ಮಂಡ್ಯ: ಸೋಮವಾರ ಮಡಿಕೆರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾದ ಕಾರಣ, ಪ್ರಸಕ್ತ ವರ್ಷದಲ್ಲಿ ಕೆಆರ್ಎಸ್ ಡ್ಯಾಂಗೆ ಮೊದಲ ಬಾರಿಗೆ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಮಳೆ ಕೈಕೊಟ್ಟ ಹಿನ್ನೆಲೆ ಡ್ಯಾಂನ ಒಳಹರಿವು ಕುಗ್ಗಿತ್ತು. ಈ ಸಂದರ್ಭದಲ್ಲಿ ನಿನ್ನೆ ಕೊಡಗಿನಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿತ್ತು. ಹೀಗಾಗಿ ಇಂದು ಕೆಆರ್ಎಸ್ ಡ್ಯಾಂಗೆ 1,151 ಕ್ಯೂಸೆಕ್ ನೀರು ಬಿಡಲಾಗಿದೆ.
2023ರಲ್ಲಿ ಇದೇ ಮೊದಲ ಬಾರಿಗೆ ಒಳಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ ದಾಟಿದೆ. ಕಳೆದ ವರ್ಷ ಈ ದಿನ ಡ್ಯಾಂಗೆ 22,467 ಕ್ಯೂಸೆಕ್ ಒಳಹರಿವು ಇತ್ತು.