ಚಾಮರಾಜನಗರ: ಇ-ಸ್ವತ್ತು ಮಾಡಿಕೊಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರಸಸಭೆ ಆರ್ ಐ ಲೋಕಾ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ನಗರಸಭೆಯಲ್ಲಿ ನಡೆದಿದೆ.
ಚಾಮರಾಜನಗರ ನಗರಸಭೆಯ ಕಂದಾಯ ನೀರಿಕ್ಷಿಕ ನಾರಾಯಣ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. ಮಾದೇಶ್ ಎಂಬವರ ನಿವೇಶನದ ಇ-ಸ್ವತ್ತು ಮಾಡಿಕೊಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇಂದು 20 ಸಾವಿರ ರೂ. ಹಣ ಪಡೆಯುವಾಗ ಲೋಕಾ ಪೊಲೀಸರು ರೆಡ್ ಹ್ಯಾಂಡಾಗಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ, ಲೋಕಾಯುಕ್ತ ಪೊಲೀಸರು ನಾರಾಯಣ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.