ಕೃಷಿ ಇಲಾಖೆಯ ಲೆಕ್ಕ ಸಹಾಯಕ ಚೇತನ್ ಕುಮಾರ್ ವಿರುದ್ಧ ಆರೋಪ
ಹನೂರು : ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಕ್ಕ ಸಹಾಯಕನೋರ್ವ ಆರ್.ಟಿ.ಐ ಕಾರ್ಯಕರ್ತನನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅಡ್ಡ ಗಟ್ಟಿ ಕೊಲೆ ಬೆದರಿಕೆ ಹಲ್ಲೆ ಮಾಡಲು ಮುಂದಾಗಿ ದಬ್ಬಾಳಿಕೆ ನಡೆಸಿರುವ ಘಟನೆ ಜರುಗಿದೆ.
ತಾಲೂಕಿನ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಲೆಕ್ಕ ಸಹಾಯಕನಾಗಿ ಕೆಲಸ ಮಾಡುತ್ತಿರುವ ಚೇತನ್ ಕುಮಾರ್ ದಬ್ಬಾಳಿಕೆ ನಡೆಸಿದ್ದು. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆರ್ಟಿಐ ಕಾರ್ಯಕರ್ತ ಅಪ್ಪಾಜಿ ಆಗ್ರಹಿಸಿದ್ದಾರೆ.
ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಲೆಕ್ಕ ಸಹಾಯಕ ನಾಗಿ ಕಾರ್ಯನಿರ್ವಹಿಸುತ್ತಿದ್ದ ಚೇತನ್ ಕುಮಾರ್ ನನ್ನು ರಾಮಪುರ ರೈತ ಸಂಪರ್ಕ ಕೇಂದ್ರಕ್ಕೆ ಲೆಕ್ಕ ಸಹಾಯಕ ಹುದ್ದೆಗೆ ವರ್ಗಾವಣೆ ಆದೇಶ ಮಾಡಿ ಕರ್ತವ್ಯಕ್ಕೆ ಹಾಜರು ಆಗುವಂತೆ ನಿಯೋಜನೆ ಮಾಡಲಾಗಿತ್ತು.
ಒಂದು ತಿಂಗಳು ಕಳೆದರು ಕರ್ತವ್ಯಕ್ಕೆ ಹಾಜರಾಗದೆ ಇಲಾಖೆಯ ನಿಯಮಾವಳಿಗಳನ್ನು ಲೆಕ್ಕಿಸದೆ ಹಲವಾರು ಗೊಂದಲಗಳನ್ನು ಸೃಷ್ಟಿ ಮಾಡಿ ಜನಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದ ಇನ್ನೂ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿಗಳು ಹಾಜರಾಗದ ಹಿನ್ನಲೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನಲೆ ನನ್ನ ವಿರುದ್ಧ ಪಿತೂರಿ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಲೊಕ್ಕನ ಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಅಡ್ಡ ಗಟ್ಟಿ ಕೊಲೆ ಬೆದರಿಕೆ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಪ್ಪಾಜಿ ಆಗ್ರಹಿಸಿದರು, ಗಲಾಟೆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಠಾಣೆಯಲ್ಲಿ ಸ್ಥಳೀಯರೊಂದಿಗೆ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.
ಇಲಾಖೆ ಗಳಲ್ಲಿ ಕಂಡು ಬರುವ ಅಕ್ರಮಗಳನ್ನು ಪ್ರಶ್ನೆ ಮಾಡಿರುವುದು ತಪ್ಪಾ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ ನನಗೆ ಏನಾದರು ತೊಂದರೆ ಉಂಟಾದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನೇರ ಹೊಣೆ ಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಬಾಕ್ಸ್ ಐಟಂ:-
ಕೃಷಿ ಇಲಾಖೆಯ ಗುತ್ತಿಗೆ ಆಧಾರದ ಮೇಲೆ ಲೆಕ್ಕ ಸಹಾಯಕರಾಗಿ ಕೆಲಸ ಮಾಡುತ್ತಿರುವ ಚೇತನ್ ಕುಮಾರ್ ಎಂಬಾತ ಆರ್ಟಿಐ ಕಾರ್ಯಕರ್ತ ಅಪ್ಪಾಜಿ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಂಭಂದಿಸಿದಂತೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೃಷಿ ಇಲಾಖೆಯಲ್ಲಿ ಚೇತನ್ ಕುಮಾರ್ ಲೆಕ್ಕ ಸಹಾಯಕನಾಗಿ ಕರ್ತವ್ಯ ಮಾಡುವಾಗ ಹಲವಾರು ಅಕ್ರಮ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿ ಅಕ್ರಮ ಎಸಗಿವುದರ ಬಗ್ಗೆ ಹಾಗೂ ಲೊಕ್ಕನಹಳ್ಳಿ ರೈತಸಂಪರ್ಕ ಕೇಂದ್ರದಿಂದ ರಾಮಪುರಕ್ಕೆ ವರ್ಗಾವಣೆ ಮಾಡಿ ಒಂದು ತಿಂಗಳ ಮೇಲಾದರೂ ಕರ್ತವ್ಯಕ್ಕೆ ಹಾಜರಾಗಿದೆ ಕಾನೂನು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಅಪ್ಪಾಜಿ ಆರೋಪ ಮಾಡಿದ್ದಾರೆ.
ಲೆಕ್ಕ ಸಹಾಯಕ ಚೇತನ್ ಕುಮಾರ್ ತಮ್ಮ ಕರ್ತವ್ಯದಲ್ಲಿ ಹಲವಾರು ದುರುಪಯೋಗ ಪ್ರಕರಣಗಳು ಸಂಬಂಧಿಸಿ ದಂತೆ ಕರ್ತವ್ಯದ ವೇಳೆ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ನಾನು ಅಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿರುವುಕ್ಕೆ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.