ಮೇಲುಕೋಟೆ:- ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ಸುತ್ತ ಸರ್ವೆನಂಬರ್ 15ರಲ್ಲಿ 50ಕ್ಕೂ ಹೆಚ್ಚು ಅಕ್ರಮಕಟ್ಟಡಗಳಿದ್ದು, ಅಕ್ರಮವಾಗಿ ಕೆಲವು ಕಟ್ಟಡಗಳು ನಿರ್ಮಾಣವಾಗುತ್ತಿವೆ ಜಿಲ್ಲಾಡಳಿತ ಸರ್ವೆಮಾಡಿ ಎಲ್ಲವನ್ನೂ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಸೋಮಶೇಖರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾಹೇಳಿಕೆ ನೀಡಿಕ್ರಮಕ್ಕೆ ಒತ್ತಾಯಿಸಿರುವ ಅವರು ಸರ್ವೆನಂಬರ್ 15ರಲ್ಲಿ ಒತ್ತುವರಿಯ ರಾಜ್ಯಬಾರವೇ ನಡೆದಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿಕುಳಿತಿದ್ದಾರೆ. ಆದರೆ ಒಬ್ಬರನ್ನು ಮಾತ್ರ ಗುರಿಯಾಗಿಸಿ ಕಿರುಕುಳನೀಡುವ ಕಾರ್ಯನಡೆಯುತ್ತಿದೆ ಎಂದು ಅಸಮದಾನವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಬದ್ಧತೆಯಿದ್ದರೆ ಎಲ್ಲಾ ಅಕ್ರಮಕಟ್ಟಡಗಳನ್ನೂ ಗುರುತಿಸಿ ಪ್ರಾಮಾಣಿಕವಾಗಿ ತೆರವುಕಾರ್ಯಮಾಡಲಿ. ಗ್ರಾ.ಪಂವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಅದುಬಿಟ್ಟು ವೈಯುಕ್ತಿಕ ದ್ವೇಶಸಾಧಿಸುವುದು ಸರಿಯಲ್ಲ ಎಂದಿದ್ದಾರೆ.
ದಶಕಗಳಿಂದಲೂ ಸರ್ವೆನಂಬರ್ 15ರಲ್ಲಿ ಹಲವು ಮನೆಗಳು ಹಕ್ಕುಪತ್ರ ಹಾಗೂ ಗ್ರಾ.ಪಂ ಪರವಾನಿಗೆಯಿಲ್ಲದೆ ನಿರ್ಮಾಣವಾಗಿವೆ ದೊಡ್ಡ ಬಂಡೆಗಳನ್ನು ಒಡೆದು ಕಟ್ಟಡಕಟ್ಟಲಾಗಿದೆ ಆಗೆಲ್ಲಾ ಸುಮ್ಮನಿದ್ದ ಅಧಿಕಾರಿಗಳು ಏಕಾಏಕಿ ಒಬ್ಬವ್ಯಕ್ತಿಯನ್ನು ಗುರುತಿಸಿ ಕಿರುಕುಳ ನೀಡುತ್ತಿರುವುದು ಕಾನೂನುವಿರೋಧಿಯಾಗುತ್ತದೆ. ಅಧಿಕಾರಿಗಳು ಹೈಕೋರ್ಟ ಆದೇಶಕ್ಕೆ ಮನ್ನಣೆ ನೀಡಬೇಕು, ಉಚ್ಛನ್ಯಾಯಾಲಯದಿಂದ ಅಂತಿಮ ಆದೇಶ ಬರುವವರೆಗೆ ಕಾಯಬೇಕು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ಮನವಿಯಂತೆ ತಕ್ಷಣವೇ ಸರ್ವೆಕಾರ್ಯ ಆರಂಭಿಸಿ ಸಂಪೂರ್ಣ ಅಕ್ರಮಕಟ್ಟಡಗಳನ್ನು ಗುರುತಿಸುವ ಕಾರ್ಯಮಾಡಬೇಕು ಅದಕ್ಕೂ ಮೊದಲು ಸರ್ವೆನಂಬರ್ 15ರಲ್ಲಿ ಈಗಲೂ ಅಕ್ರಮವಾಗಿ ಹಲವು ಕಟ್ಟಡಗಳು ನಿರ್ಮಾಣವಾಗುತ್ತಿದ್ದು ಇವುಗಳ ನಿರ್ಮಾಣಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದಿದ್ದಾರೆ
15ನೇ ಸರ್ವೆನಂಬರ್ನಲ್ಲಿ ಅಕ್ರಮಕಟ್ಟಡಗಳ ದೊಡ್ಡಪಟ್ಟಿಯೇ ಇದ್ದು ನಮಗೆ ತಿಳಿದ್ದರೂ ಸಂಪೂರ್ಣ ಸರ್ವೆ ಆಗುವವರೆಗೆ ಯಾರಹೆಸರನ್ನೂ ಹೇಳುವುದಿಲ್ಲ ಒಟ್ಟಾರೆ 50ಕ್ಕೂ ಅಕ್ರಮ ಹೆಚ್ಚು ಅಕ್ರಮ ಕಟ್ಟಡಗಳಿದ್ದು, ಸ್ವಂತಮನೆಯಿದ್ದವರೂ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಬದ್ಧತೆಯಿದ್ದು, ಪ್ರಾಮಾಣಿಕವಾಗಿ ಕೆಲಸಮಾಡಬೇಕೆಂಬ ಆಶಯವಿದ್ದರೆ ಈ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕಿದೆ ಎಂದು ಎನ್.ಸೋಮಶೇಖರ್ ಸವಾಲುಹಾಕಿದ್ದಾರೆ ಇದೆಲ್ಲಾ ಅಕ್ರಮಗಳನ್ನು ಬಿಟ್ಟು ಹಕ್ಕುಪತ್ರಹೊಂದಿ ನ್ಯಾಯಾಲಯದಿಂದ ಆದೇಶಪಡೆದಿರುವ ಸಣ್ಣಮ್ಮ ಬಿನ್ ರಾಮೇಗೌಡರಮನೆಯನ್ನು ಮಾತ್ರ ತೆರವುಗೊಳಿಸಲು ಮುಂದಾದರೆ ಮೇಲುಕೋಟೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಹೀಗಾಗಿ ಅಧಿಕಾರಿಗಳು ಕಾನೂನುಪಾಲಿಸಬೇಕು ಎಂದಿದ್ದಾರೆ
ಸರ್ವೆ ನಂ 15ರಲ್ಲಿ ಸರ್ವೆ ಆರಂಭ ಅಕ್ರಮ ನಿರ್ಮಾಣ ಸ್ಥಗಿತಕ್ಕೆ ಸೂಚನೆ
ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ಸುತ್ತಮುತ್ತ ಸರ್ವೆ15ರಲ್ಲಿ ಸರ್ವೆಕಾರ್ಯ ಆರಂಭವಾಗಲಿದ್ದು ಅಕ್ರಮ ಕಟ್ಟಡಗಳನ್ನು ಗುರುತಿಸುವ ಕಾರ್ಯ ಆರಂಭವಾಗಲಿದೆ ಇದೇ ವೇಳೆ ಎಲ್ಲಾ ಅಕ್ರಮ ನಿರ್ಮಾಣವನ್ನೂ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತಿಚೆಗೆ ಅಕ್ರಮ ಕಟ್ಟಡ ನಿರ್ಮಾಣ ವಿಚಾರ ಮುನ್ನಲೆಗೆ ಬಂದಿದ್ದು ಕಾನೂನುರೀತಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.