ಚಾಮರಾಜನಗರ : ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ವಿವಿಧ ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಜು.21 ರಂದು ನಗರದ ಜೋಡಿ ರಸ್ತೆಯ ರೋಟರಿ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪುರಸ್ಕøತರಿಗೆ ಪ್ರದಾನ ಮಾಡಲಾಗುವುದು.
ಚಾಮರಾಜನಗರದ ವಿದ್ಯುತ್ ಗುತ್ತಿಗೆದಾರರಾದ ಹೊಸೂರು ಜಗದೀಶ್ರವರು ತಮ್ಮ ತಂದೆಯ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ದಿ.ಸಿದ್ದಲಿಂಗದೇವರು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲಾ ಟಿವಿ 9 ವಿಡೀಯೋ ಜರ್ನಲಿಸ್ಟ್ ಎ.ಆರ್. ಸಂಜಯ್ಕುಮಾರ್ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ಪಟ್ಟಣದ ರಾಮಸಮುದ್ರ ಬಡಾವಣೆಯ ಪುಟ್ಟಮಲ್ಲಪ್ಪರವರು ತಮ್ಮ ತಂದೆಯವರ ನೆನಪಿನಾರ್ಥಕವಾಗಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ನೀಡಲಾಗುವ ಮಾಜಿ ಎಂಎಲ್ಸಿ ದಿ.ಆರ್.ಪಿ.ರೇವಣ್ಣ ದತ್ತಿ ಪ್ರಶಸ್ತಿಗೆ ಚಾಮರಾಜನಗರ ದೂರದರ್ಶನದ ನ್ಯೂಸ್ನ ಜಿಲ್ಲಾ ವರದಿಗಾರ ಗೂಳೀಪುರ ನಂದೀಶ್ ಎಂ ರವರ ದೂರದರ್ಶನದ ಚಂದನ ವಾಹಿನಿಯ ಎಸ್ಬಿಐ ಸುದ್ದಿ ಸೌರಭದಲ್ಲಿ ಬಿತ್ತರಗೊಂಡ ಬಾಳೆ ಮೌಲ್ಯವರ್ಧನೆಯಲ್ಲಿ ಉಮ್ಮತ್ತೂರಿನ ಪ್ರಗತಿಪರ ರೈತ ಮಹಿಳೆ ಶ್ರೀಮತಿ ವರ್ಷರವರ ಸಾಧನೆ’ ಕುರಿತ ವಿಶೇಷ ಕೃಷಿ ವರದಿ ಆಯ್ಕೆಯಾಗಿದೆ. ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶಕುಮಾರ್ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ನೀಡಲಾಗುವ ದಿ.ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲಾ ಪಬ್ಲಿಕ್ ಟಿವಿ ವರದಿಗಾರ ಎಸ್.ಎನ್. ವಿಜಯಕುಮಾರ್ ಅವರ
ವಾಲೆ ಮಾದಮ್ಮ’ ಎಂಬ ಅತ್ಯುತ್ತಮ ವಿಶೇಷ ಮಾನವೀಯ ವರದಿ ಆಯ್ಕೆಯಾಗಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಿ ವಿಶೇಷ ದತ್ತಿ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತಿದ್ದು, ಈ ಬಾರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎಂ ಗಣೇಶ್ಪ್ರಸಾದ್ರವರು ತಮ್ಮ ತಂದೆಯವರ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ದತ್ತಿ ಪ್ರಶಸ್ತಿಗೆ ಗುಂಡ್ಲುಪೇಟೆಯ ಪ್ರಜಾನುಡಿ ವರದಿಗಾರ ಎನ್. ರಾಜೇಶಭಟ್, ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಸುಗಮ ಸಂಗೀತ ಕಲಾವಿದ ಮಾಂಬಳ್ಳಿ ಎಚ್.ಫಲ್ಗುಣರವರು ತಮ್ಮ ತಂದೆ-ತಾಯಿಯವರ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ಮಾಂಬಳ್ಳಿ ಎನ್.ಹೊಂಬಾಳಯ್ಯ ಮತ್ತು ಪುಟ್ಟನಂಜಮ್ಮ ದತ್ತಿ ಪ್ರಶಸ್ತಿಗೆ ಯಳಂದೂರು ತಾಲ್ಲೂಕು ರೇಷ್ಮೆನಾಡು ವರದಿಗಾರ ಯರಿಯೂರು ಎನ್. ನಾಗೇಂದ್ರ ಆಯ್ಕೆಯಾಗಿದ್ದಾರೆ.
ಪ್ರಥಮದರ್ಜೆ ಗುತ್ತಿಗೆದಾರರಾದ ಕಾಗಲವಾಡಿ ಮಹದೇವಸ್ವಾಮಿರವರು ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಸ್ಥಾಪಿಸಿರುವ ಯಜಮಾನ್ ಟಿ.ಮಹದೇವಯ್ಯ-ಎಂ.ಎಸ್.ಸೀತಮ್ಮ ದಂಪತಿಗಳ ದತ್ತಿ ಪ್ರಶಸ್ತಿಗೆ ಹನೂರು ತಾಲ್ಲೂಕಿನ ಪ್ರಜಾವಾಣಿ ವರದಿಗಾರರಾದ ಬಸವರಾಜು, ಮಾಜಿ ಸಚಿವ ಎನ್.ಮಹೇಶ್ ತಮ್ಮ ಧರ್ಮಪತ್ನಿ ಖ್ಯಾತ ಲೇಖಕಿ ದಿ. ಹೆಚ್.ಕೆ. ವಿಜಯಾ ರವರ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ಖ್ಯಾತ ಲೇಖಕಿ ಸಾಹಿತಿ ಹೆಚ್.ಕೆ ದಿ. ವಿಜಯಾ ದತ್ತಿ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲೆಯ ಆಂದೋಲನ ವರದಿಗಾರ ಬದನಗುಪ್ಪೆ ಪ್ರಸಾದ್, ಯಳಂದೂರು ಪಟ್ಟಣದ ಅಶ್ವಿನಿ ಆಸ್ಪತ್ರೆಯ ಮಾಲೀಕರಾದ ಡಾ.ಶಶಿಕಲಾರಮೇಶ್-ಡಾ.ರಮೇಶ್ಉಡುಪ ದಂಪತಿಗಳು ಸ್ಥಾಪಿಸಿರುವ ಅಶ್ವಿನಿ ಆಸ್ಪತ್ರೆ ದತ್ತಿ ಪ್ರಶಸ್ತಿಗೆ ಯಳಂದೂರು ತಾಲ್ಲೂಕು ವಿಜಯವಾಣಿ ವರದಿಗಾರ ಡಿ.ಪಿ.ಮಹೇಶ್ ಆಯ್ಕೆಯಾಗಿದ್ದಾರೆ.
ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜುರವರು ತಮ್ಮ ತಂದೆ ತಾಯಿಯವರ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ಮದ್ದೂರು ಎಸ್.ವಿ. ಲಕ್ಷಮ್ಮ-ಎಂ.ಸಂಜೀವಯ್ಯ ದಂಪತಿಗಳ ದತ್ತಿ ಸ್ಮಾರಕ ಪ್ರಶಸ್ತಿಗೆ ಕೊಳ್ಳೇಗಾಲ ತಾಲ್ಲೂಕು ಪ್ರಜಾನುಡಿ ವರದಿಗಾರ ಸತ್ತೇಗಾಲ ಎಸ್. ರಾಜಶೇಖರ್, ಯಳಂದೂರು ತಾಲ್ಲೂಕಿನ ವಡಗೆರೆ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಮೈಸೂರು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಎ. ಕುಮಾರ್ ತಮ್ಮ ತಾತನ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ವಡಗೆರೆ ದಿ. ಪಟೇಲ್ಚಾಮೇಗೌಡ ಸ್ಮಾರಕ ದತ್ತಿ ಪ್ರಶಸ್ತಿಗೆ ಹನೂರು ತಾಲ್ಲೂಕಿನ ಮೈಸೂರುಮಿತ್ರ ವರದಿಗಾರ ಸೋಮಶೇಖರ್ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ಜಿಲ್ಲಾ ಜನಪರ ದಿನಪತ್ರಿಕೆ ರೇಷ್ಮೆನಾಡು ಸಂಪಾದಕಿ ಸವಿತಾಜಯಂತ್ ತಮ್ಮ ತಂದೆಯವರ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ರೇಷ್ಮೆನಾಡು ಸಂಸ್ಥಾಪಕ ಸಂಪಾದಕರಾದ ದಿ.ಸದಾಶಿವಗಟ್ಟವಾಡಿಪುರ ದತ್ತಿ ಪ್ರಶಸ್ತಿಗೆ ಆಂದೋಲನ ದಿನಪತ್ರಿಕೆ ವಿತರಕರಾದ ಎಲ್. ಶಿವಲಿಂಗಮೂರ್ತಿ, ಸಂತೇಮರಹಳ್ಳಿ ಗ್ರಾಮದ ಎಂ.ಪಿ. ಮಾದಪ್ಪರವರು ತಮ್ಮ ತಂದೆ-ತಾಯಿಯವರ ಸ್ಮರಣಾರ್ಥಕವಾಗಿ ಸ್ಥಾಪಿಸಿರುವ ದಿ.ರೇವಮ್ಮ ಹೊಸಹಟ್ಟಿ ಪುಟ್ಟಸುಬ್ಬಪ್ಪ ಸ್ಮಾರಕ ಪ್ರಶಸ್ತಿಗೆ ಗುಂಡ್ಲುಪೇಟೆ ತಾಲ್ಲೂಕಿನ ಮೈಸೂರುಮಿತ್ರ ವರದಿಗಾರ ಸೋಮಶೇಖರ್, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರು ತಮ್ಮ ತಂದೆ-ತಾಯಿಯವರ ಹೆಸರಿನಲ್ಲಿ ಸ್ಥಾಪಿಸಿರುವ ಶ್ರೀಮತಿ ಗೌರಮ್ಮ-ಬಿ.ರಾಚಯ್ಯ ಎಜುಕೇಷನಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಕೊಳ್ಳೇಗಾಲ ಟೌನಿನ ನಿಂಪುವಾರ್ತೆ ಪತ್ರಿಕೆಯ ಸಂಪಾದಕರಾದ ನಿಂಪುರಾಜೇಶ್ ಆಯ್ಕೆಯಾಗಿದ್ಧಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕೂರು ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.