ಮಣಿಪುರ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ. ಮಣಿಪುರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಲಭೆಗಳು ಆರಂಭ ಆಗಿವೆ. ಈ ನಡುವೆ, ಮಣಿಪುರ ರಾಜ್ಯಾದ್ಯಂತ ಭದ್ರತಾ ಪಡೆಗಳು 40 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಇಲ್ಲಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ. ಮಣಿಪುರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಭದ್ರತಾ ಪಡೆಗಳು ಉಗ್ರರ ವಿರುದ್ದ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ 40 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಮಾಹಿತಿ ನೀಡಿದ್ಧಾರೆ.
ಮೇ 29 ಸೋಮವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಮಣಿಪುರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಣಿಪುರ ರಾಜ್ಯದಲ್ಲಿ ಅಮಿತ್ ಶಾ ಮೂರು ದಿನಗಳ ಕಾಲ ಸುತ್ತಾಟ ನಡೆಸಲಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಲಿದ್ದಾರೆ.
ಅಮಿತ್ ಶಾ ಆಗಮನದ ಮುನ್ನಾ ದಿನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದ ಭದ್ರತಾ ಸ್ಥಿತಿಗತಿ ಕುರಿತಾಗಿ ಚರ್ಚೆ ನಡೆಸಿದರು. ಮಣಿಪುರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೇನೆ ಕೈಗೊಂಡಿರುವ ಕ್ರಮಗಳ ಕುರಿತಾಗಿ ಸಿಎಂಗೆ ಸಮಗ್ರ ವಿವರಣೆ ನೀಡಿದರು.
ಈ ನಡುವೆ, ಶಸ್ತç ಸಜ್ಜಿತ ಪ್ರತಿಭಟನಾಕಾರರ ಗುಂಪುಗಳು ಭದ್ರತಾ ಪಡೆಗಳಿಗೆ ರಾಜ್ಯದ ವಿವಿದೆಡೆ ಎದುರಾಗುತ್ತಿವೆ. ಮಣಿಪುರ ರಾಜ್ಯದಲ್ಲಿ ಕನಿಷ್ಟ 6 ಕಡೆ ಈ ರೀತಿ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸೇನೆಯು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೂಂಬಿAಗ್ ಕಾರ್ಯಾಚರಣೆ ನಡೆಸಿ ಉಗ್ರರನ್ನ ಸೆದೆಬಡಿಯುವ ಜೊತೆಯಲ್ಲೇ ಅಪಾರ ಪ್ರಮಾಣದ ಶಸ್ತಾçಸ್ತç ವಶಕ್ಕೆ ಪಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
ಸಾರ್ವಜನಿಕ ಜನಸಮುದಾಯ ಇರುವ ಕಡೆಗಳಲ್ಲಿ ಅತ್ಯಾಧುನಿಕ ಶಸ್ತç ಸಜ್ಜಿತ ಉಗ್ರರ ಚಲನ ವಲನ ಕಂಡು ಬರ್ತಿದೆ. ಈ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದಲ್ಲದೆ ಭದ್ರತಾ ಪಡೆಗಳು ಹಲವರನ್ನು ವಶಕ್ಕೆ ಪಡೆದಿವೆ ಎಂದು ಸಿಎಂ ಸಿಎಂ ಅವರು ಮಾಧ್ಯಮಗಳಿಗೆ ವಿವರಣೆ ನೀಡಿದ್ಧಾರೆ.
ಬಂಧಿತ ಹಾಗೂ ಹತ್ಯೆಗೀಡಾದ ಉಗ್ರರ ಬಳಿ ಅತ್ಯಾಧುನಿಕ ಶಸ್ತಾçಸ್ತçಗಳು ಇದ್ದವು. ಎಕೆ 47, ಎಂ 16, ಸ್ನೆöÊಪರ್ ರೈಫಲ್ಗಳು ಉಗ್ರರ ಬಳಿ ಇದ್ದವು. ಸೇನೆಯ ಪ್ರತಿದಾಳಿ ವೇಳೆ ಉಗ್ರರು ಹತರಾಗಿದ್ದಷ್ಟೇ ಅಲ್ಲ, ಅಪಾರ ಪ್ರಮಾಣದ ಮದ್ದು ಗುಂಡುಗಳೂ ಸಿಕ್ಕಿವೆ.
ಹಿಂಸಾಚಾರಕ್ಕೆ ಕಾರಣ ಏನು?
ಮಣಿಪುರದಲ್ಲಿ ಹಿಂಸಾಚಾರ ಸಂಭವಿಸಲು ಎರಡು ಸಮುದಾಯಗಳ ನಡುವಣ ಸಂಘರ್ಷ ಕಾರಣ ಎನ್ನಲಾಗಿತ್ತು. ಆದ್ರೆ, ಮಣಿಪುರ ಸಿಎಂ ಸಿಂಗ್ ಅವರು ಈ ಮಾತನ್ನು ಅಲ್ಲಗಳೆದಿದ್ದಾರೆ. ಸ್ಥಳೀಯ ಕುಕಿ ಬಂಡುಕೋರರು ಹಾಗೂ ಭದ್ರತಾ ಪಡೆಗಳ ನಡುವೆ ಈ ಸಂಘರ್ಷ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಣಿಪುರ ರಾಜ್ಯದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಭದ್ರತಾ ಪಡೆಗಳ ಸಂಚಾರಕ್ಕೆ ತಡೆ ಒಡ್ಡಬಾರದು, ಸರ್ಕಾರ ಹಾಗೂ ಸೇನೆಯ ಮೇಲೆ ನಂಬಿಕೆ ಇಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನೆರವು ನೀಡಬೇಕು ಎಂದು ಮುಖ್ಯಮಂತ್ರಿಗಳು ಕೋರಿದ್ದಾರೆ.