ಮೈಸೂರು:- ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಜೊತೆ ಮೈಸೂರು ನಗರದ ಮೈಲಾರಿ ಹೋಟೆಲ್ಗೆ ಭೇಟಿ ನೀಡಿದರು.
ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಪ್ರಸಿದ್ಧವಾದ ಮೈಲಾರಿ ಹೋಟೆಲ್ಗೆ ಭೇಟಿ ನೀಡಿದರು. ಸಚಿವರು, ಬೆಂಬಲಿಗರ ಜೊತೆ ಸಿದ್ದರಾಮಯ್ಯ ಮೈಲಾರಿ ಹೋಟೆಲ್ನಲ್ಲಿ ದೋಸೆ ಮತ್ತು ಇಡ್ಲಿ ಸವಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಚಲುವರಾಯಸ್ವಾಮಿ ಮತ್ತು ಇತರರು ಮೈಲಾರಿ ಹೋಟೆಲ್ನಲ್ಲಿ ದೋಸೆ ಸವಿದರು.
ಮೈಸೂರಿನ ವಿನಾಯಕ ಮೈಲಾರಿ ಹೋಟೆಲ್ನಲ್ಲಿ ಉಪಹಾರ ಸವಿಯಲಾಯಿತು. ಹೋಟೆಲ್ಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕರನ್ನು ಸ್ವತಃ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಆದರದಿಂದ ಬರಮಾಡಿಕೊಳ್ಳುವ ರೀತಿ ಮನಸ್ಸಿಗೆ ಮುದ ನೀಡಿತು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
mylari ಮೈಲಾರಿ ದೋಸೆ, ಇಡ್ಲಿ ಸವಿದ ಸಿದ್ದರಾಮಯ್ಯ
