ಮೈಸೂರು: ಭಾರತದ ಮೊದಲ ತ್ರಿಡಿ ಛಾಯಾಗ್ರಾಹಕ ಎ.ಎಸ್. ನಂದಕುಮಾರ್ ಅವರ ಜೈನಕಾಶಿ ಇನ್ ತ್ರಿಡಿ ಛಾಯಾಚಿತ್ರ ಪ್ರದರ್ಶನವನ್ನು ಅ.14 ರ ಶನಿವಾರ ಸಂಜೆ 4ಕ್ಕೆ ಮೈಸೂರಿನಲ್ಲಿ ಎರ್ಪಡಿಸಲಾಗಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಾಯಾಗ್ರಾಹಕ ಎ.ಎಸ್.ನಂದಕುಮಾರ್, ಮೊಟ್ಟ ಮೊದಲ ಬಾರಿಗೆ ತ್ರಿಡಿ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ವಿಜಯನಗರದ ಎರಡನೇ ಹಂತದ ಅಂಬರೀಶ್ ರಸ್ತೆಯಲ್ಲಿರುವ ನೆರಳು- ಬೆಳಕು ಗ್ಯಾಲರಿ ಕಾಫಿ ಸಿಟಿಯಲ್ಲಿ ಪ್ರದರ್ಶನ ನಡೆಯಲಿದೆ. ಶನಿವಾರ ಸಂಜೆ 4 ಕ್ಕೆ ವನ್ಯಜೀವಿ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಉದ್ಘಾಟನೆ ಮಾಡಲಿದ್ದಾರೆ. ಶ್ರವಣ ಬೆಳಗೊಳದಲ್ಲಿ ನಡೆದ ಮಹಾಮಸ್ತಾಕಾಭಿಷೇಕ ಸಂದರ್ಭದಲ್ಲಿ ತೆಗೆದು ಪ್ರದರ್ಶಿಸಲ್ಪಟ್ಟ ಚಿತ್ರಗಳ ನೈಜ ನೋಟವನ್ನು ನೋಡಲು 3 ಡಿ ಕನ್ನಡಕಗಳ ವ್ಯವಸ್ಥೆಯೊಂದಿಗೆ ಪ್ರದರ್ಶನ ಇರಲಿದೆ. ಅ.14 ರಿಂದ 25 ರವರೆಗೆ ಪ್ರದರ್ಶನ ಇರಲಿದ್ದು, ಹೆಚ್ಚಿನ ಮಂದಿ ಆಗಮಿಸಬೇಕೆಂದು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9481046324, 7760103342 ಸಂಪರ್ಕಿಸಬಹುದಾಗಿದೆ.