ಮೇಷ ರಾಶಿ: ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಸೌಕರ್ಯಗಳಿಂದ ಜಾಡ್ಯವು ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಾಸದ ದುರುಪಯೋಗವಾಗಬಹುದು. ಬಂಧುಗಳ ಜೊತೆ ವ್ಯವಹಾರ ಮಾಡುವಾಗ ಪಾರದರ್ಶಕತೆ ಬೇಕಾದೀತು. ಎಲ್ಲರಿಂದಲೂ ಒಂದೇ ವಿಚಾರವನ್ನು ಕೇಳಿ ಮನಸ್ಸಿಗೆ ಭಾರವಾಗುವುದು. ಇಷ್ಟು ವರ್ಷ ನಡೆಸಿದ ಉದ್ಯಮವು ನಿಮಗೆ ಸಾಕೆನಿಸಬಹುದು. ಅಥವಾ ಬೇರೆ ಉದ್ಯಮದತ್ತ ಮುಖ ಮಾಡಲೂ ಬಹುದು. ಎಂತಹ ಉತ್ಸಾಹವೂ ಬೆಂಬಲವಿರುವಷ್ಟು ಹೊತ್ತು ಮಾತ್ರ. ಭೋಗವನ್ನು ನೀವು ಇಷ್ಟಪಡುವಿರಿ. ಇನ್ನೊಬ್ಬರಿಗೆ ಬೇಸರವಾಗುವಷ್ಟು ನೀವು ಮಾತನಾಡುವುದು ಬೇಡ. ಗುಪ್ತ ಸಂಪತ್ತಿನ ವಿಚಾರವು ಬೇರೆಯವರಿಗೂ ತಿಳಿದೀತು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಶುಭ ಸಮಾರಂಭಗಳಿಗೆ ಆಹ್ವಾನ ಬರಲಿದೆ. ದೂರ ಬಂಧುಗಳ ಭೇಟಿಯಾಗುವುದು.
ವೃಷಭ ರಾಶಿ: ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ಪ್ರಯಾಣಕ್ಕಾಗಿ ಖರ್ಚು ಹಾಗೂ ಅನಾರೋಗ್ಯವನ್ನು ಸರಿಮಾಡಿಕೊಳ್ಳೂ ಖರ್ಚು ಮಾಡಬೇಕಾಗಬಹುದು. ಅವಿವಾಹಿತರು ಯೋಗ್ಯ ಸಂಬಂಧವನ್ನು ನಿರೀಕ್ಷಿಸಬಹುದು. ಮಂಗಳ ಕಾರ್ಯದಿಂದ ಮನಸ್ಸು ಅರಳುವುದು. ಬಿದ್ದು ಗಾಯ ಮಾಡಿಕೊಳ್ಳಬಹುದು. ನ್ಯಾಯಾಲಯಕ್ಕೆ ಬೇಕಾದ ದಾಖಲೆಗಳನ್ನು ನೀವು ತಯಾರಿಸಿಕೊಳ್ಳುವಿರಿ. ನಿಮ್ಮ ಪ್ರಾಮಾಣಿಕತನಕ್ಕೆ ಮೆಚ್ಚುಗೆ ಬರಬಹುದು. ನಿಮ್ಮ ದೌರ್ಬಲ್ಯಗಳಿಗೆ ಅನ್ಯರನ್ನು ದೂರುವುದು ಉಚಿತವಲ್ಲ. ಅಪರಿಚಿತ ವ್ಯಕ್ತಿಗಳ ಕರೆಯು ನಿಮ್ಮನ್ನು ವಂಚನೆಯ ಜಾಲಕ್ಕೆ ಸಿಲುಕಿಸಬಹುದು. ಹುಡುಗಾಟ ಬುದ್ಧಿಯನ್ನು ಕಡಿಮೆ ಮಾಡುವುದು ಒಳ್ಳೆಯದು. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ಬೇಕಾದಾಗ ಬಳಸಿಕೊಳ್ಳುವ ಸಂಬಂಧದಿಂದ ದೂರವಿರುವಿರಿ.
ಮಿಥುನ ರಾಶಿ: ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಅಪವಾದದಿಂದ ದೂರವಿರಬೇಕು ಎಂದರೂ ಏನಾದರೂ ಬಂದು ಸುತ್ತಿಕೊಳ್ಳುವುದು. ನಿರುದ್ಯೋಗಿಗಳು ಸ್ನೇಹಿತರ ಜೊತೆ ಚರ್ಚಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವರು. ಸಾಮಾಜಿಕವಾಗಿ ಪ್ರಸಿದ್ಧರಾಗಲು ನೀವು ಬಯಸುವಿರಿ. ರಾಜಕೀಯ ವ್ಯಕ್ತಿಗಳ ಒಡನಾಟ ಸಿಗಲಿದೆ. ನಕಾರಾತ್ಮಕ ಆಲೋಚನೆಗಳನ್ನು ಬಲವಂತವಾಗಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸಂಗಾತಿಯ ಜೊತೆ ಭವಿಷ್ಯವನ್ನು ಚಿಂತಿಸುವಿರಿ. ವಚನ ಭ್ರಷ್ಟರಾಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ಮಕ್ಕಳಿಗೆ ನೀವು ನಿರ್ಬಂಧವನ್ನು ಹಾಕಿ ಪ್ರಯೋಜನವಾಗದು. ಮಕ್ಕಳು ಕೇಳಿದರೆಂದು ಏನನ್ನಾದರೂ ಮಾಡುವುದು ಸರಿಯಾಗದು. ಔಚಿತ್ಯದ ಬಗ್ಗೆ ಗಮನವಿರಲಿ. ಎಲ್ಲ ಕಾರ್ಯಗಳನ್ನು ಭಯದಿಂದ ಮಾಡುವಿರಿ.
ಕರ್ಕಾಟಕ ರಾಶಿ: ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ತಂದೆಯಿಂದ ನಿಮಗೆ ಹಿತಕರವಾಗದ ಮಾತುಗಳನ್ನು ಕೇಳಬೇಕಾದೀತು. ನಿಮ್ಮ ಕೋಪವನ್ನು ಆದಷ್ಟು ಕಡಿಮೆಮಾಡಿಕೊಳ್ಳುವುದು ಉತ್ತಮ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರವು ಮುಕ್ತಾಯವಾಗಬಹುದು. ಬೇಡದ ಮಾತಿಗಳನ್ನಾಡಿ ಕಲಹ ಮಾಡಿಕೊಳ್ಳುವಿರಿ. ಅನಿರೀಕ್ಷಿತವಾಗಿ ನೀವು ನಡೆದುಕೊಳ್ಳುವ ರೀತಿಯು ಕೆಲವರಿಗೆ ಆದರ್ಶವಾಗಬಹುದು. ಸ್ವಲ್ಪ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಿಹೋಗಬಹುದು. ಓದುವ ಸಮಯವನ್ನು ಓದಲೆಂದೇ ಮೀಸಲಿಡಿ. ಅವಕಾಶಗಳಿಗೆ ಕಾಯಬೇಡಿ. ನಿಮ್ಮಿಂದ ಇನ್ನೊಬ್ಬರಿಗೆ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡುವಿರಿ. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ.
ಸಿಂಹ ರಾಶಿ: ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುತ್ತ ಇರುವುದು ಬೇಡ. ನಿಮ್ಮ ಕೆಲಸವನ್ನು ಬೇರೆಯವರ ಮುಇಲಕ ಮಾಡಿಸಿಕೊಳ್ಳುವಿರಿ. ಇಂದಿನ ದಿನವು ಸುತ್ತಾಟದಲ್ಲಿ ಕಳೆಯಬಹುದು. ವಿವಾಹಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಹಿರಿಯರ ಸಹಕಾರದಿಂದ ದೈಹಿಕಬಲ, ಮನೋಬಲವು ಆರ್ಥಿಕಬಲ ಹೆಚ್ಚಾಗಬಹುದು. ಸ್ವಯಾರ್ಜಿತ ಸಂಪತ್ತನ್ನು ರಕ್ಷಿಸಿಕೊಳ್ಳುವುದು ಕಷ್ಟವಾದೀತು. ಇಂದಿನ ಪ್ರಯಾಣವು ನಿಮಗೆ ಆಯಾಸವನ್ನೂ ಹಣದ ಕೊಡುತ್ತದೆ. ನಿಮಗೆ ಕೆಲವರು ಆಮಿಷವನ್ನು ತೋರಿಸುವರು. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಕಾಗಬಹುದು. ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮಗೆ ಕೊಟ್ಟ ಹುದ್ದೆಯನ್ನು ನಿರ್ವಹಿಸುವಾಗ ಅದರ ಭಾರವೆಷ್ಟು ಎಂದು ಅರಿಯಿರಿ. ಅನೌಪಚಾರಿಕವಾಗಿ ಅಧಿಕಾರಿಗಳ ಜೊತೆ ನಡೆದುಕೊಳ್ಳುವಿರಿ. ನಿಮ್ಮ ಮನಸ್ಸು ಇಂದು ನಿಮ್ಮನ್ನು ಒಂದೆಡೆ ಕುಳಿತುಕೊಳ್ಳಲು ಬಿಡದು.
ಕನ್ಯಾ ರಾಶಿ: ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ನೀವು ಹೂಡಿಕೆಯನ್ನು ಗೌಪ್ಯವಾಗಿ ಇಡಲಾಗದು. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಭಯಭೀತರನ್ನಾಗಿ ಮಾಡೀತು. ಬೇರೆಯವರ ಮೇಲೆ ಬೀರುವ ನಿಮ್ಮ ಪ್ರಭಾವವು ಎಷ್ಟು ಬಳಸಿದರೂ ನಿಷ್ಪ್ರಯೋಜಕ. ನಿಮ್ಮವರ ಬಗ್ಗೆ ನಿಮಗೆ ತಿಳಿವಳಿಕೆ ಬಹಳ ಕಡಿಮೆ ಇರಲಿದೆ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವ ಕಾರ್ಯದ ಕಡೆ ಗಮನ ಬೇಡ. ಉತ್ಸಾಹದ ಕಡೆ ಗಮನವಿರಲಿ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು. ಇಂದು ನೀವು ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕಂಡಿದ್ದನ್ನು ಮಾತ್ರ ಸತ್ಯವೆಂದು ನಂಬಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ವಾಹನ ಖರೀದಿಯಿಂದ ನಿಮಗೆ ಚಿಂತೆ ಆರಂಭವಾಗುವುದು.
ತುಲಾ ರಾಶಿ: ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಇಂದು ಕಸಿದುಕೊಳ್ಳಬಹುದು. ನೀವು ಇಂದು ಇತರರ ದೃಷ್ಟಿಯಲ್ಲಿ ಸಣ್ಣ ಮನಸ್ಸಿನವರಂತೆ ಕಾಣಿಸುವಿರಿ. ಸಹೋದ್ಯೋಗಿಗಳ ಸಹವಾಸದಿಂದ ದುಶ್ಚಟಕ್ಕೆ ಬೀಳುವವರಿದ್ದೀರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸಿಕೊಳ್ಳಲಾರಿರಿ. ಏಕಾಗ್ರತೆಯ ಕೊರತೆ ಕಾಣಬಹುದು. ಯಾವುದಾದರೂ ಆಕಸ್ಮಿಕ ಧನದ ನಿರೀಕ್ಷೆಯಲ್ಲಿ ಇರುವಿರಿ. ಎಲ್ಲ ಆಟವನ್ನು ಗೆಲ್ಲಬೇಕು ಎನ್ನುವುದು ಸರಿಯಾದರೂ, ಗೆಲ್ಲಲಾಗದೂ ಎಂಬುದೂ ವಾಸ್ತವ. ಹಾಗಾಗಿ ನಿಮ್ಮ ವರ್ತನೆಯು ಭಾಗವಹಿಸುವುದಕ್ಕೆ ಇರಲಿ. ಆಸ್ತಿಯ ಆಧಾರದ ಮೇಲೆ ನೀವು ಸಾಲ ಪಡೆಯುವಿರಿ. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಪ್ರಿಯವಾದ ವಸ್ತುವನ್ನು ಪಡೆಯಲು ಹಣದ ಅಭಾವವಿರುವುದು.
ವೃಶ್ಚಿಕ ರಾಶಿ: ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಸಂಗಾತಿಯ ಕಾರಣದಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಉದ್ಯೋದಲ್ಲಿ ಉಂಟಾದ ರಾಜಕೀಯ ಉನ್ನತಿಗೆ ಆಪ್ತರಿಂದ ಪ್ರಶಂಸೆ ಸಿಗಬಹುದು. ಸ್ತ್ರೀಯರು ನಿಮ್ಮನ್ನು ಮುಚ್ಚಿಕೊಳ್ಳಬಹುದು. ಅತಿಯಾದ ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಿರಿ. ಹೊರಗಡೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಗುರಿಯು ಅಸ್ಪಷ್ಟವಾಗಿ ತೋರಬಹುದು. ಹಳೆಯ ನೋವು ಪುನಃ ಬರಬಹುದು. ಹಿತಶತ್ರುಗಳ ಭಯದಿಂದ ಮುಕ್ತರಾಗುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರಬೇಕಾಗುವುದು.
ಧನು ರಾಶಿ: ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ವ್ಯಾಪಾರದಲ್ಲಿ ಪ್ರಮಾಣಿತೆ ಇದ್ದರೆ ಆದಾಯವು ತಾನಾಗಿಯೇ ಹೆಚ್ಚುವುದು. ನಿಮಗೆ ಉಂಟಾದ ನೋವಿಗೆ ಸರ್ಕಾರ ಪರಿಹಾರವನ್ನೂ ಕೊಡಬಹುದು. ಸಂಗಾತಿಯು ನಿಮ್ಮ ಎಲ್ಲ ವಿಷಯಕ್ಕೂ ತಗಾದೆ ತೆಗೆಯಬಹುದು. ನಿಮ್ಮ ಬಗ್ಗೆ ತಿಳಿಯದೇ ಮನೆಯಲ್ಲಿ ಆತಂಕ ಸೃಷ್ಟಿಯಾಗಬಹುದು. ದುಡುಕಿನಿಂದ ನಿಮ್ಮ ವ್ಯಕ್ತಿತ್ವವು ಬೇರೆ ರೀತಿ ಕಾಣಿಸುವುದು. ಮನೆಯಿಂದ ಸಹಾಯ ಪಡೆಯಬಾರದು ಎಂಬ ಸ್ವಾಭಿಮಾನ ಎದ್ದು ತೊರುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ತರಬೇತಿಯನ್ನು ಪಡೆಯಬೇಕಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಅನಾರೋಗ್ಯವಿದ್ದರೂ ನೀವು ಕಾರ್ಯವನ್ನು ನಿರ್ವಹಿಸುವಿರಿ.
ಮಕರ ರಾಶಿ: ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ನಿಮ್ಮ ಪ್ರಯಾಣವು ಆಕಸ್ಮಿಕವಾಗಬಹುದು. ಹೆಚ್ಚಿ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳುವ ಮನಸ್ಸು ಬರುವುದು. ತಾಯಿಗೆ ಚಿಕಿತ್ಸೆಯನ್ನು ಕೊಡಿಸುವಿರಿ. ಕೆಟ್ಟ ಮಾರ್ಗದಿಂದ ಬರುವ ಹಣವನ್ನು ನೀವು ನಿರಾಕರಿಸುವಿರಿ. ಸಾಲವನ್ನು ಹಂತಹಂತವಾಗಿ ತೀರಿಸಲು ನೀವು ಯೋಜನೆ ರೂಪಿಸಿಕೊಳ್ಳುವಿರಿ. ಧನಸಂಗ್ರಹದ ತುರ್ತು ಸ್ಥಿತಿ ನಿಮಗೆ ಬರಬಹುದು. ಸ್ನೇಹಿತರ ಜೊತೆ ದೂರ ಪ್ರಯಾಣ ಮಾಡಿ ಬರುವಿರಿ. ಸರಿಯಾದ ಆಹಾರವು ಸಿಗದೇ ಹಸಿವಿನಿಂದ ಸಂಕಟಪಡುವಿರಿ. ಕೆಲಸಗಳು ಕೈಗೂಡುವುದು ಎಂಬ ಆಸೆ ಇರಲಿದೆ. ಕಛೇರಿಯಲ್ಲಿ ಗೌರವ ಸಿಗಲಿದೆ. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶವು ಸಿಗುವುದು.
ಕುಂಭ ರಾಶಿ: ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಹಳೆಯ ಸಂಪತ್ತನ್ನು ನೀವು ಬಳಸಬೇಕಾಗುವುದು. ಬೌದ್ಧಿಕ ಕಸರತ್ತನ್ನು ಮಾಡಲು ಹೋಗಿ ತಲೆಕೆಡಿಸಿಕೊಳ್ಳುವಿರಿ. ಬೆಳಗಿನಿಂದಲೇ ನೀವು ಮೋಜಿನ ಮಾನಸಿಕತೆಯನ್ನು ಬೆಳೆಸಿಕೊಂಡಿರುವಿರಿ. ನಿಮ್ಮ ಅಧ್ಯಯನ ಬಗ್ಗೆ ನಿಮಗೇ ಅನುಮಾನ ಬರಬಹುದು. ಉದ್ಯೋಗದಲ್ಲಿ ಅಗುವ ಬದಲಾವಣೆಗಳು ನಿಮಗೆ ಸಂದೇಹವನ್ನು ಕೊಡಬಹುದು. ನಿಮ್ಮನ್ನು ಇಷ್ಟಪಡುವವರಿಗೆ ನಿಮ್ಮ ಬಗ್ಗೆ ಹೇಳಿ. ಹಳೆಯ ನೆನಪುಗಳನ್ನು ಇಂದು ಆಸ್ವಾದಿಸುವಿರಿ. ಓದಿನತ್ತ ಹೆಚ್ಚಿನ ಗಮನವಿರಲಿದೆ. ನಿಮ್ಮವರ ಅಭಿಪ್ರಾಯವನ್ನು ಮನ್ನಿಸಿ. ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣವು ಇರುವುದು. ಅವರ ಮಾತನ್ನು ಧಿಕ್ಕರಿಸಬೇಡಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಕರ್ತವ್ಯದ ದೃಷ್ಟಿಯಿಂದ ನೀವು ಕೆಲಸವನ್ನು ಮಾಡುವಿರಿ.
ಮೀನ ರಾಶಿ: ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಒತ್ತಡದ ಕಾರಣದಿಂದ ಕಲಹ, ಮನಸ್ತಾಪಗಳು ಕಾಣಿಸುವುದು. ಆಕಸ್ಮಿಕವಾಗಿ ನೀವು ಆಪ್ತರ ಅಗಲುವಿಕೆಯ ವಾರ್ತೆಯನ್ನು ಕೇಳುವಿರಿ. ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ. ವಿಳಂಬ ವಿವಾಹಕ್ಕೆ ಯಾರನ್ನೋ ಬೊಟ್ಟುಮಾಡಿ ತೋರಿಸುವಿರಿ. ಸಹೋದರಿಯ ಜೊತೆ ಹೆಚ್ಚಿನ ವಿಚಾರವನ್ನು ಹಂಚಿಕೊಳ್ಳುವಿರಿ. ನಿಮ್ಮ ಕಾರ್ಯಗಳಿಗೆ ಮಕ್ಕಳಿಂದ ಸಹಕಾರ ಸಿಗುವುದು. ಸಂಗಾತಿಯ ಕಡೆಯಿಂದ ಲಾಭವಾಗಲಿದೆ. ನಿಮಗೆ ಇಷ್ಟವಾದುದನ್ನು ದಾನವಾಗಿ ಕೊಡಿ. ಸಮಯಕ್ಕೆ ಸರಿಯಾಗಿ ಯಾವುದೂ ಆಗುವುದಿಲ್ಲ ಎಂಬ ಬೇಸರ ಉಂಟಾಗಬಹುದು. ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡುವರು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ನಂಬಿಕೆ ಇಡುವುದಾದರೆ ಪೂರ್ಣವಾಗಿ ಇಡಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಪರ ಊರಿನಲ್ಲಿ ಇಂದು ವಾಸವಾಗುವುದು.