ನಂಜನಗೂಡು ನಗರಸಭೆಯಲ್ಲಿ ಕರೆಂಟ್ ಇಲ್ಲದೆ ಕೆಲಸಗಳು ಸ್ಥಗಿತಗೊಂಡಿದೆ ಅಧಿಕಾರಿಗಳು ಕೆಲಸ ಮಾಡದೆ ಮಾತುಕತೆಯಲ್ಲಿ ತಲ್ಲೀನರಾಗಿದ್ದಾರೆ.
ನಗರಸಭೆಯಲ್ಲಿರುವ ಡೀಸೆಲ್ ಜ ನ್ ರೇಟರ್ ಖರೀದಿ ಮಾಡಿ ಹಾಕಿರೋದು ಅಷ್ಟೇ ಉಪಯೋಗ ಒಂದು ದಿನವೂ ಇಲ್ಲ ಅದನ್ನು ಉಪಯೋಗಿಸದೆ ಕರೆಂಟ್ ಹೋದ ನಂತರ ಕರೆಂಟ್ ಬರುವ ತನಕ ಯಾವುದೇ ಕೆಲಸ ನಡೆಯುತ್ತಿಲ್ಲ ಇದನ್ನು ಉಪಯೋಗಿಸದೆ ಕುಂಟು ನೆಪ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿದರು ಕೂಡ ಇನ್ನೂ ಕೂಡ ನಗರಸಭೆ ಗ್ರಾಮ ಪಂಚಾಯಿತಿಗಿಂತ ಕಡೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಕರೆಂಟ್ ಹೋದರೆ ಸಾಕು ಎಲ್ಲಾ ಅಧಿಕಾರಿಗಳು ಟೀ ಅಂಗಡಿ ಕಡೆ ಮುಖ ಮಾಡುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಕೇಳಿದಾಗ ರೆಡಿ ಆಗುತಿದೆ ಈಗ ಬರುತ್ತಾರೆ ನಾಳೆ ಬರುತ್ತಾರೆ ಎಂದು ಹೇಳಿಕೊಂಡು ಕೆಲಸಗಳು ಆಗದೆ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗಿದೆ ಮುಂದಾದರೂ ಇದನ್ನು ರಿಪೇರಿ ಮಾಡಿ ಸಾರ್ವಜನಿಕರ ಕೆಲಸ ಆಗುವುದೇ ಎಂಬುದೇ ಪ್ರಶ್ನೆಯಾಗಿ ಉಳಿದಿದೆ