ದೇಹದ ಯಾವುದೇ ಭಾಗದಲ್ಲಾಗಲಿ ನೋವು ಕಾಣಿಸಿಕೊಂಡರೆ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ದೇಹದಲ್ಲಿ ನೋವಿದ್ದರೆ ಅದರಿಂದ ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ದೇಹದ ಹೆಚ್ಚಿನ ಎಲ್ಲಾ ಚಟುವಟಿಕೆಗಳಿಗೆ ಪ್ರಮುಖವಾಗಿರುವಂತಹ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ಅದು ಕೆಟ್ಟ ಪರಿಣಾಮ ಬೀರುತ್ತದೆ.
ಬೆನ್ನು ನೋವು ದೇಹದಲ್ಲಿ ಕಾಣಿಸಿಕೊಳ್ಳುವ ಸಹಿಸಲು ಅಸಾಧ್ಯವಾಗಿರುವ ನೋವು. ಅಷ್ಟೇ ಏಕೆ ಕುಳಿತುಕೊಳ್ಳಲು ನಿಂತುಕೊಳ್ಳಲು ಮತ್ತು ದೇಹವನ್ನು ಬಗ್ಗಿಸಲು ನಮಗೆ ಕಷ್ಟವಾಗುವುದು. ಬೆನ್ನು ನೋವು ನಿರಂತರವಾಗಿ ನಿಮ್ಮನ್ನು ಕಾಡುತ್ತಾ ಇದ್ದರೆ ಆಗ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಸಾಧ್ಯವಾಗಲ್ಲ.
ಗಾಯಾಳು ಸಮಸ್ಯೆ, ಜೀವನ ಶೈಲಿ, ಸರಿಯಾಗಿ ಕುಳಿತುಕೊಳ್ಳದೆ ಇರುವುದು, ದುರ್ಬಲ ಮೂಳೆ, ಅಸ್ಥಿರಜ್ಜುಗಳಲ್ಲಿ ಕಾಣಿಸಿಕೊಳ್ಳುವ ಸೋಂಕು ಇತ್ಯಾದಿಗಳು ಬೆನ್ನು ನೋವಿಗೆ ಕಾರಣವಾಗಿರಬಹುದು. ವೈದ್ಯರಲ್ಲಿಗೆ ಹೋದರೆ ಔಷಧಿ ಬರೆದು ಕೊಡುತ್ತಾರೆ.
ಅದರಲ್ಲೂ ಹೆಚ್ಚಿನವರು ನೋವುನಿವಾರಕಗಳನ್ನು ಬರೆದುಕೊಡುತ್ತಾರೆ. ಇದರಿಂದ ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು. ಮನೆಮದ್ದನ್ನು ಬಳಸಿದರೆ ಬೆನ್ನುನೋವನ್ನು ನಿವಾರಿಸಬಹುದು. ಈ ಮನೆಮದ್ದನ್ನು ಈಗಾಗಲೇ ಪ್ರಯೋಗಿಸಿ ಫಲಿತಾಂಶ ಕೂಡ ಪಡೆಯಲಾಗಿದೆ. ಇದರ ಬಗ್ಗೆ ತಿಳಿಯಿರಿ.
ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಶುಂಠಿ ರಸ 3-4 ಚಮಚ
*ತುಳಸಿ 10 ಎಲೆಗಳು
*ಈ ಮನೆಮದ್ದು ತುಂಬಾ ಪರಿಣಾಮಕಾರಿ ಮತ್ತು ಕೆಲವೊಂದು ಸಂಶೋಧನೆಗಳು ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಮಾಡಿದೆ.
*ಈ ಮನೆಮದ್ದಿನೊಂದಿಗೆ ಕೆಲವೊಂದು ಆರೋಗ್ಯಕರ ವ್ಯಾಯಾಮವನ್ನು ಪಾಲಿಸಿಕೊಂಡು ಹೋದರೆ ನಿಮಗೆ ಬೆನ್ನು ನೋವಿನ ಸಮಸ್ಯೆಯೇ ಇರದು. *ಶುಂಠಿ ಹಾಗೂ ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮಾಂಸಖಂಡ ಮತ್ತು ಸಮಸ್ಯೆ ಉಂಟಾಗುವ ಜಾಗದಲ್ಲಿರುವ ಉರಿಯೂತವನ್ನು ಇದು ಕಡಿಮೆ ಮಾಡುವುದು.
*ಈ ಮನೆಮದ್ದು ಬೆನ್ನಿಗೆ ರಕ್ತದ ಸರಬರಾಜನ್ನು ಹೆಚ್ಚಿಸಿ ನೋವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತಯಾರಿಸುವ ಹಾಗೂ ಸೇವಿಸುವ ವಿಧಾನ *ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ. ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ. *ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು. ಈ ಮನೆಮದ್ದನ್ನು ಪ್ರಯತ್ನಿಸಿ ಮತ್ತು ಫಲಿತಾಂಶದ ಬಗ್ಗೆ ತಪ್ಪದೆ ತಿಳಿಸಿ….