ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ನಗರದ ಬೀದಿ ಬೀದಿಗಳಲ್ಲಿ ದೀಪಾಲಂಕಾರ, ಸ್ವಚ್ಛತೆ, ಬಣ್ಣಗಳಿಂದ ಕೂಡಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದರೇ ಜಿಲ್ಲಾಡಳಿತ ಯಡವಟ್ಟುವೊಂದನ್ನು ಮಾಡಿಬಿಟ್ಟಿದೆ.
ನಾಡಹಬ್ಬ ದಸರಾವನ್ನು ವಿಜೃಂಭಣೆಯನ್ನು ಆಚರಿಸುವ ಸಲುವಾಗಿ ಜಿಲ್ಲಾಡಳಿತ ರಸ್ತೆಗಳಿಗೆ ಬಣ್ಣದ ಬಣ್ಣದ ಚಿತ್ತಾರವುಳ್ಳ ಚಿತ್ರಿಸುತ್ತಿದ್ದು, ಆದರೀಗ ಜಿಲ್ಲಾಡಳಿತದ ಒಂದು ಯಡವಟ್ಟಿನಿಂದ ಜನರ ಭಾವನೆಗೆ ಧಕ್ಕೆ ಉಂಟು ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದೆ.
ಕೆ.ಆರ್.ವೃತ್ತದಲ್ಲಿರುವ ಪಾದಚಾರಿಗಳು ಸಂಚಾರಿಸುವ ಮಾರ್ಗದಲ್ಲಿ ಆನೆಯ ಚಿತ್ರವನ್ನು ಬಿಡಿಸಿ ಮೈಸೂರಿನ ಜನರ ಭಾವನೆ ಧಕ್ಕೆ ಉಂಟು ಮಾಡಿದೆ. ಹಲವು ಪ್ರವಾಸಿಗರು ಹಾಗೂ ಸಾರ್ವಜನಿಕರು ಅನೇಕರಿಗೆ ಇದರ ಅರಿವೇ ಇಲ್ಲದೆ ಆನೆಯ ಚಿತ್ರವನ್ನು ಕಾಲಿನಲ್ಲಿ ತುಳಿದುಕೊಂಡು ಓಡಾಡುತ್ತಿರುವುದು ಮೈಸೂರಿನ ಸಾರ್ವಜನಿಕರಿಗೆ ಅಸಮಾಧಾನ ಮೂಡಿದೆ.
ಏಕೆಂದರೆ ನಾಡಹಬ್ಬ ದಸರಾ ಎಂದರೆ ಅದೊಂದು ಸಂಭ್ರಮ, ಸಡಗರ, ಭಕ್ತಿಭಾವದ ಸಂಕೇತ. ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ತಿರುಗುವ ಆನೆಯನ್ನು ಭಕ್ತಿ ಭಾವದಿಂದಲೇ ಮೈಸೂರಿನ ಸಾರ್ವಜನಿಕರು ನೋಡುತ್ತಾರೆ. ಅದರಂತೆಯೇ ಸರ್ಕಾರ ಹಾಗೂ ಜಿಲ್ಲಾಡಳಿತವೂ ಸಹ ದಸರಾ ಆರಂಭಕ್ಕೂ ಮುನ್ನ ಗಜಪಡೆ ಸ್ವಾಗತಕ್ಕೆ ಶುಭಲಗ್ನದಲ್ಲಿ ಪೂಜೆ ಕೈಂಕಾರ್ಯಗಳನ್ನು ನಡೆಸಿಯೇ ಅರಮನೆಗೆ ಪ್ರವೇಶ ಮಾಡಿಕೊಳ್ಳುತ್ತದೆ. ಇಷ್ಟೇಲ ಸಾಂಪ್ರಾದಾಯಿಕ ಹಾಗೂ ದೈವಿಕ ಭಾವನೆಗಳು ಹೊಂದಿರುವ ಮೈಸೂರಿಗರು ನಗರದ ಪಾದಚಾರಿ ಮಾರ್ಗದಲ್ಲಿ ಈ ರೀತಿ ಚಿತ್ರವನ್ನು ಬರೆದಿರುವುದಕ್ಕೆ ಆಕ್ಷೇಪನೆ ವ್ಯಕ್ತಪಡಿಸುತ್ತಿದ್ದು, ಆದಷ್ಟೂ ಬೇಗ ಈ ಆನೆಗಳ ಚಿತ್ರವನ್ನು ತೆಗೆದು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.