ಮೇಷ ರಾಶಿ: ಕಾನೂನಿಗೆ ಯೋಗ್ಯವಾದ ದಾರಿಯಲ್ಲಿ ಸಂಪಾದನೆಯನ್ನು ಆಲೋಚಿಸಿ. ಇಂದು ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು. ನಿಮಗೆ ಕೃತ್ರಿಮ ಮಾಡಿರುವ ಬಗ್ಗೆ ಭೀತಿ ಇರಲಿದೆ. ವಿದ್ಯಾರ್ಥಿಗಳು ಆಭ್ಯಾಸದಿಂದ ವಿಮುಖರಾಗುವಿರಿ. ಆಲಂಕಾರಿಕ ವಿಚಾರದಲ್ಲಿ ಆಸಕ್ತಿ ಹೆಚ್ಚಾಗುವುದು. ಅನಿವಾರ್ಯವಾಗಿ ಸಾಲವನ್ನು ಮಾಡಬೇಕಾಗಬಹುದು. ಅದನ್ನು ಗಮನದಲ್ಲಿ ಇಟ್ಟುಕೊಳ್ಳಿ. ತಾಯಿಯ ಜೊತೆ ಕಲಹ ಆಗುವ ಸಾಧ್ಯತೆ ಇದೆ. ಮನೆಯ ಕೆಲಸಗಳನ್ನು ಮಾಡಲು ನೀವು ಆಸಕ್ತಿಯ ತೊರುವುದಿಲ್ಲ. ಮಾತಿನಲ್ಲಿ ಚಾಣಾಕ್ಷತೆ ಇರುವಂತೆ ಅದು ಕೃತಿಯಲ್ಲಿಯೂ ಬರಬೇಕಾಗುವುದು. ಆಲಸ್ಯದಿಂದ ಇರುವಿರಿ ಇಂದು. ಸಂಗಾತಿಯ ಮೇಲೆ ಅನುಮಾನ ಬರಬಹುದು. ಶತ್ರುವನ್ನು ಮಿತ್ರನನ್ನು ಮಾಡಿಕೊಳ್ಳುವ ತಂತ್ರವನ್ನು ಹೂಡುವಿರಿ. ಕೆಲವು ಅಭ್ಯಾಸವು ಚಟವಾಗಿ ಪರಿವರ್ತನೆ ಆಗಬಹುದು. ಬಿಡಸಲಾಗದ ಸಮಸ್ಯೆಗಳು ನಿಮ್ಮನ್ನು ಇಬ್ಬಂದಿ ಮಾಡಬಹುದು. ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯುವ ಕಡೆ ಕೆಲಸ ಮಾಡುವಿರಿ.
ವೃಷಭ ರಾಶಿ: ನಿಮಗೆ ಆಗದವರಿಂದಲೇ ಸಹಕಾರವನ್ನು ಪಡೆಯಬೇಕಾಗಬಹುದು. ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ಖುಷಿಯಿಂದ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮಗೆ ಬಲವಂತ ಮಾಡುವುದು ಇಷ್ಟವಾಗದು. ಸಮಾಧಾನದ ಚಿತ್ತವು ನಿಮ್ಮ ಇಂದಿನ ದಿನವನ್ನು ಚೆನ್ನಾಗಿ ಇಡುವುದು. ಪ್ರಾಣವನ್ನು ನೀವು ಆನಂದದಿಂದ ಮಾಡುವಿರಿ. ನಿಮ್ಮ ನಡೆಯು ಯಾರಿಗೂ ತಿಳಿಯದಾಗಿದೆ. ಯಾವುದೇ ಒತ್ತಡಕ್ಕೆ ಸಿಕ್ಕದೇ ಆರಾಮಾಗಿ ಇರಲು ಇಂದು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಧನಾಗಮನದಿಂದ ಸಂತೋಷವಾಗುವುದು. ನಿಮ್ಮ ಸ್ನೇಹಿತರಿಗೆ ಪ್ರತ್ಯುಪಕಾರವನ್ನು ಮಾಡಲು ಇಚ್ಛಿಸುವಿರಿ. ಕೆಲವು ಸನ್ನಿವೇಶಗಳ ನಿಮಗೆ ಪರೀಕ್ಷೆಯ ಕಾಲವಾಗಲಿದೆ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸನ್ನು ಹಾಳುಮಾಡಬಹುದು. ಸರಿಯಾದ ಹೂಡಿಕೆಯಿಂದ ನಿಮಗೆ ಲಾಭವಾಗುವುದು.
ಮಿಥುನ ರಾಶಿ: ನೀವು ಇಂದು ಆಡಿದ ದುಡುಕಿನ ಮಾತಿನಿಂದ ನಿಮ್ಮ ನೆಮ್ಮದಿ ಕೆಡುವುದು. ಇಂದು ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ನಿಮಗೆ ಸಂಬಂಧಿಸಿದ ಕೆಲಸವಷ್ಟನ್ನೇ ಮಾಡಿ. ಇನ್ನೊಬ್ಬರ ಬಗ್ಗೆ ನಿಮ್ಮ ಮಾತುಗಳು ಬೇಡ. ಸಂದರ್ಭವನ್ನು ನೀವು ಸರಿಯಾಗಿ ನಿಭಾಯಿಸಲು ಕಷ್ಟವಾದೀತು. ನಿಮ್ಮ ಬಗ್ಗೆ ಅಸಂಬದ್ಧ ಮಾತುಗಳನ್ನು ಕೇಳಿ ಬೇಸರವಾಗುವುದು. ಅತಿಯಾದ ಕೋಪವು ನಿಮ್ಮ ಈ ದಿನವನ್ನು ಹಾಳುಮಾಡಬಹುದು. ಬೇಡವಾದ ಸಣ್ಣ ಸಣ್ಣ ವಿಚಾರಗಳೇ ನಿಮಗೆ ತೊಂದರೆ ಕೊಡುವುದು. ಬಂಧುಗಳು ನಿಮಗೆ ಕೆಲವು ಹಿತ ನುಡಿಗಳನ್ನು ಹೇಳುವರು. ಸಮಾಜದಲ್ಲಿ ಬೆರೆಯಲು ನೀವು ಇಷ್ಟಪಡುವಿರಿ. ಆತಂಕದ ಸಂದರ್ಭಗಳು ಬರಬಹುದು. ತಾಳ್ಮೆಯಿಂದ ಸರಿಮಾಡಿಕೊಳ್ಳಿ. ಅತಿಥಿಗಳು ನಿಮ್ಮ ಜೀವನದ ಬಗ್ಗೆ ನಕಾರಾತ್ಮಕವಾಗಿ ಹೇಳಬಹುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ.
ಕರ್ಕಾಟಕ ರಾಶಿ; ನಿಮ್ಮ ಬದಲಾವಣೆಯನ್ನು ಕುಟುಂಬವು ಸ್ವೀಕರಿಸುವುದು ಕಷ್ಟ. ಇಂದು ನೀವು ದುಶ್ಚಟದಿಂದ ದೂರವಿರಲು ದಾರಿ ಹುಡುಕುವಿರಿ. ನಿಮ್ಮ ಗಾಂಭಿರ್ಯವು ಮನೆಯಲ್ಲಿ ಹೆದರಿಕೆಯನ್ನು ತರಿಸೀತು. ಹಳೆಯ ದಾಖಲೆಗಳನ್ನು ಇಂದು ಹುಡುಕುವ ಪ್ರಯತ್ನ ಮಾಡುವಿರಿ. ಧೈರ್ಯದಿಂದ ಮುನ್ನಡದರೆ ಬರುವ ಸಂಕಷ್ಟಕ್ಕೆ ದಾರಿಯೂ ಸಿಗಲಿದೆ. ಅನೇಕ ವರ್ಷಗಳ ಅನಂತರ ಆದ ಸಂತಾನವು ನಿಮಗೆ ಸಂತೋಷವನ್ನು ಕೊಡಬಹುದು. ಮನೆಗೆ ಬೇಕಾದ ವಿದ್ಯುತ್ ಉಪಕರಣವನ್ನು ಇಂದು ಖರೀದಿಸುವಿರಿ. ಸಹೋದರನ ಕಾರಣದಿಂದ ಇಂದು ನಿಮ್ಮ ವಿವಾಹವು ಆಗಬಹುದು. ಸುಳ್ಳುವಾರ್ತೆಯನ್ನು ಕೇಳಿ ಮೋಸ ಹೋಗಬಹುದು. ಸರಿಯಾದ ನಿರ್ಧಾರವು ನಮಗೆ ಉತ್ತಮ ಫಲಿತಾಂಶವನ್ನು ಕೊಡಬಹುದು. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ. ನೀವು ಗೌಪ್ಯವಾಗಿ ಮಾಡುವ ಧನಸಂಪಾದನೆಯು ವ್ಯಕ್ತವಾಗಬಹುದು. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ. ಅಪರಿಚಿತರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಮುಖಭಂಗವಾದೀತು.
ಸಿಂಹ ರಾಶಿ : ರಾಶಿ ಚಕ್ರದ ಐದನೇ ರಾಶಿಯರಿಗೆ ಈ ವಾರ ಶುಭ. ದ್ವಿತೀಯ ಹಾಗೂ ಏಕಾದಶದ ಅಧಿಪತಿ ಬುಧನು ನಿಮ್ಮ ರಾಶಿಗೆ ಬರಲಿದ್ದಾನೆ. ಮಿತ್ರನ ಜೊತೆ ಮಿತ್ರನ ರಾಶಿಯಲ್ಲಿ ಇರುವುದು ಶುಭಕರ. ಆರೋಗ್ಯ ಸುಸ್ಥಿರವಾಗಲಿದೆ. ವಾಗ್ಮಿಗಳಿಗೆ ಸಮಯ ಯಶಸ್ಸು ಸಿಗಲಿದೆ. ನಿಮ್ಮ ಮಾತಿಗೂ ಬೆಲೆ ಕೊಟ್ಟು ಕಾರ್ಯವನ್ನು ಮಾಡುವರು. ದೊಡ್ಡವರು ಎಂದು ಎನಿಸಿಕೊಂಡವರಿಂದ ನಿಮ್ಮ ಕಾರ್ಯವಾಗಲಿದೆ. ಶುಕ್ರನು ನೀಚನಾಗಿ ದ್ವಿತೀಯದಲ್ಲಿ ಇರುವ ಕಾರಣ ಕಲಾವಿದ್ಯಾರ್ಥಿಗಳಿಗೆ ಸ್ವಲ್ಪ ಕಾಲ ಹಿನ್ನಡೆಯಾಗುವುದು. ಸೂರ್ಯಾಷ್ಟಕವನ್ನು ಪಠಿಸಿ.
ಕನ್ಯಾ ರಾಶಿ : ಈ ವಾರದಲ್ಲಿ ನಿಮಗೆ ಶುಭಾಶುಭ ಫಲವೇ ಇದೆ. ರಾಶಿ ಅಧಿಪತಿ ಹಾಗೂ ದಶಮಾಧಿಪತಿಯು ದ್ವಾದಶಕ್ಕೆ ಬಂದಿದ್ದಾನೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಬೇಕು ಮತ್ತು ಅದಕ್ಕಾಗಿ ಖರ್ಚನ್ನೂ ಮಾಡಬೇಕಾಗುವುದು. ಉದ್ಯೋಗದಲ್ಲಿ ಹೊಸ ಗೆಳೆತನ ಶುರುವಾಗುವುದು. ಭೂಮಿಯ ವ್ಯವಹಾರದಲ್ಲಿ ಅತಂತ್ರ ಸ್ಥಿಯಿಂದ ನಿಮಗೆ ಕಷ್ಟವಾಗಲಿದೆ. ನಿಮ್ಮ ಯೋಜನೆಗಳು ಪೂರ್ಣತೆಯಿಂದ ಇರಲಾರದು. ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳುವುದು ಕಷ್ಟವಾಗಲಿದೆ. ಒಳ್ಳೆಯವರಿಂದ ಮಾರ್ಗದರ್ಶನ ಪಡೆದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ರಾಮರಕ್ಷಾ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ.
ತುಲಾ ರಾಶಿ : ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಮಿಶ್ರಫಲ. ದ್ವಾದಶ ಹಾಗೂ ನವಮಾಧಿಪತಿ ಬುಧ ಏಕಾದಶಕ್ಕೆ ಬರುವನು. ಒಳ್ಳೆಯ ಕಾರ್ಯಕ್ಕೆ ಧನವ್ಯಯವಾಗುವುದು. ಕಛೇರಿಯಲ್ಲಿ ಅಸಮಾಧನವಿದ್ದು, ಮನೆಯಲ್ಲೂ ಅದರ ಮುಂದುವರಿಕೆ ಎನಿಸಬಹುದು. ವಿದೇಶ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಉತ್ತಮ ಕಾಲ. ರಾಶಿ ಅಧಿಪತಿ ದ್ವಾದಶದಲ್ಲಿ ಇರುವ ಕಾರಣ ಬಂದ ಹಣವು ನಾನಾ ಮಾರ್ಗಗಳಿಂದ ಹರಿದುಹೋಗುವುದು. ಮಕ್ಕಳಿಂದ ನಿಮಗೆ ನೆಮ್ಮದಿ ಸಿಕ್ಕಂತೆ ಆಗುವುದು. ಗುರುಬಲವು ಇಲ್ಲದ ಕಾರಣ ಎಲ್ಲವೂ ನಿಮಗೇ ಬಂದು ಚುಚ್ಚಿದಂತೆ ಭಾಸವಾಗುತ್ತದೆ. ಮಹಾಲಕ್ಷ್ಮಿಯ ಉಪಾಸನೆಯನ್ನು ಸಂಜೆಯ ಸಮಯದಲ್ಲಿ ಮಾಡಿ.
ವೃಶ್ಚಿಕ ರಾಶಿ : ಸಪ್ಟೆಂಬರ್ ತಿಂಗಳ ಈ ವಾರ ನಿಮಗೆ ಮಿಶ್ರ ಫಲ. ಅಷ್ಟಮ ಹಾಗೂ ಏಕಾದಶಾಧಿಪತಿ ಬುಧ ದಶಮದಲ್ಲಿ ಇದ್ದಾನೆ. ವೃತ್ತಿಯಲ್ಲಿ ಉತ್ತಮ ಆದಾಯ ಬಂದರೂ ಅದು ಇನ್ನೊಂದು ರೀತಿಯಲ್ಲಿ ಖಾಲಿಯಾಗುವುದು. ಯೋಜಿತ ಕಾರ್ಯಗಳಲ್ಲಿ ಯಶಸ್ಸು ಪಡೆಯುವರು. ಮಾತುಗಾರಿಕೆಯಿಂದ ನಿಮಗೆ ಪ್ರಶಂಸೆ ಸಿಗಲಿದೆ. ಆದಾಯವೂ ಅದರ ಮೂಲಕ ಬರುವುದು. ವೃತ್ತಿ ಬದುಕಿನಲ್ಲಿ ಪ್ರತಿ ಕೆಲಸದಲ್ಲೂ ಯಶಸ್ಸು ಸಾಧಿಸುವಿರಿ. ಕೌಟುಂಬಿಕ ತಲ್ಲಣಗಳನ್ನು ನೀವು ಶಾಂತಗೊಳಿಸಬೇಕಾಗುವುದು. ಈ ವಾರ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆಯನ್ನು ಮಾಡುತ್ತಿರುವವರಿಗೆ ಶುಭ ಸಮಯ. ವಿವಾಹ ಜೀವನದಲ್ಲಿ ಸಂತೋಷ ಸಿಗಲಿದೆ. ಅನಾರೋಗ್ಯವು ಚಿಕಿತ್ಸೆಯ ಮೂಲಕ ಪರಿಹಾರಗೊಳ್ಳುವುದು. ದೇವಸೇನಾನಿಯೇ ನಿಮಗೆ ಮಾರ್ಗವನ್ನು ತೋರಿಸುವನು.
ಧನು ರಾಶಿ : ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ಮಿಶ್ರ ಫಲ. ಸಪ್ತಮಾಧಿಪತಿ ಹಾಗೂ ದಶಮಾಧಿಪತಿ ಬುಧನು ನವಮಕ್ಕೆ ಬರಲಿದ್ದಾನೆ. ಸಂಗಾತಿಯ ಜೊತೆಗಿನ ವೈಮನಸ್ಯ ದೂರಾಗಲಿದೆ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಅದ್ಭುತವಾಗಿರಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯು ಲಾಭದಾಯಕವಾಗಿರಲಿದೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿದೆ. ವೃತ್ತಿಯಲ್ಲಿ ಗೌರವ, ಯಶಸ್ಸು ಸಿಗಲಿದೆ. ನಿಮ್ಮ ಭೂಮಿಯ ಮಾರಾಟವು ಈ ವಾರ ಆಗವುದು. ಪ್ರೀತಿ ವಿಚಾರಗಳಲ್ಲಿ ಈ ವಾರ ಸಕಾರಾತ್ಮಕ ವಾರ್ತೆ ಸಿಗಲಿದೆ. ಕೆಲವು ಸಂದರ್ಭಗಳಲ್ಲಿ ಮುನ್ನುಗ್ಗಿ ಅಪಮಾನ ಮಾಡಿಕೊಳ್ಳುವಿರಿ. ಗೋಮಾತೆಗೆ ಆಹಾರವನ್ನು ಕೊಡಿ.
ಮಕರ ರಾಶಿ : ಸಪ್ಟೆಂಬರ್ ಮೊದಲ ವಾರದಲ್ಲಿ ನಿಮಗೆ ಶುಭಾಶುಭ ಫಲವಿದೆ. ಬುಧನು ಷಷ್ಠ ಹಾಗೂ ನವಮಾಧಿಪತಿಯೂ ಆಗಿದ್ದು ಅಷ್ಟಮದಲ್ಲಿ ಇರುವನು. ಶತ್ರುಗಳಿಗೆ ಜಯವಾಗುವುದು. ಹಿತಶತ್ರುಗಳ ವಿಚಾರದಲ್ಲಿ ನಿಮಗೆ ಸರಿಯಾದ ದೃಷ್ಟಿಯು ಬಾರದೇ ಇರಬಹುದು. ನಿಮ್ಮ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರ ದೊರೆತು ಮಾನಸಿಕ ಚಿಂತೆ ದೂರವಾಗಲಿದೆ. ಹಿರಿಯರ ಬಗ್ಗೆ ಅನಾದರ, ಅಪನಂಬಿಕೆಗಳು ಇರುವುದು. ಕೌಟುಂಬಿಕ ಕಲಹಗಳು ಬಗೆಹರಿಯಲಿದೆ. ವಾರದ ಕೊನೆಯ ಭಾಗದಲ್ಲಿ ನಿಮ್ಮ ಬಹುದೊಡ್ಡ ಕನಸೊಂದು ನನಸಾಗಲಿದೆ. ಪ್ರೀತಿಯಲ್ಲಿ ಇರುವವರಿಗೆ ಸಂಬಂಧಗಳು ಗಟ್ಟಿಯಾಗುತ್ತವೆ. ಉದ್ಯಮದಲ್ಲಿ ನಿಮ್ಮ ಯೋಜನೆಯಷ್ಟು ಲಾಭ ಸಿಗದು. ಲಕ್ಷ್ಮೀನಾರಾಯಣರ ಉಪಾಸನೆ ಮಾಡಿ.
ಕುಂಭ ರಾಶಿ : ಈ ತಿಂಗಳ ಮೊದಲ ವಾರದಲ್ಲಿ ನಿಮಗೆ ಮಿಶ್ರಫಲವಿದೆ. ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳಿಗೆ ಎಲ್ಲರ ಸಹಮತ ಸಿಗಲಿದೆ. ಪಂಚಮ ಮತ್ತು ಅಷ್ಟಮಾಧಿಪತಿಯು ಸಪ್ತಮಕ್ಕೆ ಬರುವ ಕಾರಣ ಗೊಂದಲಗಳನ್ನು ಎದುರಿಸಬೇಕಾಗುವುದು. ಮಕ್ಕಳ ವಿಚಾರದಲ್ಲಿ ನಿಮಗೆ ಸೂಕ್ತ ನಿರ್ಧಾರ ಮಾಡುವುದು ಕಷ್ಟವಾಗುವುದು. ಉದ್ಯೋಗಲ್ಲಿ ಮುನ್ನಡೆ ಕಷ್ಟವಾಗುವುದು. ವೈವಾಹಿಕ ಜೀವನದಲ್ಲಿ ಯಾವುದೇ ಬಾಧೆಗಳು ಕಾಣಿಸದು. ವಿದ್ಯಾವಂತರಾದ ಸಂಗಾಗಳೇ ನಿಮಗೆ ಸಿಗುವುದು. ಬರುವ ಸಂಪತ್ತನ್ನು ಜೋಪಾನ ಮಾಡುವುದು ಮುಖ್ಯ. ಖರ್ಚಿಗೂ ಬೇಕಾದಂತೆ ಹೊಂದಿಸಿಕೊಳ್ಳಬೇಕು. ಹನುಮಾನ್ ಚಾಲೀಸ್ ನಿಮ್ಮ ಹಲವು ತೊಂದರೆಗಳಿಗೆ ಮದ್ದಾಗುವುದು.
ಮೀನ ರಾಶಿ : ಸಪ್ಟೆಂಬರ್ ತಿಂಗಳ ಮೊದಲ ನಿಮಗೆ ಮಿಶ್ರಫಲವಿದೆ. ಚತುರ್ಥಾಧಿಪತಿಯೂ ಸಪ್ತಮಾಧಿಪತಿಯೂ ಆದ ಬುಧನು ಷಷ್ಠಸ್ಥಾನಕ್ಕೆ ಬರುವ ಕಾರಣ ತಂದೆಯ ಜೊತೆ, ತಾಯಿಯ ಜೊತೆ, ಸಂಗಾತಿಯ ಜೊತೆ ಕಲಹವಾಗಲಿದೆ. ದುಃಖಪಡುವ ಸನ್ನಿವೇಶಗಳು ಬರುವುದು. ನಿಮ್ಮ ವ್ಯವಹಾರವನ್ನು ಇತರರ ಕೈಯಲ್ಲಿ ಬಿಡುವುದನ್ನು ತಪ್ಪಿಸಿ. ಈ ವಾರ ನಿಮಗೆ ಮಾತಿಗಿಂತಲೂ ಮೌನವೇ ಶೋಭೆ ತರುವುದು. ಯಾರನ್ನೂ ಕೂಡ ಹಾಗೆ ಸುಮ್ನನೆ ಕುರುಡಾಗಿ ನಂಬಬೇಡಿ. ನೀವು ಉದ್ಯೋಗ ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯದಲ್ಲ. ಕಷ್ಟವೋ ಸುಖವೋ ಇರುವುದನ್ನು ಬಿಟ್ಟುಕೊಳ್ಳುವುದು ಬೇಡ. ಬಂಧುವರ್ಗದಿಂದ ನಿಮಗೆ ಕಿರಿಕಿರಿ ಹೆಚ್ಚಾಗುವುದು. ಉದ್ಯೋಗ ಸ್ಥಳದಲ್ಲಿ ಸವಾಲುಗಳು ಬಂದರೂ ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿರ್ವಹಿಸುವಿರಿ.