ಕಿರುತೆರೆಯ ಬ್ಯೂಟಿ ಕ್ವೀನ್ ಮೇಘಾ ಶೆಟ್ಟಿ ಈಗ ಹಿರಿತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಅದಕ್ಕಾಗಿ ಹೊಸ ಬಗೆಯ ಲುಕ್ನಲ್ಲಿ ಆಗಾಗ ಮಿಂಚುತ್ತಾರೆ. ಈಗ ಕರ್ಲಿ ಹೇರ್ ಸ್ಟೈಲ್ನಲ್ಲಿ ಗ್ಲ್ಯಾಮರ್ ಗೊಂಬೆಯಂತೆ ಜೊತೆ ಜೊತೆಯಲಿ ನಟಿ ಕಂಗೊಳಿಸಿದ್ದಾರೆ.
ಕಪ್ಪು ಬಣ್ಣದ ಉಡುಗೆಯಲ್ಲಿ ಸ್ಟೈಲೀಶ್ ಲುಕ್ನಲ್ಲಿ ಮೇಘಾ ಮಿಂಚಿದ್ದಾರೆ. ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಧರಿಸಿ, ಕ್ಯಾಮೆರಾ ಕಣ್ಣಿಗೆ ಸ್ಟೈಲ್ ಆಗಿ ಪೆÇೀಸ್ ನೀಡಿದ್ದಾರೆ. ಗ್ಲ್ಯಾಮರ್ ಡಾಲ್ನಂತೆ ಕಾಣ್ತಿರೋ ಮೇಘಾ ನೋಡಿ ಪಡ್ಡೆ ಹುಡುಗರು ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೆÇೀಟೋ ಸಖತ್ ವೈರಲ್ ಆಗುತ್ತಿದೆ.
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಅನು ಸಿರಿಮನೆಯಾಗಿ ಬಣ್ಣ ಹಚ್ಚಿದ ಕರಾವಳಿ ಬ್ಯೂಟಿ ಮೇಘಾ ಶೆಟ್ಟಿ ಈಗ ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮಿಂಚಿ, ಜಯಿಸಬೇಕು ಅಂತಾ ಹೊಸ ಬಗೆಯ ಪಾತ್ರಗಳ ಅನ್ವೇಷಣೆಯಲ್ಲಿದ್ದಾರೆ.
ಆಪರೇಷನ್ ಲಂಡನ್ ಕೆಫೆ ಕೈವ, ಸಿನಿಮಾಗಳು ಮೇಘಾ ಶೆಟ್ಟಿ ಕೈಯಲ್ಲಿವೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಸಿನಿಮಾ ಮಾಡಿ ನಟಿ ಮೆಚ್ಚುಗೆ ಗಳಿಸಿದ್ದಾರೆ.