ಮೈಸೂರು: ಪರಿಸರ ಸ್ನೇಹಿಯಾಗಿ ಸಾಂಸ್ಕøತಿಕ ನಗರಿ ಮೈಸೂರು ನಗರದ ಆಕರ್ಷಣೆಗಳ ಪೈಕಿ ಒಂದಾದ ಟ್ರಿಣ್ ಟ್ರಿಣ್ ಸೈಕಲ್ಗಳ ಬಳಕೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೈಕಲ್ಗಳ ಸಂಖ್ಯೆಯನ್ನು ಹೆಚ್ಚಿಸಲು ನಗರಪಾಲಿಕೆ ನಿರ್ಧರಿಸಿದೆ.
ಕೇಂದ್ರದ ನಗರ ರಸ್ತೆ ಸಾರಿಗೆ ಇಲಾಖೆ ಪರಿಸರ ಸ್ನೇಹಿ ಯೋಜನೆಯನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲು ಉತ್ಸಾಹ ತೋರಿಸಿ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ ರೂಪಿಸಿದ ಟ್ರಿಣ್ ಟ್ರಿಣ್ ಯೋಜನೆ ದೇಶದಲ್ಲೇ ಮೊದಲು ಜಾರಿಗೊಂಡ ಯೋಜನೆಯಾಗಿದೆ. 2017 ಮೇ.20ರಂದು ಅಂದಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ಯೋಜನೆಗೆ ಪ್ರಸ್ತುತ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 450 ಬೈಸಿಕಲ್ ಹಾಗೂ 48 ನಿಲ್ದಾಣಗಳು ಇದ್ದು, ತಿಂಗಳೊಳಗೆ 1000 ಬೈಸಿಕಲ್, 100ನಿಲ್ದಾಣಗಳಾಗಿ ರೂಪುಗೊಳ್ಳಲಿವೆ. ಹೊಸ ಸೈಕಲ್ಗಳು ಸ್ವಯಂ ಚಾಲಿತ ಸ್ಮಾರ್ಟ್ ಲಾಕ್ ವ್ಯವಸ್ಥೆಯನ್ನು ಹೊಂದಿರುವುದು ಮಾತ್ರವಲ್ಲದೆ, ಬ್ಯಾಟರಿ ಚಾಲಿತ ವಾಹನಗಳಾಗಿವೆ. ಗ್ರಾಹಕರು ಪೆಟ್ಟಿಲು ತುಳಿಯಬಹುದು. ಇಲ್ಲದಿದ್ದರೆ ಬ್ಯಾಟರಿ ಆನ್ ಮಾಡಿಯೂ ಸಂಚರಿಸಬಹುದಾಗಿದೆ. ಈ ಹಿಂದಿನ ಡಾಕಿಂಗ್ ವ್ಯವಸ್ಥೆ ಬದಲು ಸ್ಮಾರ್ಟ್ ಫೆÇೀನ್ ಮೂಲಕವೇ ಲಾಕ್ ಹಾಗೂ ಅನ್ಲಾಕ್ ಮಾಡುವ ವ್ಯವಸ್ಥೆಯ ವಿಶೇಷತೆಯಿಂದಲೂ ಕೂಡಿರಲಿದೆ.
ಹಸಿರು ಸೈಕಲ್ಗಳು: ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಾರಿಗೆ ತಂದ “ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್” ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಹಳೆಯ ಸೈಕಲ್ಗಳನ್ನು ಬದಲಾಯಿಸಲಾಗುತ್ತಿದೆ. ಹೊಸ ತಂತ್ರಜ್ಞಾನದ ಹಸಿರು ಬಣ್ಣದ ಸೈಕಲ್ಗಳನ್ನು ಖರೀದಿಸಿ ಸಾರ್ವಜನಿಕರ ಸೇವೆಗೆ ನೀಡಲು ಪಾಲಿಕೆ ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶವನ್ನು ನೀಡಿದೆ. ಟೆಂಡರ್ ಪಡೆದಿರುವ ನೂತನ ಸಂಸ್ಥೆಯು ಇದೀಗ ನಗರಕ್ಕೆ ಅಗತ್ಯವಾದ ಹೊಸ ಸೈಕಲ್ಗಳನ್ನು ಖರೀದಿಸಿ ಹಾಗೂ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ.
15 ಸಾವಿರ ಮಂದಿ ನೊಂದಣಿ: ಕರೋನಾ ನಂತರ ನಗರ ವಾಸಿಗಳಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚಾಗಿದ್ದು, ವಾಯುವಿಹಾರಕ್ಕೆ ತೆರಳುವವರು ಹಾಗೂ ಸೈಕಲ್ ಬಳಕೆ ಮಾಡುವವರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2017ರ ಜೂನ್ ಮಾಹೆಯಲ್ಲಿ ಪ್ರಾರಂಭಗೊಂಡ ಬೈಸಿಕಲ್ ಹಂಚಿಕೆ ಸೇವೆಗೆ ಇದುವರೆಗೆ 19 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದು, ಪ್ರತಿನಿತ್ಯ 1,200 ಜನರು ಬಳಕೆ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣ ತಗ್ಗಿಸಲು ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಪ್ರಮಾಣ ಕಡಿಮೆಯಾಗಬೇಕಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹಾಗೂ ಸೈಕಲ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲು ಪ್ರಾರಂಭಿಸಿದೆ.
ಕಾರಣಾಂತರಗಳಿಂದ ನಗರದ ಇತರ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಟ್ರಾಕ್ ನಿರ್ಮಾಣ ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಸೈಕಲ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಯೋಜನೆ ಕಾರ್ಯಗತ ಆಗುತ್ತಿರುವುದು ಮುಂದಿನ ದಿನಗಳಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸೈಕಲ್ ಟ್ರಾಕ್ ಜೀವ ಸಿಗಬಹುದೆಂಬ ನಿರೀಕ್ಷೆ ಹೆಚ್ಚಿಸಿದೆ.