ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್ ನಡೆಸಿದ್ ಶುಬ್ಮನ್ ಗಿಲ್ ಕೇವಲ 60 ಎಸೆತಗಳಲ್ಲಿ 129 ರನ್ಗಳನ್ನು ಬಾರಿಸಿದ್ದಾರೆ. ಶುಬ್ಮನ್ ಗಿಲ್ ಗಿಕಲ್ ಅವರ ಈ ಅಮೋಘ ಪ್ರದರ್ಶನದ ಕಾರಣದಿಂದಾಗಿ ಗುಜರಾತ್ ಟೈಟನ್ಸ್ ತಂಡ ಈ ನಿರ್ಣಾಯಕ ಪಂದ್ಯದಲ್ಲಿ 233 ರನ್ಗಳನ್ನು ಗಳಿಸಿದೆ .
ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ನಿಡಿರುವ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ದಿಗ್ಗಜ ಕ್ರಿಕೆಟಿಗರು ಕೂಡ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಯುವ ಆರಂಭಿಕ ಆಟಗಾರನ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶುಬ್ಮನ್ ಗಿಲ್ ಅವರ ಫೋಟೋ ಹಂಚಿಕೊಂಡಿದ್ದು ಸ್ಟಾರ್ ಎಮೊಜಿ ಬಳಸಿ ಪೋಸ್ಟ್ ಮಾಡಿದ್ದಾರೆ. ಇನ್ನು ವೀರೇಂದ್ರ ಸೆಹ್ವಾಗ್ ಕೂಡ ಗಿಲ್ ಆಟಕ್ಕೆ ಮೆಚ್ಚುಗೆಯನ್ನು ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಇನ್ನು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದು ಶುಬ್ಮನ್ ಗಿಲ್ ಅವರಿಂದ ಮತ್ತೊಂದು ಶ್ರೇಷ್ಠವಾದ ಇನ್ನಿಂಗ್ಸ್ ಎಂದು ಟ್ವಿಟ್ನಲ್ಲಿ ಬರೆದುಕೊಂಡಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಗುಜರಾತ್ ಟೈಟನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಶುಬ್ಮನ್ ಗಿಲ್ ಹಾಗೂ ವೃಏದ್ಧಿಮಾನ್ ಸಾಹಾ ಜೋಡಿ 54 ರನ್ಗಳ ಜೊತೆಯಾಟ ನೀಡಿ ಬೇರ್ಪಟ್ಟರು. ಅದಾದ ಬಳಿಕ ಸಾಯಿ ಸುದರ್ಶನ್ ಜೊತೆಗೆ ಶುಬ್ಮನ್ ಗಿಲ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಬೌಲರ್ಗಳನ್ನು ದಂಡಿಸಿದ ಶುಬ್ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಗಿಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಎರಡನೇ ವಿಕೆಟ್ಗೆ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ ಬರೊಬ್ಬರಿ 138 ರನ್ಗಳನ್ನು ಕಲೆಹಾಕಿದರು. 60 ಎಸತಗಳನ್ನು ಎದುರಿಸಿದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಭರ್ಜರಿ 129 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಅಮೋಘ ಇನ್ನಿಂಗ್ಸ್ನಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಒಳಗೊಂಡಿತ್ತು. ಭರ್ಜರಿ 215ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ ಶುಬ್ಮನ್ ಗಿಲ್ ಎದುರಾಳಿ ಬೌಲರ್ಗಳಿಗೆ ಆಘಾತ ನೀಡಿದರು.
ಇನ್ನು ನಂತರ ಸಾಯಿ ಸುದರ್ಶನ್ 31 ಎಸೆತಗಳಲ್ಲಿ 43 ರನ್ಗಳಿಸಿ ರಿಟೈರ್ಡ್ ಔಟ್ ಆದರೆ ನಾಯಕ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 28 ರನ್ಗಳಿಸಿ ಅಬ್ಬರಿಸಿದರು. ರಶೀದ್ ಖಾನ್ 5 ರನ್ಗಳಿಸಿ ಅಜೇಯವಾಗುಳಿದರು. ಈ ಮೂಲಕ ನಿಗದಿತ 20 ಓವರ್ಗಳಲ್ಲಿ ಗುಜರಾತ್ ಟೈಟನ್ಸ್ ತಂಡ 3 ವಿಕೆಟ್ ಕಳದುಕೊಂಡು 233 ರನ್ಗಳನ್ನು ಗಳಿಸಿದ್ದು ಬೃಹತ್ ಮೊತ್ತದ ಗುರಿ ನಿಗದಿಪಡಿಸಿದೆ.