ಬೆಂಗಳೂರು: ಕಾಂಗ್ರೆಸ್ನವರಿಗೆ ದಮ್ ಇದ್ದರೆ, ತಾಕತ್ ಇದ್ದರೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಷರತ್ತು ರಹಿತವಾಗಿ ಗ್ಯಾರಂಟಿಗಳನ್ನು ಜಾರಿ ಮಾಡಬೇಕು. ಇಲ್ಲವಾದರೆ ಇದೇ 19 ರ ನಂತರ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಹೋರಾಟ ಆರಂಭಿಸಲಾಗುವುದು ಎಂದು ಶಾಸಕ ಆರ್.ಅಶೋಕ ತಿಳಿಸಿದರು.
ಮತಾಂತರ ನಿಷೇಧವನ್ನು ತೆಗೆದು ಹಾಕುವ ಮೂಲಕ ಮತಾಂತರ ದಂಧೆಯಲ್ಲಿ ನಿರತರಾದವರಿಗೆ ರಹದಾರಿ ಮಾಡಿಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ. ಟಿಪ್ಪುವಿನ ಮತಾಂತರ ಸಿದ್ಧಾಂತಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ನಡೆಯುತ್ತಿದೆ. ಪಿಎಫ್ಐ, ಕೆಎಫ್ಡಿ ಪರವಾಗಿ ಕಾಂಗ್ರೆಸ್ ಪಕ್ಷ ಇದೆಯೇ ಎಂದು ಅವರು ಪ್ರಶ್ನಿಸಿದರು