ಚಾಮರಾಜನಗರ: ನನ್ನ ಸೋಲಿಗೆ ನಮ್ಮ ಪಕ್ಷದ ಕೆಲ ಮುಖಂಡರೆ ಕಾರಣರಾಗಿದ್ದಾರೆ. ಪಕ್ಷದಲ್ಲೇ ಇದ್ದುಕೊಂಡು, ಪಕ್ಷಕ್ಕೆ ದ್ರೋಹ ಬಗೆಯುತ್ತಿರುವ ಹಿತಶತ್ರುಗಳನ್ನು ಬಿಜೆಪಿ ಕಚೇರಿಯಿಂದ ದೂರ ಇರಿಸಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ಪಕ್ಷದ ಕೆಲ ಮುಖಂಡರ ವಿರುದ್ಧ ಅಸಮಾಧಾನ
ಹೊರಹಾಕಿದರು.
ನಗರದ ಕುಲುಮೆ ರಸ್ತೆಯಲ್ಲಿರುವ ನೂತನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ಪಕ್ಷವಾಗಲಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಾರಣರಲ್ಲ. ನಮ್ಮಲ್ಲಿನ ಬಿಜೆಪಿ ಮುಖಂಡರೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಒಬ್ಬ ಒಬ್ಬ ಕರ್ಯರ್ತನು ಒಂದೊಂದು ಮನೆಗೆ ತೆರಳಿ ೮ ರಿಂದ ೧೦ ಮತಹಾಕಿಸಿದ್ದರೆ ನಾನು ಗೆಲ್ಲುತ್ತಿದ್ದೆ. ಆದರೆ, ನಮ್ಮ ಪಕ್ಷದಲ್ಲಿರುವ ಎಂಟತ್ತು ಜನರು ಮಾಡಿದ ಪಾಪದ ಕೆಲಸದಿಂದ ನಾನು ಸೋಲುವಂತಾಯಿತು. ಪಕ್ಷಕ್ಕೆ ದ್ರೋಹಮಾಡಿದವರನ್ನು ಪಕ್ಷದ ಕಚೇರಿಗೆ ಸೇರಿಸದೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಅವಾಚ್ಯ ಪದಗಳಿಂದ ನಿಂದಿಸಿ ಆಕ್ರೋಶ ಹೊರಹಾಕಿದರು.
ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ ಕರ್ಯರ್ತರನ್ನು ಸಮಾಧಾನಪಡಿಸಿ ಭಾಷಣ ಆರಂಭಿಸಿದ ವಿ. ಸೋಮಣ್ಣ ಅವರು ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ. ನಾನೇನು ದಡ್ಡ ಅಲ್ಲ, 45 ರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಇಲ್ಲಿರುವ ಒಬ್ಬೊಬ್ಬರು 10 ವೋಟು ಹಾಕಿಸಿದ್ದರೇ ಸಾಕಿತ್ತು. ಆ ಒಬ್ಬ ಲೋಫರ್ಗಾಗಿ ನನ್ನ ಸೋಲಿಸಿದ್ದೀರಿ ಎಂದು ಪರೋಕ್ಷವಾಗಿ ರುದ್ರೇಶ್ ವಿರುದ್ಧ ಹರಿಹಾಯ್ದರು.
ಆವಾಗಲೇ ಅವರಿಗೆ ಚಪ್ಪಲಿ ತಗೆದುಕೊಂಡು ಹೊಡಿಬೇಕಿತ್ತು. ಈಗ ಮಾತನಾಡಿದರೆ ಏನು ಪ್ರಯೋಜನ. ಈ ಪೌರುಷವನ್ನು ಆವಾಗಲೆ ತೊರಿಸಬೇಕಿತ್ತು ನೀವು. ಸುರಿವ ಮಳೆಯಲ್ಲಿ ಪ್ರಚಾರ ಮಾಡಿದ್ದೆ, ನಮಗೋಸ್ಕರ ಹೊಡೆದಾಡಿದರಲ್ಲ ಅವರ ಗತಿ ಏನೀಗ ? ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬರಲ್ಲ ಅಂದವನು ಎಷ್ಟು ದಿನ ಬಂದ. ನಟರನ್ನು ರ್ಕೊಂಡು ಪ್ರಚಾರ ಮಾಡಿದ ಗೊತ್ತಾ? ಅದು ಸೋಮಣ್ಣ ಪವರ್ ಅಂದರೇ. ನಿಮಗೆ ಸ್ವಾಭಿಮಾನ, ಗೌರವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ನನಗೆ ಎಂತಹ ಬಳುವಳಿ ಕೊಟ್ಟರಿ ನೀವು ಎಂದು ಬೇಸರ ವ್ಯಕ್ತಪಸಿದರು.
ಎಲ್ಲಿಯವರೆಗೆ ಮನೆಹಾಳು ಬುದ್ದಿ ಇರುತ್ತೆ, ಅಲ್ಲಿಯವರೆಗೆ ಉದ್ದಾರ ಆಗಲ್ಲ. ಚಂದಕವಾಡಿ ಮಹದೇವಂಗೆ ಎನ್ ತೀಟೆ ಇತ್ತು. ನನ್ನ ಪರವಾಗಿ ಹೋರಾಡಿದರಲ್ಲ ಅವರು ಯಾತಕ್ಕಾಗಿ. ಈ ಕೃಪಾಪೋಷಿತ ನಾಟಕದಲ್ಲಿ ಮೋಸ ಮಾಡಿದವರು ನನ್ನ ಸಮುದಾಯದವರು ಎಂದು ಬಹಿರಂಗ ಸಮಾವೇಶದಲ್ಲಿ ಲಿಂಗಾಯತ ಸಮುದಾಯದ ಮುಖಂಡರ ವಿರುದ್ಧ ಸೋಮಣ್ಣ ಆಕ್ರೋಶ ಹೊರಹಾಕಿದ್ದಾರೆ.