ಬೆಂಗಳೂರು:- ನವೆಂಬರ್ ವೇಳೆಗೆ ಬೆಂಗಳೂರಿಗೆ ಇನ್ನೂ ನಾಲ್ಕು ಮೆಟ್ರೋ ಮಾರ್ಗಗಳು ಬರಲಿವೆ ಎಂದು ನಮ್ಮ ಮೆಟ್ರೋ ಯೋಜನೆಯ ಮೊದಲ ಸಭೆಯ ನಂತರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಕಚೇರಿಗಳಿಗೆ ಭೇಟಿ ನೀಡಿ ಮೆಟ್ರೋ ಕಾಮಗಾರಿಯನ್ನು ತ್ವರಿತಗೊಳಿಸುವುದು, ಶುಲ್ಕರಹಿತ ಆದಾಯವನ್ನು ಹೆಚ್ಚಿಸುವುದು ಮತ್ತು ಹೊಸ ಮಾರ್ಗಗಳನ್ನು ತೆರೆಯುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಚೆಲ್ಲಘಟ್ಟ-ವೈಟ್ಫೀಲ್ಡ್ ಪರ್ಪಲ್ ಲೈನ್ನಲ್ಲಿ ಬಾಕಿ ಇರುವ 2.1 ಕಿಮೀ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗ ಜುಲೈನಲ್ಲಿ ತೆರೆಯುತ್ತದೆ. 1.9 ಕಿ.ಮೀ ಕೆಂಗೇರಿ-ಚೆಲ್ಲಘಟ್ಟ ಮಾರ್ಗವು ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಸಿದ್ಧವಾಗಲಿದೆ. 2017ರಿಂದ ನಿರ್ಮಾಣವಾಗುತ್ತಿರುವ 3 ಕಿ.ಮೀ ನಾಗಸಂದ್ರ-ಮಾದಾವರ ಮಾರ್ಗವು ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ನಿರ್ಣಾಯಕ 58-ಕಿಮೀ ಸಿಲ್ಕ್ ಬೋರ್ಡ್-ಕೆಆರ್ ಪುರ-ವಿಮಾನ ನಿಲ್ದಾಣ ಮಾರ್ಗವು ಜೂನ್ 2026 ರ ವೇಳೆಗೆ ಸಿದ್ಧವಾಗಲಿದೆ. ಇಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕ ಕಲ್ಪಿಸುವ 19.14 ಕಿ.ಮೀ ಉದ್ದದ ಆರ್ವಿ ರಸ್ತೆ-ಬೊಮ್ಮಸಂದ್ರ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಿವಕುಮಾರ್ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.