ವಾಷಿಂಗ್ಟನ್: ವರ್ಲ್್ಡ ವ್ರೆಸ್ಲಿಂಗ್ ಎಂಟರ್ಟ್ರೆöÊನ್ಮೆAಟ್ ಮಾಜಿ ಸ್ಟಾರ್ ಬ್ರೇ ವ್ಯಾಟ್ (36) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಟ್ರಿಪಲ್ ಎಚ್ನ ಮುಖ್ಯ ಅಧಿಕಾರಿ ಲೆವೆಸ್ಕ್ ಅವರು ಟ್ವಿಟ್ಟರ್ನಲ್ಲಿ ಅಧಿಕೃತವಾಗಿ ಬರೆದುಕೊಂಡಿದ್ದಾರೆ.
ವ್ಯಾಟ್ ಅವರು 2009 ರಿಂದ ಡಬ್ಲೂ÷್ಯಡಬ್ಲೂ÷್ಯಇನಲ್ಲಿ ಪಾಲ್ಗೊಳ್ಳುತ್ತಿದ್ದರು. ವ್ಯಾಟ್ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಡಬ್ಲೂ÷್ಯಡಬ್ಲೂ÷್ಯಇನಿಂದ ಕಳೆದ ಹಲವಾರು ತಿಂಗಳುಗಳಿAದ ಅಂತರ ಕಾಯ್ದುಕೊಂಡಿದ್ದರು. 2021 ಮತ್ತು 2022 ರಲ್ಲಿ ಅವರ ಪ್ರದರ್ಶನದಿಂದಾಗಿ ಟಿವಿಯಲ್ಲಿ ಪಂದ್ಯದ ವೀಕ್ಷಣೆಯ ರೇಟಿಂಗ್ ಹೆಚ್ಚಾಗಿತ್ತು.
ವ್ಯಾಟ್ ಕುಸ್ತಿಪಟುಗಳ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಅವರ ತಂದೆ ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ. ಅವರ ಅಜ್ಜ ಬ್ಲಾ÷್ಯಕ್ಜಾಕ್ ಮುಲ್ಲಿಗನ್ ಅವರು ವೃತ್ತಿಪರ ಕುಸ್ತಿಪಟುವಾಗಿ ತಮ್ಮ ಛಾಪನ್ನು ಮೂಡಿಸಿದ್ದರು. ಅವರ ಚಿಕ್ಕಪ್ಪ ಬ್ಯಾರಿ ಮತ್ತು ಕೆಂಡಾಲ್ ವಿಂಡ್ಹ್ಯಾಮ್ ಕೂಡ ಕುಸ್ತಿ ಜಗತ್ತಿನಲ್ಲಿ ಪಳಗಿದವರಾಗಿದ್ದಾರೆ.