ಹನೂರು:- ತಾಲೂಕಿನ ಒಡೆಯರಪಾಳ್ಯದ ವೈರಿಂಗ್ ಬಾಬೂಜಿ ಯವರ 16 ವಯೋಮಾನದ ಫರಾನ್ ಕೌಳಿಹಳ್ಳ ಡ್ಯಾಂ ನಲ್ಲಿ ನಾಲ್ಕಾರು ಸ್ನೇಹಿತರೊಂದಿಗೆ ಈಜಲು ಹೋಗಿ ಈಜು ಬಾರದ ಕಾರಣ ಮುಳುಗಿ ಸಾವನ್ನಿಪ್ಪಿರುವ ಘಟನೆ ನಿನ್ನೆ ಮಧ್ಯಾಹ್ನ 12-30 ರಲ್ಲಿ ನಡೆದಿದೆ.ಈತನೊಂದಿಗಿದ್ದ ನಾಲ್ವರು ಸ್ನೇಹಿತರು ಹೆದರಿ ಕಾಡಿಗೆ ಪಲಾಯನ ಗೈದಿದ್ದರು ಅವರನ್ನು ಹುಡುಕಿ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ ಮೃತ ಬಾಲಕ ಈಜು ಕಲಿಯಲು ರಬ್ಬರ್ ಟ್ಯೂಬ್ ಕಟ್ಟಿಕೊಂಡಿದ್ದನಾದರೂ ಅದು ಪಂಕ್ಚರ್ ಆದ ಕಾರಣ ಮುಳುಗಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ ಸದರಿ ಡ್ಯಾಂ ಪಿ.ಜಿ.ಪಾಳ್ಯ ವನ್ಯಜೀವಿ ವಲಯಕ್ಕೆ ಸೇರಿದ್ದಾಗಿದ್ದು ಇಷ್ಟೆಲ್ಲಾ ಅವಘಡ ಸಂಭವಿಸುವ ತನಕ ಅಲ್ಲಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯವರು ಏನು ಮಾಡುತ್ತಿದ್ದರು ಎನ್ನುವುದು ಗಮನಾರ್ಹ ಈ ಡ್ಯಾಂನ ಕೂಗಳತೆ ದೂರದಲ್ಲಿಯೇ ಕಳ್ಳ ಬೇಟೆ ತಡೆ ಶಿಬಿರವೂ ಇದ್ದರೂ ಗಮನಿಸದಿರುವುದು ಅಲ್ಲಿ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದಾರೊ ಇಲ್ಲವೋ ಎಂಬ ಅನುಮಾನಕ್ಕೂ ಕಾರಣವಾಗಿದೆ ಇದು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಹುಡುಗ ಪ್ರಾಣ ಕಳೆದು ಕೊಂಡಿದನೆಯೆ ಎಂಬುದು ಯಕ್ಷ ಪ್ರಶ್ನೆ ಆಗಿದೆ ಮೃತ ಬಾಲಕನ ಹೆಸರು ಫರಾನ್ 16 ವರ್ಷ ಎಂದು ಗುರುತಿಸಲಾಗಿದ್ದು ಶವಕ್ಕಾಗಿ ಇನ್ನೂ ಶೋಧ ಮುಂದುವರೆದಿದ್ದು ಸಿಕ್ಕಿಲ್ಲ.