ನಂಜನಗೂಡು: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಡಾಕ್ಟರ್ ರಾಜಕುಮಾರ್ ಪುನೀತ್ ರಾಜಕುಮಾರ್ ಫೋಟೋಗಳು ಮೆರವಣಿಗೆಯಲ್ಲಿ ರಾಜಾಜಿಸಿದವು. ಅನೇಕ ಸಂಘಟನೆಗಳಿಂದ ಮೆರವಣಿಗೆ ಮತ್ತು ಪ್ರತಿಭಟನೆ ನಂಜನಗೂಡು ಅನೇಕ ರೈತ ಸಂಘಟನೆಗಳು ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಂಘಗಳು ಸೇರಿದಂತೆ ಇತರ ಸಂಘಗಳು ಒಳಗೊಂಡು ರಾಜ್ಯದ ಅಣೆಕಟ್ಟೆಗಳ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ನಿಲುವನ್ನು ಖಂಡಿಸಿ ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು
ಕಾವೇರಿ ನೀರಿಗಾಗಿ ಸಂಘಟನೆಗಳಿಂದ ಅಂಗಡಿ ಮುಂಗಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸುವಂತೆ ತಿಳಿಸಿದರು ಅದರಂತೆ ಇಂದು ಎಲ್ಲಾ ಅಂಗಡಿ ಹೋಟೆಲ್ ಶಾಲೆ ಕಾಲೇಜುಗಳು ಫಿಲಂ ಟಾಕೀಸ್ ಸೇರಿದಂತೆ ಎಲ್ಲಾ ಸಂಪೂರ್ಣ ಬಂದ್ ಮಾಡಿ ಕಾವೇರಿ ನೀರಿಗಾಗಿ ಬೆಂಬಲ ಸೂಚಿಸಿದ್ದಾರೆ
ಬೆಳಗ್ಗೆಯಿಂದಲೇ ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಿ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು
ಈ ಸಂದರ್ಭದಲ್ಲಿ ಸಂಘಟನೆ ಗಾರರು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ವಿರುದ್ಧ ಸಂಸದರು ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಧಿಕ್ಕಾರ ಹೋಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ನೆನ್ನೆಯಿಂದಲೆ ನಂಜನಗೂಡು ಪಟ್ಟಣ ಎಲ್ಲಾ ಕಡೆ ಪೊಲೀಸ್ ಬಂದು ಬಸ್ ವ್ಯವಸ್ಥೆ ಮಾಡಲಾಗಿತ್ತು ಪ್ರತಿಭಟನೆ ಸಂದರ್ಭದಲ್ಲೂ ಕೂಡ ಸರ್ಪ ಕಾವಲು ಪೊಲೀಸ್ ಇಲಾಖೆಯಿಂದ ಯಾವುದೇ ರೀತಿ ಆಯಿತಾ ಕರ ಘಟನೆ ನಡೆದಂತೆ ಎಚ್ಚರಿಕೆ ವಹಿಸಿದ್ದರು ಕಪಿಲಾ ನದಿ ಹತ್ತಿರ ಪೊಲೀಸ್ ಬಂದು ಬಸ್ ಮಾಡಲಾಗಿತ್ತು
ಪ್ರತಿಭಟನಾಕಾರರು ಆರ್ ಪಿ ರಸ್ತೆ ಎಂಜಿಎಸ್ ರಸ್ತೆ ಹುಲ್ಲಳ್ಳಿ ಸರ್ಕಲ್ ಈ ರೀತಿ ಹಲವಾರು ರಸ್ತೆಗಳಲ್ಲಿ ಪಾದಯಾತ್ರೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಸರ್ಕಾರಗಳ ವಿರುದ್ಧ ಧಿಕ್ಕಾರ ಹೋಗಿದರು.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಡಾಕ್ಟರ್ ರಾಜಕುಮಾರ್ ಪುನೀತ್ ರಾಜಕುಮಾರ್ ಇವರ ಭಾವಚಿತ್ರಗಳು ಹಿಡಿದುಕೊಂಡು ಪ್ರತಿಭಟನೆ ನಡೆಸುವುದು ಕಂಡುಬಂತು ಒಟ್ಟಾರೆ ಕಾವೇರಿ ನೀರಿಗಾಗಿ ಕರ್ನಾಟಕ ಬಂಧುಗೆ ನಂಜನಗೂಡು ಜನತೆ ಉತ್ತಮ ಬೆಂಬಲ ನೀಡಿ ಕಾವೇರಿಗಾಗಿ ಹೋರಾಟಕ್ಕೆ ಬೆಂಬಲಿಸಿದರು
ಪ್ರತಿಭಟನೆಯಲ್ಲಿ ಮಹೇಂದ್ರ ಮಂಜು ವಿನಯ್ ಹೇಮಂತ ಕುಮಾರ್ ಸುಪ್ರೀಂ ನಿರಂಜನ್ ಗಣೇಶ್ ಮೋಹನ್ ದೀಪು ಸೇರಿದಂತೆ ಇತರರು ಇದ್ದರು