ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಸಚಿವ ಸಂಪುಟಕ್ಕೆ 24 ಮಂದಿಸಚಿವರನ್ನುಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಂಪುಟ ವಿಸ್ತರಿಸಿದ್ದು, ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ.
ರಾಜಭವನದ ಗಾಜಿನ ಮನೆಯಲ್ಲಿ ಇಂದು ಬೆಳಿಗ್ಗೆ ನಡೆದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಇಂದು ಸಚಿವರಾಗಿ ಈಶ್ವರಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಭೈರತಿ ಸುರೇಶ್,ಡಾ. ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಎಸ್.ಎಸ್ ಮಲ್ಲಿಕಾರ್ಜುನ್,ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಹೀಂಖಾನ್, ಡಿ. ಸುಧಾಕರ್, ಡಾ. ಎಂ.ಸಿ. ಸುಧಾಕರ್, ಹೆಚ್.ಕೆ ಪಾಟೀಲ್,ಚೆಲುವರಾಯ ಸ್ವಾಮಿ, ಕೆ.ಎನ್ ರಾಜಣ್ಣ, ಸಂತೋಷ್ಲಾಡ್, ಮಧುಬಂಗಾರಪ್ಪ, ಮಾಂಕಾಳ ಸುಬ್ಬವೈದ್ಯ, ಶಿವರಾಜ ತಂಗಡಗಿ,ಶರಣ ಬಸಪ್ಪ ದಕ್ಷಿಣಾಪುರ, ಡಾ. ಶರಣ್ಪ್ರಕಾಶ್ ಪಾಟೀಲ್, ಎನ್.ಎಸ್ ಭೋಜರಾಜು, ಬಿ. ನಾಗೇಂದ್ರ ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲ24 ಮಂದಿ ನೂತನ ಸಚಿವರು ಸಂಪುಟ ದರ್ಜೆ ಸಚಿವರಾಗಿದ್ದಾರೆ.
ಕಳೆದ ಶನಿವಾರ ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆಶಿವಕುಮಾರ್ ಇಂದು 24 ಸಚಿವರು ಪದಗ್ರಹಣದ ಮೂಲಕ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದೆ.
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವಸಂಪುಟದ ಸದಸ್ಯರುಗಳು, ಶಾಸಕರುಗಳು, ಸಂಸದರು ಉಪಸ್ಥಿತರಿದ್ದರು