ಬೆಂಗಳೂರು:- ಡಾ. ರಾಜ್ ಕುಟುಂಬದ ಸದಸ್ಯರು ಇಂದು ಸದಾಶಿವನಗರದಲ್ಲಿರುವ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್ನಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ರಾಜ್ಕುಮಾರ್, ಯುವ ರಾಜ್ಕುಮಾರ್ ಮತ ಹಾಕಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ರಾಘವೇಂದ್ರ ರಾಜ್ಕುಮಾರ್ ಅವರು ಪುನೀತ್ ನೆನೆದು ಭಾವುಕರಾಗಿ ಮಾತನಾಡಿದ್ದಾರೆ. ಅಪ್ಪು ಇಲ್ಲದೇ ಮತದಾನ ಮಾಡಿದ ನೋವಿದೆ. ಮೊದಲು ಅಪ್ಪ ಅಮ್ಮನ ಜೊತೆಗೆ ವೋಟ್ಗೆ ಬರುತ್ತಿದ್ದೆವು. ನಂತರ ನಾನು ಶಿವಣ್ಣ ಮತ್ತು ಅಪ್ಪು ಬಂದು ಮತಚಲಾಯಿಸುತ್ತಿದ್ದೆವು. ಆದರೆ ಮೊದಲ ಬಾರಿಗೆ ಅಪ್ಪು ಇಲ್ಲದೇ ಮತದಾನ ಮಾಡಲು ಬಂದಿದ್ದೇವೆ. ಬೇಜಾರಿದೆ. ಮತದಾನ ಎಲ್ಲರ ಹಕ್ಕು. ನಾನು ಮತ ಚಲಾಯಿಸಿದ್ದೇನೆ. ನೀವೂ ಕೂಡ ವೋಟ್ ಮಾಡಿ” ಎಂದು ಕನ್ನಡ ಜನತೆಯಲ್ಲಿ ಮನವಿ ಮಾಡಿದರು.
ಯುವ ರಾಜ್ಕುಮಾರ್ ಮಾತನಾಡಿ, ಅಪ್ಪು ಚಿಕ್ಕಪ್ಪನನ್ನು ಈ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಪ್ರತಿ ದಿನ ಪ್ರತಿ ಕ್ಷಣ ನೆನಪಾಗ್ತಾರೆ. ನಾನು ಮತ ಚಲಾಯಿಸಿದ್ದೇನೆ. ಮತದಾನ ನಮ್ಮೆಲ್ಲರ ಕರ್ತವ್ಯ. ಎಲ್ಲರೂ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ಹೇಳಿದರು.