ನಂಜನಗೂಡು:ಕಳ್ಳತನ ಮಾಡುತ್ತಿದ್ದವರನ್ನು ಹಿಡಿದು ಪೊಲೀಸರ ವಶದಲ್ಲಿದ್ದ ಕಳ್ಳರನ್ನು ಬಿಟ್ಟು ದೌರ್ಜನ್ಯವೆಸುತ್ತಿದ್ದಾರೆ ಎಂದು ಆರೋಪಿಸಿ ಹುಲ್ಲಹಳ್ಳಿ ಪೊಲೀಸ್ ಠಾಣೆ ಎದುರು ಸಾರ್ವಜನಿಕರು ಪ್ರತಿಭಟಿಸಿದರು.
ದುಗ್ಗಳ್ಳಿ ಗ್ರಾಮದಲ್ಲಿ ರಾತ್ತಿ 11ರ ಸಮಯದಲ್ಲಿ ಮಲ್ಲಪ್ಪ, ಕುಮಾರ, ಉಮೇಶ್ ಎಂಬುವರ ಜಮೀನುಗಳಲ್ಲಿ ಮೋಟಾರ್ ಕೇಬಲ್, ಲ್ಯಾಟರ್ ವೈರ್ ಖದೀಯುವ ಸಂದರ್ಭದಲ್ಲಿ ಜಮೀನಿನ ರೈತರು ಕಳ್ಳರನ್ನು ಹಿಡಿದಿದ್ದಾರೆ.
ಕೆಎ ೧೦-೧೩೯೦ ಆಪೇ ಆಟೋದೊಂದಿಗೆ ಇಬ್ಬರು ಕಳ್ಳರನ್ನು ಹುಲ್ಲಹಳ್ಳಿ ಪೊಲೀಸ್ ಠಾಣೆ ಕರೆದು ತಂದು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ಯಾವುದೇ ಪ್ರಕರಣ ದಾಖಲಿಸದೇ ಕಳ್ಳರನ್ನು ಬಿಟ್ಟು ದೂರು ದಾಖಲಿಸುವ ರೈತರ ಮೇಲೆ ಥಳಿಸಿದ್ದಾರೆ ಎಂದು ಆರೋಪಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಹಿಡಿದು ತಂದ ಖದೀಮರನ್ನು ಬಿಟ್ಟು ಪರೋಷವಾಗಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ. ನ್ಯಾಯ ಕೇಳುವ ರೈತರ ಮೇಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಬೇಕು ಎಂದು ರೈತ ಮಂಜುನಾಥ್ ಮನವಿ ಮಾಡಿದರು.
ದುಗ್ಗಳ್ಳಿ ಗ್ರಾಮದ ರೈತರಾದ ಷಡಕ್ಷರಿ, ಮಂಜುನಾಥ್, ಡಿಸ್ ಬಸಪ್ಪ, ಶಿವನಾಗಪ್ಪ, ಮಹಾದೇವಪ್ಪ, ಚಿನ್ನಸ್ವಾಮಿ, ರಮೇಶ್, ಕುಮಾರ್, ಯೋಗೇಶ್, ರವಿ, ಶಿವರಾಜಪ್ಪ, ಸುರೇಶ್, ಮಂಜುನಾಥ್ ಮುಂತಾರದ ರೈತರು ಹಾಜರಿದ್ದರು