ಮೈಸೂರು: ಮೈಸೂರು ನಗರದಲ್ಲಿ ಖಾಸಗಿ ಟಿ.ವಿ.ಹಾಗೂ ಇಂಟರ್ ನೆಟ್ ನೆಟ್ ವರ್ಕ್ ಕೇಬಲ್ ಗಳ ಹಾವಳಿ ಹೆಚ್ಚಾಗುತ್ತಿದೆ.
ವಿದ್ಯುತ್ ಕಂಬಗಳ ಮೇಲೆ ಹಾದು ಹೋಗಿರುವ ಕೇಬಲ್ ಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಹಲವೆಡೆ ಕೇಬಲ್ ಗಳು ಜೋತು ಬಿದ್ದು ಭೀತಿಹುಟ್ಟಿಸಿದೆ.ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದ್ದರೂ ಚೆಸ್ಕಾಂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.ಈ ವಿಚಾರ ನಿನ್ನೆ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲೂ ಪ್ರತಿಧ್ವನಿಸಿದೆ.
ಈಗಾಗಲೆ ತೆರವುಗೊಳಿಸುವಂತೆ ಗಡುವು ನೀಡಿದ್ದರೂ ಕೇವಲ್ ಅಳವಡಿಕೆ ಕಾರ್ಯ ರಾಜಾರೋಷವಾಗಿ ಸಾಗುತ್ತಿದೆ.ಪುರಪಿತೃಗಳು ಖಾಸಗಿ ಕೇಬಲ್ ನೆಟ್ ವರ್ಕ್ ಗಳ ವಿರುದ್ದ ಸಿಡಿದೆದ್ದಿದ್ದಾರೆ.ತೆರುವುಗೊಳಿಸದಿದ್ದಲ್ಲಿ ಹೋರಾಟದ ಹಾದಿಗೆ ನಿರ್ಧರಿಸಿದ್ದಾರೆ.
ಈ ಹಿಂದೆ ಗಡುವು ನೀಡಿದ್ದರೂ ಕ್ಯಾರೆ ಎನ್ನದ ಖಾಸಗಿ ಟಿ.ವಿ.ವಾಹಿನಿಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ.ಅನಾಹುತ ಸಂಭವಿಸುವ ಮುನ್ನ ಚೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ…?