ನಂಜನಗೂಡು:- ಪ್ರತಿ ದಿನ ಬೆಳ್ಳಂಬೆಳಗ್ಗೆ ನಗರದ ಹಲವು ರಸ್ತೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಕುದುರೆಗಳ ಅವಳಿ ಮಿತಿಮೀರಿದ್ದು ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು ಪ್ರತಿ ದಿನ 10ಕ್ಕೂ ಹೆಚ್ಚು ಕುದುರೆಗಳು ರಸ್ತೆಗಳಲ್ಲಿ ಕುಣಿಯುತ್ತ ಕುಪ್ಪಳಿಸಿ ರಸ್ತೆ ಬದಿಯಲ್ಲಿ ಓಡಾಡುವ ಮಕ್ಕಳ ಮೇಲೆ ವೃದ್ಧರ ಮೇಲೆ ಮಹಿಳೆಯರ ಮೇಲೆ ಮೈ ಮೇಲೆ ಬಿದ್ದು ಹೆಚ್ಚಿನ ಅನಾಹುತ ಉಂಟು ಮಾಡುತ್ತಿವೆ ಇದರ ಬಗ್ಗೆ ನಗರಸಭೆಗೆ 3-4 ವರ್ಷಗಳಿಂದ ಮಾಹಿತಿ ನೀಡಿ ತಿಳಿಸಿದರು ಕೂಡ ಅಧಿಕಾರಿಗಳು ಕ್ರಮ ಕೈಗೊಳ್ಳದೆ ತಮಗೆ ಸಂಬಂಧವಿಲ್ಲದಂತೆ ಕಚೇರಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ
ಇಂದಿನ ಸಭೆಗಳಲ್ಲಿಯೂ ಕೂಡ ನಾಯಿಗಳು ಕುದುರೆಗಳು ಬಿಡಾಡಿ ಹಸುಗಳ ಬಗ್ಗೆ ನಗರಸಭೆ ಸದಸ್ಯರು ಸಭೆಯಲ್ಲಿ ಚರ್ಚಿದರು ಕೂಡ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಯಕ್ಷಪ್ರಶ್ನೆಯಾಗಿದೆ
ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ