ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಗೆಲುವಿನ ಹಿನ್ನೆಲೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಡಿಕೆ ಶಿವಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ. ಮಾಧ್ಯಮದವರ ಬಳಿ ಮಾತನಾಡುವಾಗ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ. ಈ ವೇಳೆ ತಾವು ಜೈಲಿನಲ್ಲಿದ್ದ ದಿನಗಳನ್ನು ಕೂಡ ಡಿಕೆ ಶಿವಕುಮಾರ್ ನೆನೆದು ಭಾವುಕರಾಗಿದ್ದಾರೆ. ಸೋನಿಯಾ ಗಾಂಧಿ ಅವರು ನನ್ನನ್ನು ಜೈಲಿನಲ್ಲಿ ನೋಡಲು ಬಂದಿದ್ದರು. ಕಾಂಗ್ರೆಸ್ಗೆ ನನ್ನ ನಿಯತ್ತನ್ನು ಸಾಬೀತುಪಡಿಸಿದೀನಿ ಎಂದರು.
ಈ ಜಯಕ್ಕೆ ಎಲ್ಲರೂ ಜವಾಬ್ದಾರಿಯಾಗಿದ್ದು, ನಿಮಗೆ ಒಂದೇ ಒಂದು ಬೆಂಬಲ ಇದೆ, ಅದು ಕಾಂಗ್ರೆಸ್ ಬೆಂಬಲ ಎಂದು ಹೇಳಿದರು. ರಾಮನಗರದಲ್ಲಿ ಕಾರ್ಯಕರ್ತರು ಗಲಾಟೆ ಮಾಡ್ತಾ ಇದ್ದಾರೆ, ನಾನು ರಾಮನಗರಕ್ಕೆ ಹೋಗಿ ಬರ್ತೇನೆ. ಕಚೇರಿ ನನಗೆ ದೇಗುಲ, ರಾಮನಗರದಿಂದ ಕೆಪಿಸಿಸಿಗೆ ಬಂದು ಮಾತಾಡುತ್ತೇನೆ ಎಂದರು.
ಅಖAಡ ಕರ್ನಾಟಕದ ಜನರಿಗೆ ಧನ್ಯವಾದಗಳು. ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ.ಕಾರ್ಯಕರ್ತರು ಆವೇಶದಲ್ಲಿ ಇದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಧನ್ಯವಾದಗಳು. ಜೈಲಿನಲ್ಲಿ ಇದ್ದಾಗ ಬಂದು ಧೈರ್ಯ ತುಂಬಿದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ ನಾಯಕರಿಗೆ ಧನ್ಯವಾದಗಳು ಎಂದರು.