ಹಾಸನ:- ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ 35 ಮಂದಿ ಸೈನಿಕರು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ. ಇನ್ನು ಅಸ್ವಸ್ಥರಾಗಿದ್ದ ಸೈನಿಕರಿಗೆ ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಲನಾ ತರಬೇತಿಗೆಂದು ಬಂದಿದ್ದ 35 ಜನ ಸೈನಿಕರು ಕುಡುಗರಹಳ್ಳಿ ಬಳಿ ಕ್ಯಾಂಪ್ನಲ್ಲಿ ಮಧ್ಯಾಹ್ನ ತಯಾರಾದ ಆಹಾರವನ್ನು ಸೇವಿಸಿದ್ದರು. ಊಟ ಮಾಡಿದ ನಂತರ ಸೈನಿಕರು ಅಸ್ವಸ್ಥಗೊಂಡಿದ್ದು, ಆಗ ಎಲ್ಲಾ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯವನ್ನು ವಿಚಾರಿಸಿದರು.