ್ತದೆ. ಆತ್ಮೀಯ ಸ್ನೇಹಿತರೊಂದಿಗೆ ಜಗಳಗಳು ಉಂಟಾಗುತ್ತವೆ.
ಧನುಸ್ಸು ರಾಶಿ.
ಕೈಗೆತ್ತಿಕೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ.ವೃತ್ತಿ ವ್ಯವಹಾರದಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ.ಅಧಿಕಾರಿಗಳೊಂದಿಗೆ ತರಾತುರಿಯಲ್ಲಿ ಮಾತನಾಡುವುದು ಒಳ್ಳೆಯದಲ್ಲ ಮತ್ತು ಪ್ರಯಾಣಗಳು ಇದ್ದಕ್ಕಿದ್ದಂತೆ ಮುಂದೂಡಲ್ಪಡುತ್ತವೆ. ಕುಟುಂಬ ಸದಸ್ಯರಿಗೆ ನಿಮ್ಮ ಮಾತುಗಳು ಇಷ್ಟವಾಗುವುದಿಲ್ಲ. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ.
ಮಕರ ರಾಶಿ.
ಮನೆಯಲ್ಲಿ ವಿವಾಹದ ಬಗ್ಗೆ ಚರ್ಚೆ ನಡೆಯುತ್ತದೆ. ಮೊಂಡುತನದ ಬಾಕಿ ವಸೂಲಿಯಾಗಲಿದೆ.ಬಾಲ್ಯ ಮಿತ್ರರ ಭೇಟಿ ಸಂತಸ ತರಲಿದೆ, ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ದೊರೆಯಲಿದೆ.ಕೌಟುಂಬಿಕ ವಿಚಾರಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು.ವ್ಯಾಪಾರದಲ್ಲಿದ್ದ ಗೊಂದಲಮಯ ಪರಿಸ್ಥಿತಿಯಿಂದ ಹೊರಬರುತ್ತೀರಿ.
ಕುಂಭ ರಾಶಿ.
ನಿರುದ್ಯೋಗಿಗಳಿಗೆ ಸಂದರ್ಶನ ಸಿಗಲಿದೆ.ಕೈಗೊಂಡ ಕೆಲಸದಲ್ಲಿ ಯಶಸ್ಸು ಸಿಗಲಿದೆ.ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ.ವ್ಯವಹಾರದಲ್ಲಿ ಸ್ಥಿರವಾದ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ ಮತ್ತು ಲಾಭವುಂಟಾಗುತ್ತದೆ.ಉದ್ಯೋಗದಲ್ಲಿ ತೃಪ್ತಿಕರ ವಾತಾವರಣ ಇರುತ್ತದೆ.
ಮೀನ ರಾಶಿ.
ವ್ಯಾಪಾರ ವ್ಯವಹಾರಗಳು ಮಂದ ಗತಿಯಲ್ಲಿ ಸಾಗುತ್ತವೆ. ಹಣಕಾಸಿನ ತೊಂದರೆಗಳು ಎದುರಾಗುತ್ತವೆ.ಕಠಿಣ ಪರಿಶ್ರಮ ಬಿಟ್ಟರೆ ಮಾಡಿದ ಕೆಲಸದಲ್ಲಿ ಫಲ ಸಿಗುವುದಿಲ್ಲ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಮಾನಸಿಕ ಶಾಂತಿಯ ಕೊರತೆ ಇರುತ್ತದೆ. ವೃತ್ತಿ ಮತ್ತು ವ್ಯವಹಾರಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತವೆ.ಉದ್ಯೋಗಗಳಿಗೆ ಸಮರ್ಪಕವಾದ ಮನ್ನಣೆ ದೊರೆಯುವುದಿಲ್ಲ.