ಮೇಷ: ಇಂದು ನೀವು ಸ್ನೇಹಿತರ ಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶೀಯ ವ್ಯಾಪಾರವು ಯಾವುದೇ ತೊಂದರೆ ಇಲ್ಲದೇ ನಡೆಯುವುದು. ನಿಮ್ಮ ಮಂತ್ರಕ್ಕೆ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು. ಹಿತಶತ್ರುಗಳ ನಿಮ್ಮ ವಿರುದ್ಧ ಸಂಚುರೂಪಿಸುವರು. ಆನ್ಲೈನ್ ವ್ಯಾಪಾರವು ಬಹಳ ಖರ್ಚಿನದ್ದಾಗಿದೆ. ಇಂದು ಮಿತಿ ಮೀರಿದ ದೂರವಾಣಿ ಕರೆಗಳು ಬರಬಹುದು. ಸರ್ಕಾರದಿಂದ ನಿಮಗೆ ಶುಭವಾರ್ತೆ ಸಿಗಲಿದೆ. ರಾಜಕೀಯದವರ ಒಡನಾಟ ಬೆಳೆಯಬಹುದು. ಸ್ತಿçÃಯರ ಸಹವಾಸ ಸಿಗಲಿದೆ.
ವೃಷಭ: ನಿಮ್ಮದೇ ಆದ ಚಿಂತನೆಯನ್ನು ಬಿಟ್ಟ ಬರಲು ನೀವು ತಯಾರಿಲ್ಲ. ನಿಮ್ಮವರನ್ನು ನೀವು ಕಳೆದುಕೊಂಡು ದುಃಖಪಡಬೇಕಾದೀತು. ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಈ ದಿನವನ್ನು ಬಹಳ ಉತ್ಸಹದಿಂದ ಕಳೆಯುವಿರಿ. ಆರ್ಥಿಕವಾಗಿ ನೀವು ಸಬಲರಾಗಬೇಕಾಗಿದೆ. ಸಂಗಾತಿಯ ಮಾತುಗಳು ನಿಮಗೆ ಅಸಮಾಧಾನ ತರಿಸಬಹುದು. ದೇವತಾರಾಧನೆಗೆ ಹೆಚ್ಚು ಮನಸ್ಸು ತೊಡಗುವುದು. ನಿಮ್ಮ ಇಚ್ಛಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಆತುರದ ನಿರ್ಧಾರವನ್ನು ಬಿಟ್ಟು ವಾಸ್ತವವಾಗಿ ಯೋಚಿಸಿ. ಏಕಮುಖಗಮನವು ತೊಂದರೆ ಕೊಟ್ಟೀತು.
ಮಿಥುನ: ಸಮಯವನ್ನು ಕಳೆಯುವುದು ಇಂದು ನಿಮಗೆ ಕಷ್ಟವಾದೀತು. ಸಮಯವನ್ನು ಸದುಪಯೋಗಮಾಡಿಕೊಳ್ಳಲು ನೀವು ಪ್ರಯತ್ನಿಸಬಹುದು. ದಾಂಪತ್ಯದಲ್ಲಿ ಸಾಮರಸ್ಯವು ಸ್ವಲ್ಪವೇ ಬರಲಿದೆ. ಅಪರಿಚಿತರು ನಿಮ್ಮ ನಡುವೆ ಏನಾದರೂ ಆಗುವಂತೆ ನೋಡಬಹುದು. ಪಾಲುದಾರಿಕೆಯಲ್ಲಿ ಇರುವವರು ಪರಸ್ಪರರ ಮಾತನ್ನು ಮಾತ್ರ ನಂಬಿ. ಅನ್ಯರ ಮಾತನ್ನು ಕೇಳಿಸಿಕೊಳ್ಳುವುದು ಬೇಡ. ಶ್ರದ್ಧೆಯ ಕೊರೆತೆಯು ಕಾಣಿಸುವುದು. ಕಛೇರಿಯಲ್ಲಿ ಕೆಲವರ ಕೆಲಸವು ನಿಮ್ಮ ಮೇಲೆ ಬರಬಹುದು. ಸಾಧ್ಯವಾದಷ್ಟು ಮಾಡಿ. ನಕಾರಾತ್ಮಕ ಪ್ರತಿಕ್ರಿಯೆ ಬೇಡ.
ಕರ್ಕ: ಪ್ರಯಾಣದ ದಣಿವು ನಿಮ್ಮನ್ನು ಬಾಧಿಸೀತು. ನೀವು ಯಾರಿಗಾದರೂ ಮಾದರಿಯಾಗಬೇಕು ಎಂದುಕೊಳ್ಳಬೇಕಿಲ್ಲ. ಮಕ್ಕಳಿಗೆ ಆದರೆ ಸಾಕು. ಸಂಗಾತಿಯ ತಪ್ಪನ್ನು ಹೇಳುವ ರೀತಿಯಲ್ಲಿ ಹೇಳಿ. ಇಲ್ಲವಾದರೆ ಸುಮ್ಮನೇ ವೈಮನಸ್ಯ ಉಂಟಾಗಬಹುದು. ಆವರಣವನ್ನು ಖರೀದಿಸಲಿದ್ದೀರಿ. ನಿಮ್ಮ ನಂಬಿಕೆಯು ಅರ್ಧ ಸತ್ಯ ಹಾಗೂ ಸುಳ್ಳಿನಿಂದ ಇರಲಿದೆ. ಮಕ್ಕಳನ್ನು ಇಷ್ಟಪಡುವಿರಿ. ಎಲ್ಲ ಸಮಯದಲ್ಲಿಯೂ ನಿಮ್ಮ ಮಾತು ಸರಿಯಲ್ಲ. ಹಿರಿಯರಿಗೆ ಎದುರಾಡುವುದು ನಿಮಗೆ ಶೋಭೆಯಾಗದು.
ಸಿಂಹ: ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಭೀತಿಯು ಇರಲಿದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುವರು. ನೀವು ವಂಶಪಾರAಪರ್ಯವಾಗಿ ಬಂದ ವಿದ್ಯೆಯನ್ನು ದುಡಿಮೆಗೆ ಬಳಸಿಕೊಳ್ಳುವಿರಿ. ಸಂಗಾತಿಯ ಕೆಲವು ವರ್ತನೆಗಳು ನಿಮಗೆ ವಿಚಿತ್ರ ಎನಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ. ನಿಮ್ಮ ವಿದ್ಯುತ್ ಉಪಕರಣಗಳನ್ನು ಯಾರಾದರೂ ಹಾಳುಮಾಡುವರು. ನೀವು ಹಣವನ್ನು ಖರ್ಚುಮಾಡಬೇಕಾಗಿ ಬರಬಹುದು. ಭಕ್ತಿ ಇದ್ದರೂ ಅದನ್ನು ಸದ್ವಿನಿಯೋಗಮಾಡಲು ಸಮಯ ಸಾಕಾಗದು. ಸಾಧ್ಯವಿದ್ದಲ್ಲಿ ಕುಲದೇವರ ಸ್ಮರಣೆಯನ್ನು ಆಗಾಗ ಮಾಡಿ.
ಕನ್ಯಾ: ಸಂಗಾತಿಯ ನಡುವಿನ ವೈಮನಸ್ಯವು ಮಕ್ಕಳಿಂದ ದೂರಾಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ಶಿಸ್ತಿನಿಂದ ಇರಲಿ. ಕರ್ತವ್ಯದ ವಿಚಾರದಲ್ಲಿ ನೀವು ಸೋಲುವಿರಿ. ನಿಮ್ಮ ಮಾತುಗಳು ಕುಹಕದಿಂದ ಇರಬಹುದು. ನಿಮ್ಮನ್ನು ಪ್ರದರ್ಶಿಸಲು ಇದು ಸಕಾಲವಲ್ಲ. ಎಂತಹ ಒಳ್ಳೆಯದನ್ನು ತೋರಿಸಿದರೂ ಅದು ನಿಮಗೆ ವಿಪರೀತ ಪರಿಣಾಮವನ್ನು ಉಂಟುಮಾಡೀತು. ಎಲ್ಲ ಮೋಡಗಳೂ ಮಳೆಯನ್ನು ಸುರಿಸುವುದಿಲ್ಲ. ಹಣದ ಅನಿವಾರ್ಯತೆ ಇದ್ದರೂ ಸಿಕ್ಕುವುದು ಕಷ್ಟವಾದೀತು. ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು.
ತುಲಾ: ನಿಮ್ಮ ಗೌಪ್ಯತೆಯನ್ನು ಬಯಲು ಮಾಡಲು ಯಾರಾದರೂ ಪ್ರಯತ್ನಿಸಬಹುದು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರೆನಿಸಕೊಂಡವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ಪುಣ್ಯಕ್ಷೇತ್ರಕ್ಕೆ ನೀವು ಹೋಗಲಿದ್ದೀರಿ. ಹಿರಿಯರ ಮಾತನ್ನು ಕೇಳಿದ ಪರಿಣಾಮ ನಿಮಗೆ ಅನುಕೂಲವಾಗಿದೆ ಎಂದು ಅನ್ನಿಸುವುದು. ಏಕಾಗ್ರತೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ತಂದೆಯಿAದ ನಿಮಗೆ ಶುಭವಾರ್ತೆ ಸಿಗಬಹುದು. ನಿಮ್ಮ ಕೈಲಾಗುವ ಕೆಲಸವನ್ನಷ್ಟೇ ಮಾಡಿ. ನಿಮ್ಮನ್ನು ಮೀರಿದ ಕೆಲಸವನ್ನು ಮಾಡುವುದು ಬೇಡ.
ವೃಶ್ಚಿಕ: ಉದ್ಯಮದಲ್ಲಿ ಸ್ವಲ್ಪ ಒತ್ತಡ ಹಾಗೂ ಗೊಂದಲದ ಸನ್ನಿವೇಶಗಳು ಬರಬಹುದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆಲೋಚನೆಗಳು ಮಾರ್ಗವನ್ನು ತಪ್ಪಬಹುದು. ವಾಹನಖರೀದಿಗೆ ನಿಮ್ಮದೇ ಆದ ಕೆಲವು ನಿಯಮಗಳು ಇರಬಹುದು. ಇಂದು ನಿಮ್ಮ ಮಾತಿನ ಹರಿತ ಮುಂದಿನವರನ್ನು ಘಾಸಿ ಮಾಡೀತು. ನಿಮ್ಮ ಸಹಾಯಕ ನೌಕರರ ಕಾರಣದಿಂದ ನೀವು ಹೇಳಿಸಿಕೊಳ್ಳಬೇಕಾದೀತು. ಬಾಲಿಶ ಆಲೋಚನೆಯನ್ನು ಬಿಡುವುದು ಉತ್ತಮ. ನಿಮ್ಮ ದೃಷ್ಟಿ ವಿಶಾಲವಾಗಿ ಇರಲಿ. ಕಾಲು ನೋವು ಅಧಿಕವಾಗಬಹುದು.
ಧನುಸ್ಸು: ನಿಮ್ಮ ಪ್ರೇಮಪ್ರಕರಣವು ಗೊಂದಲದಲ್ಲಿ ಇರಬಹುದು. ಅನ್ಯರ ಮಾತು ಕೇಳಿ ಯಾವ ತೀರ್ಮಾನಕ್ಕೂ ಬರುವುದು ಬೇಡ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೆ ನೀವು ಕೋಪಗೊಳ್ಳಬಹುದು. ನಿಮ್ಮ ಉತ್ಸಾಹವು ಸಂಜೆಯ ಸಮಯಕ್ಕೆ ಅತಿಯಾಗಿ ಇರುವುದು. ಉದ್ಯೋಗದ ನಿಮಿತ್ತ ನೀವು ದೂರದ ಊರಿಗೆ ಪ್ರಯಾಣಮಾಡಬೇಕಾಗಿ ಬರಬಹುದು. ಅಲ್ಲಿನ ವಾತಾವರಣ ನಿಮಗೆ ಅನುಕೂಲವಾಗದೆಯೂ ಇರಬಹುದು. ನಿಮಗೆ ಆಸಕ್ತಿಯ ವಿಚಾರವು ಒಂದಿದ್ದರೂ ಮನೆಯವರ ಒತ್ತಾಯಕ್ಕೆ ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಸಮಯವನ್ನು ವ್ಯರ್ಥಮಾಡದೇ ಸದ್ವಿನಿಯೋಗ ಮಾಡಿಕೊಳ್ಳುವುದು ಉತ್ತಮ.
ಮಕರ: ಒಂದು ಗುಣದಿಂದ ಅವರ ಸ್ವಭಾವವನ್ನು ಅಳೆಯುವುದು ಸರಿಯಲ್ಲ. ಸ್ವಲ್ಪ ದಿನ ಕಾದುನೋಡುವುದು ಒಳ್ಳೆಯದು. ಆತುರದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪರೋಪಕಾರಕ್ಕೆ ಒಂದು ಮಿತಿ ಇರಲಿ. ನಿಮ್ಮ ಅಪಮಾನವನ್ನು ಯಾರ ಬಳಿಯೂ ಪ್ರಸ್ತಾಪಿಸುವುದು ಬೇಡ. ಕೆಲವರ ಬೆಂಬಲವನ್ನು ಇಟ್ಟುಕೊಂಡ ದೊಡ್ಡ ಕೆಲಸವನ್ನೂ ಮಾಡುವುದು ಅಸಾಧ್ಯ. ಆಪ್ತರನ್ನು ದೂರ ಮಾಡಿಕೊಳ್ಳಬೇಕಾದ ಸಂದರ್ಭವು ಬರಬಹುದು. ಮುಖಕ್ಕೆ ಸಂಬAಧಿಸಿದ ರೋಗವು ಬರಬಹುದು. ಉತ್ತಮ ಚಿಕಿತ್ಸೆ ಪಡೆದು ಸರಿ ಮಾಡಿಕೊಳ್ಳಿ.
ಕುಂಭ: ನಿಮಗೆ ಬೇಕಾದುದನ್ನು ನೀವು ಪಡೆಯುವಿರಿ. ಅನ್ಯರು ನಿಮ್ಮನ್ನು ಗೇಲಿ ಮಾಡಿಯಾರು. ಕಛೇರಿಯ ಕಾರ್ಯಗಳು ಕೆಲವು ನಿಧಾನವಾಗಿ ಸಾಗುವುದು. ಬೇಗ ಮುಗಿಸಬೇಕಾದುದನ್ನು ಬಹಳ ವಿಳಂಬಮಾಡುವಿರಿ. ನಿಮಗೆ ಇಷ್ಟವಾಗದೆ ಕಡೆ ಹೋಗುವುದು ಬೇಡ. ಆತ್ಮೀಯರು ನಿಮ್ಮನ್ನು ಭೇಟಿ ಮಾಡುವರು. ಬಂದಿರುವ ಅವಕಾಶವನ್ನು ಬಿಟ್ಟು ದುಃಖಪಡುವ ಅವಶ್ಯಕತೆ ಇಲ್ಲ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವಿರಿ. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ನಿಮಗೇ ಸರಿ ಎನಿಸದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟವಾದೀತು. ಅವ್ಯವಹಾರದ ಬಗ್ಗೆ ಗಮನ ಬೇಡ.
ಮೀನ: ನಿಮ್ಮ ಕೆಲಸಗಳು ನಿಮ್ಮನ್ನು ಯಾರೆಂದು ಹೇಳುವುದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ನಿಮ್ಮ ಮನಸ್ಸು ತೆರೆದುಕೊಳ್ಳಬಹುದು. ದಾನದಲ್ಲಿ ಇಂದು ಹೆಚ್ಚಿನ ಖುಷಿಯನ್ನು ಕಾಣುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬೇರೆಯವರ ಮೇಲೆ ಒತ್ತಡ ತರುವುದು ಬೇಡ. ನಿಮಗೆ ಸಹೋದರನು ಸಹಾಕಾರ ನೀಡುವನು.ಧೈರ್ಯದಿಂದನೀವು ಮಾಡಬೇಕಾದ ಕೆಲಸವನ್ನು ಮಾಡಿ. ಅಧಿಕಾರಿಗಳ ವಿಚಾರದಲ್ಲಿ ನೀವು ಭಯ ಪಡುವುದು ಬೇಡ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಿ. ಮನೆಗೆ ಬಂದ ಬಂಧುಗಳನ್ನು ಸರಿಯಾಗಿ ಮಾತನಾಡಿಸಿ. ನಿಮ್ಮ ಲಘುವಾದ ಮಾತುಗಳು ಬೇಸರ ತರಿಸೀತು.