ತಮಿಳು ಅಜಿತ್ರನ್ನ ಕೆಜಿಎಫ್ ನಿರ್ಮಾತ ಪ್ರಶಾಂತ್ ನೀಲ್ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೆಜಿಎಫ್ ಚಾಪ್ಟರ್ ಒನ್, ಚಾಪ್ಟರ್ ೨ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲನ್ನು ಸೃಷ್ಟಿಸಿದ ಸಿನಿಮಾ. ಕನ್ನಡಿಗರ, ಕನ್ನಡ ಸಿನಿಮಾ ತಾಕತ್ತನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಸಿನಿಮಾ ಕೆಜಿಎಫ್?. ಇದೇ ಸಿನಿಮಾ ತಂಡ ಈಗ ಮತ್ತೊಂದು ಇತಿಹಾಸವನ್ನು ಸೃಷ್ಟಿಸಲು ಟೊಂಕ ಕಟ್ಟಿಕೊಂಡು ನಿಂತಿದೆ.
ಕೆಜಿಎಫ್ ಚಾಪ್ಟರ್ ೩ ಸೃಷ್ಟಿಯಾಗಲು ಎಲ್ಲಾ ವೇದಿಕೆಗಳು ಸಿದ್ಧಗೊಂಡಿವೆ. ಬೆಳ್ಳಿ ತೆರೆಯ ಮೇಲೆ ಮತ್ತೊಮ್ಮೆ ರಾಕಿಭಾಯ್ ಅಬ್ಬರಿಸಲು ಸಜ್ಜಾಗಿದ್ದಾನೆ. ಇದರ ನಡುವೆ ಬಂದಿರುವ ಮತ್ತೊಂದು ದೊಡ್ಡ ಸುದ್ದಿ ಏನಂದ್ರೆ ಅದು ಕೆಜಿಎಫ್ ಚಾಪ್ಟರ್ ೩ಗೆ ತಮಿಳು ದಿಗ್ಗಜ ನಟ ಅಜಿತ್ ಎಂಟ್ರಿ ಕೊಡಲಿದ್ದಾರೆ ಅನ್ನೋದು.
ಅಜಿತ್ಗಾಗಿ ಪ್ರಶಾಂತ್ ನೀಲ್ ಒಂದು ಸಿನಿಮಾವನ್ನು ರೆಡಿ ಮಾಡಿದ್ದು, ಆ ಸಿನಿಮಾ ಬಗ್ಗೆ ಮಾತುಕತೆಯಾಗಿದ್ದು ಸದ್ಯದಲ್ಲಿಯೇ ಶುರುವಾಗುವ ಸೂಚನೆ ಇದೆ. ಈ ಸಿನಿಮಾ ಮುಗಿದ ಬಳಿಕ ಕೆಜಿಎಫ್ ೩ನಲ್ಲೂ ನಟಿಸಲು ಅಜಿತ್ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು ಸದ್ಯದಲ್ಲಿಯೇ ಎಲ್ಲವೂ ಫೈನಲ್ ಆಗಿದೆ. ಈ ಎರಡು ಚಿತ್ರಕ್ಕೂ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅವರೇ ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ.
KGF ಕೆಜಿಎಫ್ ಚಾಪ್ಟರ್ 3ನಲ್ಲಿ ಅಜಿತ್ ಎಂಟ್ರಿ
