ಬೆಂಗಳೂರು: ಕರ್ನಾಟಕ ವಿದ್ಯುತ್ಚ್ಚಕ್ತಿ ನಿಯಂತ್ರಣ ಆಯೋಗವು (KERC) ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಿಸಿದ್ದಕ್ಕೆ ರಾಜ್ಯದ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ವಿದ್ಯುತ್ ಬಿಲ್ನ ಫಿಕ್ಸ್ಡ್ ಚಾರ್ಜ್ ಸಹ 100 ರೂ. ನಿಂದ 110ಕ್ಕೆ ಏರಿಕೆ ಮಾಡಲಾಗಿದೆ.
ಈ ಮೂಲಕ ಸರ್ಕಾರ ಗ್ರಾಹಕರಿಗೆ ಶಾಕ್ ನೀಡುತ್ತಿದೆ. ಗೃಹ ಬಳಕೆಯ ವಿದ್ಯುತ್ ಸಂಪರ್ಕಕ್ಕೆ ಪ್ರತಿ ವ್ಯಾಟ್ಗೆ 100 ರೂಪಾಯಿ ನಿಗದಿತ ಶುಲ್ಕವನ್ನು ಮೇ ತಿಂಗಳಿAದಲೇ ಜಾರಿಗೆ ಬರುವಂತೆ 110ಕ್ಕೆ ಹೆಚ್ಚಳವಾಗಿದೆ. ಇದು ಗೃಹ ಬಳಕೆಗೆ 50 ಕೆವಿ ವಿದ್ಯುತ್ ಬಳಕೆ ಮಾಡುವವರಿಗೆ ಅನ್ವಯವಾಗುತ್ತದೆ. ಇನ್ನೂ 50 ಕೆವಿ ವಿದ್ಯುತ್ ಮೇಲ್ಪಟ್ಟ ಬಳಕೆಗೆ 210 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.
ಉಚಿತ ವಿದ್ಯುತ್ ಜಾರಿಗೂ ಮುನ್ನವೇ ರಾಜ್ಯ ಸರ್ಕಾರ ವಿದ್ಯುತ್ ಯುನಿಟ್ ದರ ಜೂನ್ಗೆ ಜಾರಿ ಬರುವಂತೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಫಿಕ್ಸ್ಡ್ ಶುಲ್ಕ, ಇತರೆ ಶುಲ್ಕವನ್ನು ಕಳೆದ ಎರಡು ತಿಂಗಳಿನಿAದ ಅನ್ವಯಿಸುವಂತೆ ಹೆಚ್ಚಿಸಿದ್ದಕ್ಕೆ ಜನರು ಅಸಮಾಧಾನಗೊಂಡಿದ್ದಾರೆ.
ಗ್ರಾಹಕರ ಮೇಲೆ ಮನಬಂದAತೆ ಇತರೆ ಶುಲ್ಕ ಹೇರಿಕೆ, ಗ್ಯಾರಂಟಿ ಖರ್ಚು ಪಡೆಯುತ್ತಿದೆಯೇ ಸರ್ಕಾರ? ಅಧಿಕ ಶುಲ್ಕದ ಬಿಲ್ ನೋಡಿ ಗ್ರಾಹಕರಲ್ಲಿ ಗೊಂದಲ ಮೇ ತಿಂಗಳಿನ ಬಿಲ್ ಅನ್ನು ಜೂನ್ ಮೊದಲ ವಾರ ಪಡೆದ ಗ್ರಾಹಕರು ಬೆರಗಾಗಿದ್ದಾರೆ. ಪ್ರತಿ ತಿಂಗಳು ತಪ್ಪದೇ ವಿದ್ಯುತ್ ಬಿಲ್ ಪಾವತಿಸಿದರೂ ದುಪಟ್ಟು ಶುಲ್ಕ ವಿಧಿಸಲಾಗಿದೆ.
ಕಾರಣ ಫಿಕ್ಸ್ಡ್ ದರ ಏರಿಕೆ, ಯುನಿಟ್ ದರ ಏರಿಕೆ, ಹೆಚ್ಚುವರಿಯಾಗಿ ಇತರೆ ಶುಲ್ಕ ವಿಧಿಸಲಾಗಿದೆ. ಇದೆಲ್ಲ ನೋಡಿ ಎರಡು – ಮೂರು ತಿಂಗಳ ಒಟ್ಟಿಗೆ ಬಂದಿದೆಯೇ ಎಂಬ ಅನುಮಾನ ಗ್ರಾಹಕರಲ್ಲಿ ಕಾಡಿದೆ. ಜನ ಗೊಂದಲಕ್ಕಾಗಿದ್ದು, ಗೃಹಜ್ಯೋತಿ ಅಡಿ ಉಚಿತ ವಿದ್ಯುತ್ ಘೋಷಿಸಿದ ಸರ್ಕಾರ ಹಿಂಬಾಗಿಲಿನಿAದ ಪರೋಕ್ಷ ಶುಲ್ಕ ಮೂಲಕ ವಸೂಲಿಗೆ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ. ವಿದ್ಯುತ್ ನಿಯಂತ್ರಣ ಆಯೋಗವು ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ವಿಧಿಸುತ್ತಿದ್ದ ದುಬಾರಿ ನಿಗದಿತ ಶುಲ್ಕ ಕಡಿತಗೊಳಿಸಿದೆ. ಇದರಿಂದ ಮನೆ ನಿರ್ಮಾಣ ಮತ್ತಿತರ ಕೆಲಸಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆಯುವವರು ಅಧಿಕ ಶುಲ್ಕದಿಂದ ಮುಕ್ತ ಪಡೆದಂತಾಗಿದೆ.