ಮೈಸೂರು. ವಾಯ್ಸ್ ಆಫ್ ಪೀಪಲ್ ಎನ್.ಜಿ.ಓ ಸಂಸ್ಥೆಯ ಉದ್ಘಾಟನಾ ಸಂಮಾರಂಭವನ್ನು ಇದೆ ಆಗಸ್ಟ್ 27ರಂದು ವಿಜಯನಗರ ರೈಲ್ವೆ ಬಡಾವಣೆಯ ಕಾರ್ಪೊರೇಷನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಕಾನೂನು ಸಲಹೆಗಾರ ಪ್ರದೀಪ್ ಬಿಡ್ಡನ್ ತಿಳಿಸಿದರು.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನೆಡೆಸಿ ಮಾತನಾಡಿದ ಅವರು ವಾಯ್ಸ್ ಆಫ್ ಪೀಪಲ್ ಸಂಸ್ಥೆ ಉದ್ಘಾಟನೆಯನ್ನು ಶಾಸಕ ಹರೀಶ್ ಗೌಡ ರವರು ಉದ್ಘಾಟಿಸಲಿದ್ದು ಇದೇ ವೇಳೆ ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಸಂಸ್ಥೆಯಿಂದ ಉಚಿತ ಬಿ.ಪಿ ಶುಗರ್ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಯಾವುದೆ ರಂಗದಲ್ಲಿ ಶೋಷಣೆಗೆ ಒಳಗಾದ ಜನರಿಗೆ ನ್ಯಾಯ ದೊರಕಿಸಿ ಕೊಡುವುದೆ ಈ ವಾಯ್ಸ್ ಆಫ್ ಸಂಸ್ಥೆ ಇದ್ದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷರಾದ ವಸಂತ್ ರಾಜ್ ಚವಾಣ್, ಉಪಾಧ್ಯಕ್ಷರಾಧ ಸುಜಯ್ ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ರಾಕೇಶ್ .ಪಿ ಖಜಾಂಚಿ ಮಧುಸುಧನ್ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಆರ್ ಉಪಸ್ಥಿತರಿದ್ದರು.