ಮೈಸೂರು: ಆನ್ ಲೈನ್ ಇಟೆಂಡರ್ ಮೂಲಕ ಆಹಾರ ಮೇಳದ ಮಳಿಗೆದಾರರ ಅರ್ಜಿ ಆಹ್ವಾನಿಸಲು ಮುಂದಾಗಿದ್ದಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ತನ್ನ ನಿರ್ಧಾರವನ್ನು ಹಿಂಪಡೆದಿದ್ದು, ಹಿಂದಿನಂತೆ ನೇರ ಅರ್ಜಿ ಸ್ವೀಕರಿಸಲು ಮುಂದಾಗಿದೆ.
ಈ ಕುರಿತು ಆಹಾರ ಮೇಳದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡು ಹೇಳಿದಿಷ್ಟು. ಇಲಾಖೆ ನೇರೆ ಅರ್ಜಿ ಆಹ್ವಾನಿಸಿರುವ ನಿರ್ಣಯ ಕೈಗೊಂಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಮಾತ್ರವಲ್ಲದೆ ಕಳೆದ ವರ್ಷ 30ಸಾವಿರ ಮುಂಗಡ ಡಿಡಿ ಕಟ್ಟಿಸಿಕೊಂಡಿದ್ದು, ಪ್ರತಿ ವರ್ಷ5 ಸಾವಿರ ಹೆಚ್ಚಳವನ್ನಷ್ಟೇ ಮಾಡುತ್ತಾ ಬರಲಾಗಿದೆ. ಹೀಗಾಗಿ ಈ ಬಾರಿಯೂ ಅದನ್ನೇ ಅನುಸರಿಸಬೇಕಿದೆ.
ಹಾಗೊಂದು ವೇಳೆ ಇಲಾಖೆ ಮುಂಗಡ ಡಿಡಿ 50 ಸಾವಿರ ಹೆಚ್ಚಳ ಮಾಡಿದರೆ ನಾವು ಸಹ ಬೆಲೆಯ ಹೆಚ್ಚಳ ಮಾಡಬೇಕಾದ ಅನಿವಾರ್ಯ ಸೃಷ್ಠಿಯಾಗಲಿದೆ. ಹೀಗಾಗಿ 35 ಸಾವಿರ ದರ ನಿಗಧಿ ಮಾಡುವಂತೆ ಈ ಮೂಲಕ ಮನವಿ ಮಾಡುತ್ತೇವೆ.
ಜತೆಗೆ ಅ.15 ರಿಂದ 22ರವರೆಗೆ ಆಹಾರ ಮೇಳ ಆಯೋಜಿಸಲು ತೀರ್ಮಾನಿಸಿದೆ. ಆದರೆ, ಬೇಡಿಕೆ ಹೆಚ್ಚಿರುವ ಕಾರಣ ಹೆಚ್ಚುವರಿ ಎರಡು ದಿನಗಳನ್ನು ಘೋಷಣೆ ಮಾಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ.ಪ್ರಧಾನ ಕಾರ್ಯದರ್ಶಿ ಕಂಸಾಳೆ ರವಿ, ಸಮಿತಿ ಸದಸ್ಯರಾದ ಭಾಸ್ಕರ್, ಶಾಂತಮ್ಮ ಇನ್ನಿತರರು ಉಪಸ್ಥಿತರಿದ್ದರು.
ಆಹಾರ ಮೇಳ ಇಟೆಂಡರ್ ಪದ್ಧತಿ ಹಿಂಪಡೆದ ಇಲಾಖೆ
![](https://stateroute.in/wp-content/uploads/no-image.jpg)