ಹುಣಸೂರು:- ನಗರದ ಬೋಟಿ ಬಜಾರ್ ರಸ್ತೆಯ ಪರಸಯ್ಯ ಛತ್ರ ಪಕ್ಕದ ಎಸ್.ಎಸ್ ಸಾಮಿಲ್ ಬಳಿ ಅಲ್ಲಿನ ವಾಚ್ಮನ್ ಸೇರಿದಂತೆ ಮತ್ತೊಬ್ಬ ಬುದ್ದಿಮಂದ್ಯಾ ವ್ಯಕ್ತಿಯನ್ನು ತಲೆ ಮೇಲೆ ಬಾರದ ವಸ್ತು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಮಧ್ಯ ರಾತ್ರಿ ನಡೆದಿದೆ.
ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯ ವಾಚ್ಮನ್ ವೆಂಕಟೇಶ್ (75) ವರ್ಷ ಹಾಗೂ ಮತ್ತೊಬ್ಬರು ಷಣ್ಮುಖ (65) ವರ್ಷ ಹತ್ಯೆಯಾದ ನತದೃಷ್ಟರು.
ವೆಂಕಟೇಶ್ ಇದೇ ಸಾಮಿಲ್ನಲ್ಲಿ ಕೆಲಸ ಮಾಡುತ್ತಿದ್ದರೆ, ಷಣ್ಮುಖರಿಗೆ ಯಾರು ಧಿಕ್ಕುದೆಸೆ ಇಲ್ಲದೆ ಸಣ್ಣ ಪುಟ್ಟ ಕೆಲಸ ಮಾಡುತ್ತ ಇದೆ ಮಿಲ್ ಬಳಿ ಮಲಗುತ್ತಿದರು ಎನ್ನಲಾಗಿದೆ.
ಯಾಕೆ ಈ ಹತ್ಯೆ ನಡೆದಿದೆ ಎಂಬುದಕ್ಕೆ ಇನ್ನೂ ನಿಖರ ಮಾಹಿತಿ ತಿಳಿದು ಬಂದಿಲ್ಲ. ಬೆಲೆಬಾಳುವ ಮರ ಕದಿಯಲ್ಲೂ ಬಂದು ಈ ಹತ್ಯೆ ಮಾಡಿದರೋ ಇಲ್ಲ ಬೇರೆ ಏನು ಕಾರಣಕ್ಕೆ ಎಂದು ಪೆÇಲೀಸರ ತನಿಖೆ ಇಂದ ತಿಳಿಯಬೇಕಿದೆ. ಸ್ಥಳಕ್ಕೆ ಶ್ವಾನ ದಳದೊಂದಿಗೆ ಪೆÇಲೀಸರು ಬಂದು ಮಹಜರು ನಡೆಸಿದರು.
ಈ ಹಿಂದೆ ಕೂಡ ಇಲ್ಲಿನ ಪಕ್ಕದ ಸಾಮಿಲ್ನಲ್ಲಿ ಇದೆ ರೀತಿ ವಾಚ್ಮನ್ ಹತ್ಯೆಯಾಗಿದನ್ನು ಇಲ್ಲಿ ಸ್ಮರಿಸಹುದು.