ಮದ್ದೂರು:- ಜಮೀನಿನಲ್ಲಿ ತುಂಡರಿಸಿ ಬಿದ್ದಿದ್ದ ತಂತಿಯಿಂದ ವಿದ್ಯುತ್ ಸ್ಪರ್ಶಿಸಿ ಉಳುಮೆ ಮಾಡುತ್ತಿದ್ದ ರೈತ ಮತ್ತು ಜಾನುವಾರು ಸಾವನಪ್ಪಿರುವ ಘಟನೆ ತಾಲೂಕಿನ ಬುಳ್ಳನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮಾಲಗಾರನಹಳ್ಳಿ ಗ್ರಾಮದ ಭದ್ರಯ್ಯರ ಮಗ ಮುತ್ತುರಾಜ್ (45) ಸಾವನ್ನಪ್ಪಿದ ದುರ್ದೈವಿ ರೈತನಾಗಿದ್ದಾನೆ
ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದು. ಇದನ್ನು ರೈತ ಗಮನಿಸದೆ ಇದ್ದುದ್ದರಿಂದ ದುರಂತ ಸಂಭವಿಸಿದೆ.
ಮಾಲಗಾರನಹಳ್ಳಿಯ ರೈತ ಮುತ್ತುರಾಜ್ ಬುಳ್ಳನದೊಡ್ಡಿಯ ತನ್ನ ಮಾವನ ಮನೆಗೆ ತೆರಳಿದ್ದರು, ಮಂಗಳವಾರ ಬೆಳಗ್ಗೆ ಜಮೀನು ಉಳುಮೆ ಮಾಡಲು ಜಾನುವಾರುಗಳ ಸಮೇತ ಹೋಗಿದ್ದು, ಉಳುಮೆಗೆ ಮುನ್ನ ಜಮೀನಿನೊಳಗೆ ಕಣ್ಣಾಡಿಸಿರಲಿಲ್ಲ.
ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು, ಆದರೆ ರೈತ ಇದನ್ನ ಗಮನಿಸಿರಲಿಲ್ಲ, ತನ್ನ ಪಾಡಿಗೆ ತಾನು ಉಳುಮೆ ಮಾಡುತ್ತಿದ್ದಾಗ ವಿದ್ಯುತ್ ತಂತಿ ಜಾನುವಾರು ಕಾಲಿಗೆ ತಗುಲಿದ್ದು, ಈ ವೇಳೆ ರೈತನಿಗೂ ವಿದ್ಯುತ್ ಸ್ಪರ್ಶಿಸಿದೆ.
ರೈತನ ಚೀರಾಟ ಕಂಡ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಸನ್ನ ತಕ್ಷಣ ಎಚ್ಚೆತ್ತು ವಿದ್ಯುತ್ ಸಂಪರ್ಕಕಡಿತಗೊಳಿಸಿ ಹೋಗಿ ನೋಡುವಷ್ಟರಲ್ಲಿ ರೈತ ಮುತ್ತುರಾಜ್ ಹಾಗೂ ಜಾನುವಾರು ಸಾವನ್ನಪ್ಪಿದ್ದವು.
ರೈತನ ಮೃತ ದೇಹವನ್ನು ಕೆ.ಹೊನ್ನಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸ ಲಾಗಿದ್ದು, ದುರಂತ ಸ್ಥಳಕ್ಕೆಪೊಲೀಸರು ಮತ್ತು ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಶಾಸಕ ಉದಯ್ ರವರ ಸಹೋದರ ಕೆ. ಎಂ ರವಿ ಕುಟುಂಬದವರನ್ನು ಸಾಂತ್ವಾನಿಸಿ ಪರಿಹಾರ ನೀಡಿದರು.
ಮದ್ದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.