ಮೇಷ
ಈ ದಿನ ಕೆಲವು ವಿಚಾರಗಳಲ್ಲಿ ಮುಜುಗರ ಎದುರಿಸಬೇಕಾಗುತ್ತದೆ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ. ಇನ್ನೊಬ್ಬರಿಂದ ಮಾತು ಕೇಳುವುದರಿಂದ ತಪ್ಪಿಸಿಕೊಳ್ಳಲು ನೀವೇ ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯ.
ವೃಷಭ
ಇಷ್ಟು ಕಾಲ ಕಾಡುತ್ತಿದ್ದ ಗೊಂದಲವೊಂದು ನಿವಾರಣೆ ಆಗುವ ಸೂಚನೆ ಕಾಣುತ್ತಿದೆ. ಹಣಕಾಸಿನ ಗಳಿಕೆಗೆ ಹೊಸ ಮಾರ್ಗ ಗೋಚರಿಸಿ, ಆರ್ಥಿಕ ಸ್ಥಿರತೆ ಇದೆ. ವ್ಯಾಪಾರ- ವ್ಯವಹಾರದಲ್ಲಿ ಸಲ್ಲದ ಗೊಂದಲ ಮಾಡಿಕೊಳ್ಳಬೇಡಿ.
ಮಿಥುನ
ನೀವು ಎಷ್ಟೇ ಬುದ್ಧಿವಂತರು, ಲೆಕ್ಕಾಚಾರ ಹಾಕುವಲ್ಲಿ ನಿಸ್ಸೀಮರು ಆಗಿರಬಹುದು. ಆದರೂ ಗುರು-ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ. ಶೈಕ್ಷಣಿಕ ರಂಗದಲ್ಲಿ ಹಿನ್ನಡೆ ಇದೆ.
ಕರ್ಕಾಟಕ
ಎಂಜಿನಿಯರಿಂಗ್ ವೃತ್ತಿಯಲ್ಲಿ ಇರುವವರಿಗೆ ಏಳ್ಗೆ ಇದೆ. ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಆರೋಗ್ಯ ಸಮಸ್ಯೆ ಆಗುವ ಸಾಧ್ಯತೆ. ಅನುಭವಸ್ಥರಿಂದ ಸಲಹೆ-ಸೂಚನೆ ಪಡೆಯಿರಿ. ವ್ಯಾಪಾರದಲ್ಲಿ ಲಾಭ ಇದೆ.
ಸಿಂಹ
ಯಾವಾಗಲೋ ಆಡಿದ ಜಗಳ- ಮಾತಿನ ಫಲಿತವನ್ನು ಈ ದಿನ ಅನುಭವಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಕಾಣುವುದಷ್ಟೇ ಸತ್ಯವಲ್ಲ, ನೆನಪಿಡಿ. ಹಣಕಾಸಿನ ಬಗ್ಗೆ ನೆರವು ನಿರೀಕ್ಷೆ ಮಾಡುತ್ತಿದ್ದಲ್ಲಿ ದೊರೆಯುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ಕಾಡಬಹುದು.
ಕನ್ಯಾ
ಹಣಕಾಸು- ಮನಸ್ಸಂತೋಷ ನೀಡದಿರುವ ಕೆಲಸವೊಂದು ಈ ದಿನ ನಿಮ್ಮ ಹೆಗಲೇರುತ್ತದೆ. ಮಾನಸಿಕವಾಗಿ ಇಷ್ಟು ಸಮಯ ಕಾಡುತ್ತಿದ್ದ ಬೇಸರಕ್ಕೆ ಪರಿಷ್ಕಾರಕ್ಕೆ ದೊರೆತು, ನೆಮ್ಮದಿ ನೆಲೆಸುತ್ತದೆ. ವೃತ್ತಿ- ವ್ಯಾಪಾರಸ್ಥರು- ಉದ್ಯಮಿಗಳಿಗೆ ಪ್ರಗತಿ ಇದೆ.
ತುಲಾ
ಮುಂದೆ ಹೇಗೋ ಏನೋ ಎಂಬ ಆತಂಕ ಕಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಈ ದಿನ ಶುಭ ವಾರ್ತೆಯೊಂದನ್ನು ನಿರೀಕ್ಷಿಸಿ. ದೂರದ ಊರುಗಳಿಂದ ನೆಂಟರು ಬರಬಹುದು. ಗುರು ಸಮಾನರು ಅಥವಾ ಗುರುಗಳ ಭೇಟಿ ಆಗಿ, ಆಶೀರ್ವಾದ ಪಡೆಯಲು ಅವಕಾಶ
ವೃಶ್ಚಿಕ
ಮಾತಿನ ಮೇಲೆ ಹೆಚ್ಚು ಹಿಡಿತ ಇರಲಿ. ಯಾರಿಗೆ ಸಲಹೆ-ಸೂಚನೆ ನೀಡಲು ಹೋಗದಿರಿ. ನಿಮ್ಮ ನಡವಳಿಕೆಯು ವಿವಾದಕ್ಕೆ ಎಡೆ ಮಾಡಿಕೊಡಬಹುದು. ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬೇಡಿ. ಸಾಧ್ಯವಾದಷ್ಟೂ ವಾಹನ ಚಾಲನೆ ಬೇಡ.
ಧನು
ವ್ಯಾಸಂಗಕ್ಕೆ- ಉದ್ಯೋಗಕ್ಕಾಗಿ ವಿದೇಶದ ಸಂಪರ್ಕಕ್ಕಾಗಿ ಪ್ರಯತ್ನ ನಡೆಸುತ್ತಿದ್ದರೆ ಮುಖ್ಯವಾದ ವ್ಯಕ್ತಿಯೊಬ್ಬರ ಸಂಪರ್ಕ ದೊರೆಯುತ್ತದೆ. ಶ್ರಮ ಹಾಕಿದ್ದ ಕೆಲಸಗಳಲ್ಲಿ ಯಶಸ್ಸು ಕಾಣುತ್ತೀರಿ. ಆಸ್ತಿ ಸಂಪಾದನೆಗೆ ವ್ಯವಹಾರ ಅಂತಿಮ ಆಗುವ ಸಾಧ್ಯತೆ.
ಮಕರ
ಕಳೆದ ವಾರ ಆಗಿರುವ ಸುಸ್ತು ಮತ್ತು ಒತ್ತಡದ ಸಲುವಾಗಿ ಮನಸ್ಸು ವಿಶ್ರಾಂತಿ ಬಯಸುತ್ತದೆ. ಆದರೆ ಇಂದು ಸಹ ವ್ಯರ್ಥ ತಿರುಗಾಟ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಖ್ಯ ನಿರ್ಧಾರಗಳನ್ನು ಮುಂದಕ್ಕೆ ಹಾಕಬೇಡಿ.
ಕುಂಭ
ವಹಿಸಿದ ಕೆಲಸಗಳಲ್ಲಿ ತಾತ್ಸಾರ ಮನೋಭಾವ ಸಲ್ಲದು. ಅಂದುಕೊಂಡ ಕೆಲಸ ಆಗಬೇಕು ಅಂದರೆ ಸಂಯಮ ಬಹಳ ಮುಖ್ಯ. ಪ್ರಯತ್ನ ವ್ಯರ್ಥವಾಗಲ್ಲ. ಮಾಧ್ಯಮ ಕ್ಷೇತ್ರದವರಿಗೆ ಏಳ್ಗೆ ಇದೆ. ಶೈಕ್ಷಣಿಕ ರಂಗದಲ್ಲಿ ಸವಾಲು ಎದುರಿಸಬೇಕಾಗುತ್ತದೆ.
ಮೀನ
ನೀವು ತುಂಬ ಪ್ರೀತಿಸುವ-ಗೌರವಿಸುವ ವ್ಯಕ್ತಿಯ ಅನಾರೋಗ್ಯ ಚಿಂತೆಗೆ ಕಾರಣ ಆಗುತ್ತದೆ. ಈ ಹಿಂದೆ ಎದುರಾಗಿದ್ದ ಮನಸ್ತಾಪಗಳು ಕಳೆದು ಸ್ನೇಹ-ಸಂಬಂಧ ಸುಧಾರಿಸಿಕೊಳ್ಳುವತ್ತ ಗಮನ ನೀಡುತ್ತೀರಿ. ವಿವಾಹ ವಿಚಾರದಲ್ಲಿ ಅತಿರೇಕದ ನಿರ್ಧಾರ ಬೇಡ.