ಟೀಂ ಇಂಡಿಯಾದ ಬ್ಯಾಟ್ಸ್ಮನ್ ಶಿಖರ್ ಧವನ್ ಹಿಂದೊಮ್ಮೆ ಹೆಚ್ಐವಿ ಟೆಸ್ಟ್ ಮಾಡಿಸಿಕೊಂಡ ಬಗ್ಗೆ ರಿವೀಲ್ ಮಾಡಿದ್ದಾರೆ. ಆ ಮೂಲಕ ಗಬ್ಬರ್ ಸಿಂಗ್ ಹೆಚ್ಐವಿ ಟೆಸ್ಟ್ ಮಾಡಲು ನಿಜವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಶಿಖರ್ ಧವನ್ ಟ್ಯಾಟೂ ಹಾಕಿಸಿಕೊಳ್ಳೋದು ಅಂದ್ರೆ ಬಲು ಇಷ್ಟವಂತೆ. ಹಾಗಾಗಿ ಹದಿಹರೆಯದ ವಯಸ್ಸಿನಲ್ಲೇ ಟ್ಯಾಟೂ ಹಾಕಿಸಿಕೊಂಡಿದ್ದರಂತೆ. ಆದರೆ ಮನೆಯವರಿಗೆ ತಿಳಿಯದಂತೆ ಟ್ಯಾಟೂ ಹಾಕಿಸಿಕೊಂಡಿದ್ದ ಅವರು ಮರೆ ಮಾಚಲು ಸಾಕಷ್ಟು ಕಷ್ಟಪಟ್ಟಿದ್ದಾರಂತೆ.
ಇತ್ತೀಚೆಗೆ ಶಿಖರ್ ಧವನ್ ಖಾಸಗಿ ಮಾಧ್ಯಮವೊಂದು ನಡೆಸಿದ ‘ಸೀಧಿ ಬಾತ್‘ ಕಾರ್ಯಕ್ರಮದಲ್ಲಿ ಟ್ಯಾಟೂ ಹಾಕಿಸಿಕೊಂಡ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಬಳಸಿದ ಸೂಜಿ ಬಗ್ಗೆ ಭಯದಿಂದ ಹೆಚ್ಐವಿ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದೆ ಎಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಶಿಖರ್ ಧವನ್ 14ನೇ ವಯಸ್ಸಿಗೆ ಮನಾಲಿಗೆ ಹೋಗಿದ್ದರಂತೆ. ಈ ವೇಳೆ ಮನೆಯವರಿಗೆ ತಿಳಿಯದೆ ಟ್ಯಾಟೂ ಹಾಕಿಸಿಕೊಂಡಿದ್ದರಂತೆ. ಪೋಷಕರಿಗೆ ಹೆದರಿ ಶಿಖರ್ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಇದನ್ನು ಮರೆ ಮಾಚಲು 3 ರಿಂದ 4 ತಿಂಗಳು ಸತತವಾಗಿ ಶ್ರಮಪಟ್ಟಿದ್ದೆ. ಆ ಬಳಿಕ ಅವರ ತಂದೆಗೆ ಈ ವಿಚಾರ ತಿಳಿದು ಧವನ್ಗೆ ನಾಲ್ಕು ಏಟು ಹೊಡೆದಿದ್ದರು ಎಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಹೀಗೆ ಮಾತನಾಡುತ್ತಾ ಅವರು, ಟ್ಯಾಟೂ ಹಾಕಿಸಿಕೊಂಡ ಬಳಿಕ ನನ್ನಲ್ಲಿ ಭಯ ಕಾಡಿತ್ತು. ಏಕೆಂದರೆ ಟ್ಯಾಟೂ ಹಾಕಲು ಅವರು ಯಾರಿಗಾದರು ಬಳಸಿದ ಸೂಜಿಯನ್ನು ಬಳಸಿದ್ದಾರೆಯೇ? ಎಂಬ ಪ್ರಶ್ನೆ ಕಾಡಿತ್ತು. ಕೊನೆಗೆ ಹೆಚ್ಐವಿ ಪರೀಕ್ಷೆ ಮಾಡಿಸಿದ್ದೆ, ನೆಗೆಟಿವ್ ರಿಪೋರ್ಟ್ ಬಂದಿತ್ತು ಎಂದು ಸಮಾಧಾನಗೊಂಡಿದ್ದೆ ಎಂದು ಹೇಳಿದ್ದಾರೆ.